»   » ಕತ್ರೀನಾ-ರಣ್ಬೀರ್ ನಡುವೆ ಅಡ್ಡಗಾಲು ಇಟ್ಟ ನಿರ್ದೇಶಕ..!

ಕತ್ರೀನಾ-ರಣ್ಬೀರ್ ನಡುವೆ ಅಡ್ಡಗಾಲು ಇಟ್ಟ ನಿರ್ದೇಶಕ..!

Posted By:
Subscribe to Filmibeat Kannada

ರಣ್ಬೀರ್ ಕಪೂರ್ ಮತ್ತು ಕತ್ರೀನಾ ಕೈಫ್ ಬಾಲಿವುಡ್ ನ ಯುವ ಪ್ರೇಮ ಪಕ್ಷಿಗಳು ಅಂತ ಎಲ್ಲರಿಗೂ ಗೊತ್ತು. ಪ್ರೇಮದ ಅಮಲಿನಲ್ಲಿ ತೇಲುತ್ತಿರುವ ಈ ಜೋಡಿಯ ಪ್ರಣಯಕ್ಕೆ ಇದೀಗ ಅಡ್ಡಗಾಲು ಬಿದ್ದಿದೆ.

ಹಾಗೆ ಅಡ್ಡಗಾಲು ಹಾಕಿರುವವರು ಅವರ ಕುಟುಂಬದವರಲ್ಲ. ಅವರ ಸ್ನೇಹಿತರಂತೂ ಅಲ್ಲವೇ ಅಲ್ಲ. ಬದಲಾಗಿ ಕತ್ರೀನಾ ಕೈಫ್ ಗೆ ಆಕ್ಷನ್ ಕಟ್ ಹೇಳುತ್ತಿರುವ ನಿರ್ದೇಶಕ ಅಭಿಶೇಕ್ ಕಪೂರ್.

ಅಭಿಶೇಕ್ ಕಪೂರ್ ಗೂ, ಕತ್ರೀನಾ-ರಣ್ಬೀರ್ ಪ್ರಣಯಕ್ಕೂ ಎಲ್ಲಿಗೆಲ್ಲಿಯ ಸಂಬಂಧ ಅಂತ ನೀವು ಕೇಳಬಹುದು. ಅಸಲಿಗೆ 'ಫಿತೂರ್' ಚಿತ್ರದ ನಿರ್ದೇಶಕ ಈ ಅಭಿಶೇಕ್ ಕಪೂರ್. 'ಫಿತೂರ್' ಚಿತ್ರಕ್ಕೆ ಕತ್ರೀನಾ ಕೈಫ್ ನಾಯಕಿ.

Ranbir Kapoor banned from meeting Katrina Kaif on the sets of Fitoor

'ಫಿತೂರ್' ಚಿತ್ರವನ್ನ ಆದಷ್ಟು ಬೇಗ ತೆರೆಗೆ ತರಬೇಕು ಅಂತ ನಿರ್ಧರಿಸಿರುವ ಅಭಿಶೇಕ್, ಕಾಶ್ಮೀರದಲ್ಲಿ ತರಾತುರಿಯಲ್ಲಿ ಚಿತ್ರೀಕರಣ ನಡೆಸುತ್ತಿದ್ದಾರೆ. ಶೂಟಿಂಗ್ ಬಿಡುವಿನ ವೇಳೆ ರಣ್ಬೀರ್ ಜೊತೆ ಕಾಲ ಕಳೆಯುವ ಕ್ಯಾಟ್ ಗೆ ಅಭಿಶೇಕ್ ವಾರ್ನಿಂಗ್ ಕೊಟ್ಟಿದ್ದಾರೆ. [ತಾಳಿ ಕಟ್ಟುವ ಶುಭ ವೇಳೆಗೆ ರಣ್ಬೀರ್ ಕಪೂರ್ ರೆಡಿ]

''ಯಾವುದೇ ಕಾರಣಕ್ಕೂ ಶೂಟಿಂಗ್ ಕಂಪ್ಲೀಟ್ ಆಗುವವರೆಗೆ ಸ್ಪಾಟ್ ನಲ್ಲಿ ರಣ್ಬೀರ್ ಕಾಣಿಸಿಕೊಳ್ಳಬಾರದು. ಪರ್ಸನಲ್ ಲೈಫ್ ನ ಪಕ್ಕಕ್ಕೆ ಸರಿಸಿ ಶೂಟಿಂಗ್ ನಲ್ಲಿ ಸೀರಿಯಸ್ ಆಗಬೇಕು'' ಅಂತ ಅಭಿಶೇಕ್ ಕಡ್ಡಿ ತುಂಡು ಮಾಡಿದ ಹಾಗೆ ಕತ್ರೀನಾಗೆ ಹೇಳಿದ್ದಾರೆ. [ಲಂಡನ್ ನಲ್ಲಿ ಉಂಗುರ ಬದಲಾಯಿಸಿಕೊಂಡ ಕತ್ರೀನಾ-ರಣ್ಬೀರ್]

Ranbir Kapoor banned from meeting Katrina Kaif on the sets of Fitoor

ವಿದೇಶದಲ್ಲಿ ರಣ್ಬೀರ್ ಶೂಟಿಂಗ್ ನಡೆದರೂ ತಪ್ಪದೇ ಹಾಜರಾಗುತ್ತಿದ್ದ ಹುಡುಗಿ ಕತ್ರೀನಾ. ಹಾಗೆ, ಕತ್ರೀನಾ ಚಿತ್ರೀಕರಣ ಯಾವುದೇ ಮೂಲೆಯಲ್ಲಿ ನಡೆದರೂ, ರಣ್ಬೀರ್ ವಿಸಿಟ್ ಹಾಕುತ್ತಿದ್ದರು. ಶೂಟಿಂಗ್ ಸ್ಪಾಟ್ ನಲ್ಲಿ ಗಂಟೆಗಳ ಕಾಲ ಇಬ್ಬರು ಕಾಲ ಕಳೆಯುತ್ತಿದ್ದರು. [ಕತ್ರೀನಾ ಕೈಫ್ ಕಿವಿಕಚ್ಚಿದ ರಣ್ಬೀರ್ ಮಾಜಿ ಪ್ರೇಯಸಿ ದೀಪಿಕಾ]

ಆದ್ರೀಗ, ಇಬ್ಬರ ಪ್ರಣಯಕ್ಕೆ ಅಭಿಶೇಕ್ ಅಡ್ಡಿ ಪಡಿಸಿದ್ದಾರೆ. ಕಾಶ್ಮೀರದಲ್ಲಿ ನಡೆಯುವ ಅಷ್ಟೂ ದಿನಗಳ ಕಾಲ ರಣ್ಬೀರ್, ಕ್ಯಾಟ್ ಹತ್ತಿರ ಸುಳಿಯುವ ಹಾಗಿಲ್ಲ. ಪಾಪ...ಇಬ್ಬರು ಒಬ್ಬರನ್ನೊಬ್ಬರು ಎಷ್ಟು ಮಿಸ್ ಮಾಡಿಕೊಳ್ಳುತ್ತಾರೋ...ಏನೋ...

English summary
Lovebirds Ranbir Kapoor and Katrina Kaif, cant meet each other on the sets of Fitoor. It is reported that Abhishek Kapoor has asked Ranbir Kapoor not to visit Katrina Kaif in Kashmir to avoid distraction during the film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada