For Quick Alerts
  ALLOW NOTIFICATIONS  
  For Daily Alerts

  50 ಸಾವಿರ ಟಿಕೆಟ್ಸ್ ಮಾರಾಟ: 'ಬ್ರಹ್ಮಾಸ್ತ್ರ'ದ ಮೇಲೆ ಬಾಲಿವುಡ್‌ಗೆ ಅಚಲ ವಿಶ್ವಾಸ!

  |

  ಇಡೀ ಬಾಲಿವುಡ್ 'ಬ್ರಹ್ಮಾಸ್ತ್ರ'ಕ್ಕಾಗಿ ಎದುರು ನೋಡುತ್ತಿದೆ. ಸೆಪ್ಟೆಂಬರ್ 9ಕ್ಕೆ ವಿಶ್ವದಾದ್ಯಂತ 8 ಸಾವಿರ ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗ್ತಿದ್ದು, ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಪ್ರೇಕ್ಷಕರು ಸಿನಿಮಾ ನೋಡಲು ಕಾತರದಿಂದ ಕಾಯ್ತಿದ್ದು, ಟಿಕೆಟ್ ಬುಕ್ಕಿಂಗ್ ಜೋರಾಗಿದೆ. ಇದು ಸಹಜವಾಗಿಯೇ ಬಿಟೌನ್‌ಗೆ ಹೊಸ ಹುರುಪು ತಂದಿದೆ.

  ಅಯಾನ್ ಮುಖರ್ಜಿ ನಿರ್ದೇಶನದ ಫ್ಯಾಂಟಸಿ ಅಡ್ವೆಂಚರ್‌ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ರಣ್‌ಬೀರ್ ಕಪೂರ್, ಆಲಿಯಾ ಭಟ್ ಲೀಡ್‌ ರೋಲ್‌ಗಳಲ್ಲಿ ಬಣ್ಣ ಹಚ್ಚಿದ್ದಾರೆ. ಬಿಗ್‌ಬಿ ಅಮಿತಾಬ್ ಬಚ್ಚನ್, ನಾಗಾರ್ಜುನ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಈಗಾಗಲೇ ಚಿತ್ರದ ಸ್ಯಾಂಪಲ್ಸ್ ರಿಲೀಸ್ ಆಗಿ ಗಮನ ಸೆಳೆದಿದೆ. ಸ್ವತಃ ನಟ ರಣ್‌ಬೀರ್ ಕಪೂರ್ ಹಾಗೂ ನಿರ್ದೇಶಕ ಅಯಾನ್ ಮುಖರ್ಜಿ ಜೊತೆಗೆ ಕರಣ್ ಜೋಹರ್, ಅಪೂರ್ವ ಮೆಹ್ತಾ, ನಮಿತ್ ಮಲ್ಹೋತ್ರಾ, ಮರೀಜ್ ಕೆ ಡಿಸೋಜಾ ಈ ಬಹುಕೋಟಿ ವೆಚ್ಚದ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಪ್ರೀತಮ್ ಸಂಗೀತ, ಮಣಿಕಂಠನ್, ಪಂಕಜ್ ಕುಮಾರ್ ಹಾಗೂ ಸುದೀಪ್ ಚಟರ್ಜಿ ಛಾಯಾಗ್ರಹಣ ಚಿತ್ರಕ್ಕಿದೆ.

  ಸತತ ಸೋಲುಗಳಿಂದ ಕಂಗೆಟ್ಟಿರುವ ಬಾಲಿವುಡ್‌ಗೆ ಒಂದೊಳ್ಳೆ ಸಕ್ಸಸ್ ಅನಿವಾರ್ಯತೆ ಇದೆ. 'ಬ್ರಹ್ಮಾಸ್ತ್ರ' ಸಿನಿಮಾ ಮೇಲೆ ಬರೀ ಪ್ರೇಕ್ಷಕರಿಗೆ ಮಾತ್ರವಲ್ಲ ಇಡೀ ಬಾಲಿವುಡ್‌ಗೆ ಭಾರೀ ನಿರೀಕ್ಷೆ ಇದೆ. ಸಿನಿಮಾ ಅಡ್ವಾನ್ಸ್‌ ಟಿಕೆಟ್ ಬುಕ್ಕಿಂಗ್‌ಗೆ ಸಿಕ್ತಿರೋ ರೆಸ್ಪಾನ್ಸ್ ನೋಡಿದ್ರೆ, ಒಳ್ಳೆ ಓಪನಿಂಗ್ ಸಿಗುವ ನಿರೀಕ್ಷೆ ಇದೆ. ಪ್ರೇಕ್ಷಕರು ಸಿನಿಮಾ ನೋಡಲು ಮನಸ್ಸು ಮಾಡಿರುವುದು ಗೊತ್ತಾಗುತ್ತಿದೆ.

  ಒಟ್ಟು 8 ಸಾವಿರ ಸ್ಕ್ರೀನ್‌ಗಳಲ್ಲಿ 'ಬ್ರಹ್ಮಾಸ್ತ್ರ'

  ಒಟ್ಟು 8 ಸಾವಿರ ಸ್ಕ್ರೀನ್‌ಗಳಲ್ಲಿ 'ಬ್ರಹ್ಮಾಸ್ತ್ರ'

  'ಬ್ರಹ್ಮಾಸ್ತ್ರ' ಚಿತ್ರವನ್ನು ವಿಶ್ವದಾದ್ಯಂತ ಬಹಳ ದೊಡ್ಡಮಟ್ಟದಲ್ಲಿ ರಿಲೀಸ್ ಮಾಡುವ ಕಸರತ್ತು ನಡೀತಿದೆ. ಭಾರತದ 5000 ಸ್ಕ್ರೀನ್‌ಗಳು ಹಾಗೂ ಓವರ್‌ಸೀಸ್‌ನ 3000 ಸ್ಕ್ರೀನ್‌ಗಳು ಸೇರಿ ಒಟ್ಟು 8000 ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದೆ. ಬೇರೆ ಯಾವುದೇ ದೊಡ್ಡ ಸಿನಿಮಾಗಳ ಪೈಪೋಟಿ ಇಲ್ಲದೇ ಇರುವುದು ಪ್ಲಸ್ ಆಗ್ತಿದೆ. ಹಾಗಾಗಿ ದೊಡ್ಡಮಟ್ಟದ ಓಪನಿಂಗ್ ಸಿಗುವ ನಿರೀಕ್ಷೆ ದಟ್ಟವಾಗಿದೆ.

  80 ಸಾವಿರ ಟಿಕೆಟ್ಸ್ ಬುಕ್ ಆಗಿದೆ

  80 ಸಾವಿರ ಟಿಕೆಟ್ಸ್ ಬುಕ್ ಆಗಿದೆ

  ಆಯ್ದ ಥಿಯೇಟರ್‌ಗಳಲ್ಲಿ 'ಬ್ರಹ್ಮಾಸ್ತ್ರ' ಸಿನಿಮಾ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಈಗಾಗಲೇ 50 ಸಾವಿರಕ್ಕೂ ಅಧಿಕ ಟಿಕೆಟ್ಸ್ ಸೋಲ್ಡ್ಔಟ್ ಆಗಿದೆ. ಈ ಮೂಲಕ ಕೋಟಿ ಕೋಟಿ ಕಲೆಕ್ಷನ್ ಆಗ್ತಿದೆ. ಪಿವಿಆರ್‌, ಐನಾಕ್ಸ್, ಸಿನಿಪೊಲಿಸ್ ಮಲ್ಟಿಪ್ಲೆಕ್ಸ್‌ ಚೈನ್‌ನಲ್ಲಿ ಅಡ್ವಾನ್ಸ್‌ ಟಿಕೆಟ್ ಬುಕ್ಕಿಂಗ್ ಜೋರಾಗಿದ್ದು, ಮೊದಲ ದಿನವೇ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ. ಹಿಂದಿ ಮಾತ್ರವಲ್ಲದೇ ದಕ್ಷಿಣ ಭಾರತದ ಭಾಷೆಗಳಲ್ಲೂ ಸಿನಿಮಾ ಬಿಡುಗಡೆಯಾಗುತ್ತಿದೆ. 2D, 3D, ಐಮ್ಯಾಕ್ಸ್ 3D ವರ್ಷನ್‌ಗಳಲ್ಲಿ ಸಿನಿಮಾ ಬರ್ತಿರೋದು ಕುತೂಹಲ ಮೂಡಿಸಿದೆ.

  ಫಸ್ಟ್ ಡೇ 22 ಕೋಟಿ ರೂ. ಕಲೆಕ್ಷನ್?

  ಫಸ್ಟ್ ಡೇ 22 ಕೋಟಿ ರೂ. ಕಲೆಕ್ಷನ್?

  'ಬ್ರಹ್ಮಾಸ್ತ್ರ' ಸಿನಿಮಾ ಕ್ರೇಜ್ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ನೋಡುತ್ತಿದ್ದರೆ ಮೊದಲ ದಿನ ಸಿನಿಮಾ 20ರಿಂದ 22 ಕೋಟಿ ರೂ. ಕಲೆಕ್ಷನ್ ಮಾಡುವ ಲೆಕ್ಕಾಚಾರ ನಡೀತಿದೆ. ಕೊರೊನಾ ಹಾವಳಿ ನಂತರ ಯಾವುದೇ ದೊಡ್ಡ ಸಿನಿಮಾ ಬಾಲಿವುಡ್‌ನಲ್ಲಿ ಸದ್ದು ಮಾಡಲಿಲ್ಲ. ಭಾರೀ ನಿರೀಕ್ಷೆ ಮೂಡಿಸಿದ್ದ 'ಲಾಲ್‌ ಸಿಂಗ್ ಚಡ್ಡ', 'ಲೈಗರ್' ಸಿನಿಮಾಗಳು ಹೀನಾಯವಾಗಿ ಸೋತು ದೊಡ್ಡ ಪೆಟ್ಟು ಕೊಟ್ಟಿತ್ತು. ಹಾಗಾಗಿ 'ಬ್ರಹ್ಮಾಸ್ತ್ರ' ಸಿನಿಮಾ ಫಲಿತಾಂಶ ಏನಾಗುತ್ತೋ ಕಾದು ನೋಡಬೇಕು.

  'ಬ್ರಹ್ಮಾಸ್ತ್ರ' ಚಿತ್ರಕ್ಕೆ ರಾಜಮೌಳಿ ಬಲ

  'ಬ್ರಹ್ಮಾಸ್ತ್ರ' ಚಿತ್ರಕ್ಕೆ ರಾಜಮೌಳಿ ಬಲ

  ಯಾವುದೇ ಒಳ್ಳೆಯ ಸಿನಿಮಾ ಆದರೂ ರಾಜಮೌಳಿ ಬೆಂಬಲಿಸುತ್ತಾ ಬರ್ತಿದ್ದಾರೆ. ಈ ಹಿಂದೆ 'KGF'ಸಿನಿಮಾ ರಿಲೀಸ್‌ಗೂ ಮೊದಲೇ ಕೆಲ ದೃಶ್ಯಗಳನ್ನು ನೋಡಿ ಜಕ್ಕಣ್ಣ ಮೆಚ್ಚಿಕೊಂಡಿದ್ದರು. ಟಾಲಿವುಡ್‌ನಲ್ಲಿ ಸಿನಿಮಾ ಪ್ರಚಾರಕ್ಕೆ ಬೆಂಬಲವಾಗಿ ನಿಂತಿದ್ದರು. ಇದೀಗ 'ಬ್ರಹ್ಮಾಸ್ತ್ರ' ಮೌಳಿ ಅಭಯ ಇದೆ. ಕಳೆದ ಹಲವು ದಿನಗಳಿಂದ ಸಿನಿಮಾ ಪ್ರಮೋಷನ್‌ನಲ್ಲಿ ಭಾಗಿ ಆಗಿದ್ದಾರೆ. ಒಳ್ಳೆಯ ಸಿನಿಮಾವನ್ನು ನೋಡಿ ಗೆಲ್ಲಿಸಿ ಎಂದು ಮನವಿ ಮಾಡುತ್ತಿದ್ದಾರೆ. ಜ್ಯೂ. ಎನ್‌ಟಿಆರ್ ಕೂಡ ಇತ್ತೀಚೆಗೆ ಸಿನಿಮಾ ಸುದ್ದಿಗೋಷ್ಠಿಗೆ ಹಾಜರಾಗಿದ್ದರು.

  English summary
  Ranbir Kapoor Alia Bhat Starrer Brahmastra Advance Booking is Outstanding Day by Day. Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X