For Quick Alerts
  ALLOW NOTIFICATIONS  
  For Daily Alerts

  ಕೊನೆಗೂ ಪ್ರೀತಿ ವಿಚಾರ ಬಿಚ್ಚಿಟ್ಟ ನಟ ರಣ್ಬೀರ್ ಕಪೂರ್

  |

  ಬಾಲಿವುಡ್ ನ ಜೋಡಿ ಹಕ್ಕಿಗಳು ಅಂತನೇ ಕರೆಸಿಕೊಳ್ಳುತ್ತಿದ್ದ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಇಬ್ಬರು ತಮ್ಮ ಪ್ರೀತಿಯನ್ನು ಒಪ್ಪಿಕೊಂಡಿರಲಿಲ್ಲ. ಇಬ್ಬರ ಪ್ರೀತಿಯ ವಿಚಾರ ಆಗಾಗ ಸುದ್ದಿಯಾಗುತಲೇ ಇರುತ್ತೆ. ಆದರೂ ಈ ಜೋಡಿ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು.

  ಇದೀಗ ಮದುವೆ ಬಗ್ಗೆ ನಟ ರಣಬೀರ್ ಕಪೂರ್ ಬಾಯಿ ಬಿಟ್ಟಿದ್ದಾರೆ. 'ಅಲಿಯಾ ಭಟ್ ನನ್ನ ಗರ್ಲ್ ಫ್ರೆಂಡ್' ಎಂದು ರಣ್ಬೀರ್ ಕಪೂರ್ ಒಪ್ಪಿಕೊಂಡಿದ್ದಾರೆ. ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ರಣಬೀರ್ ಕಪೂರ್ ಪ್ರೀತಿಯ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ...

  'RRR' ಸಿನಿಮಾದ ಡೈಲಾಗ್ ಕಲಿಯಲು ಇಷ್ಟು ಸಮಯ ತೆಗೆದುಕೊಂಡಿದ್ರಾ ಅಲಿಯಾ ಭಟ್?

  ಲಾಕ್ ಡೌನ್ ನಲ್ಲಿ ಒಟ್ಟಿಗೆ ಸಮಯ ಕಳೆದಿದ್ದ ಜೋಡಿ

  ಲಾಕ್ ಡೌನ್ ನಲ್ಲಿ ಒಟ್ಟಿಗೆ ಸಮಯ ಕಳೆದಿದ್ದ ಜೋಡಿ

  ಲಾಕ್ ಡೌನ್ ಸಮಯದಲ್ಲಿ ಇಬ್ಬರು ಒಟ್ಟಿಗೆ ಸಿನಿಮಾ, ಟವಿ ಶೋಗಳನ್ನು ನೋಡುತ್ತಿದ್ದೆವು ಎಂದು ಹೇಳಿದ್ದಾರೆ. ನನ್ನ ಗರ್ಲ್ ಫ್ರೆಂಡ್ ಅಲಿಯಾ ಸಾಕಷ್ಟು ಆನ್ ಲೈನ್ ತರಗತಿಗಳನ್ನು ತೆಗೆದುಕೊಂಡಿದ್ದಾರೆ. ಗಿಟಾರ್, ಚಿತ್ರಕಥೆ ಬರೆಯುವುದು ಸೇರಿದಂತೆ ಅನೇಕ ತರಗತಿಗಳನ್ನು ತೆಗೆದುಕೊಂಡಿದ್ದಳು. ಆದರೆ ನಾನು ಯಾವಾಗಲೂ ಅವಳ ಪಕ್ಕದಲ್ಲಿ ಏನು ಸಾಧನೆ ಮಾಡದ ವ್ಯಕ್ತಿಯ ಹಾಗೆ ಕಾಣಿಸುತ್ತೇನೆ ಎಂದು ಹೇಳಿದ್ದಾರೆ.

  ಸದ್ಯದಲ್ಲೇ ಮದುವೆ ಎಂದ ರಣ್ಬೀರ್

  ಸದ್ಯದಲ್ಲೇ ಮದುವೆ ಎಂದ ರಣ್ಬೀರ್

  ಇನ್ನು ಶೀಘ್ರದಲ್ಲೇ ಮದುವೆ ಆಗುವ ಪ್ಲಾನ್ ಇದೆ ಎಂದು ಹೇಳುವ ಮೂಲಕ ಮುಂದಿನ ವರ್ಷ ಹಸೆಮಣೆ ಏರುವ ಬಗ್ಗೆ ಸುಳಿವು ನೀಡಿದ್ದಾರೆ. ರಣ್ಬೀರ್ ಮತ್ತು ಅಲಿಯಾ ಇಬ್ಬರೂ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ವಿದೇಶಿ ಪ್ರವಾಸ ಅಂತ ಆಗಾಗ ಜಾಲಿ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಈ ಜೋಡಿ ಗೋವಾ ಪ್ರವಾಸಮುಗಿಸಿ ವಾಪಸ್ ಆಗಿದ್ದಾರೆ.

  ಮದುವೆ ಯಾವಾಗ? ಆಲಿಯಾ ಭಟ್ ಕೊಟ್ಟರು ಉತ್ತರ

  ಮೊದಲ ಬಾರಿಗೆ ಪ್ರೀತಿ ವಿಚಾರ ಬಿಚ್ಚಿಟ್ಟ ರಣ್ಬೀರ್

  ಮೊದಲ ಬಾರಿಗೆ ಪ್ರೀತಿ ವಿಚಾರ ಬಿಚ್ಚಿಟ್ಟ ರಣ್ಬೀರ್

  ಲಾಕ್ ಡೌನ್ ಸಮಯದಲ್ಲಿ ಅಲಿಯಾ ಮತ್ತು ರಣಬೀರ್ ಇಬ್ಬರು ಒಟ್ಟಿಗೆ ಕಾಲಕಳೆದಿದ್ದಾರೆ. ಇಬ್ಬರ ನಡುವೆ ಸ್ನೇಹಕ್ಕಿಂತ ಮಿಗಿಲಾದ ಸಂಬಂಧವಿದೆ ಎಂಬುದು ಗೊತ್ತಿದ್ದರೂ, ತಮ್ಮ, ಸಂಬಂಧದ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ಆದರೀಗ ಮೊದಲ ಬಾರಿಗೆ ಪ್ರೀತಿ ವಿಚಾರ ಬಾಯಿ ಬಿಟ್ಟಿದ್ದಾರೆ. ಇತ್ತೀಚಿಗಷ್ಟೆ ಅಲಿಯಾ ಹೊಸ ಮನೆ ಖರೀದಿ ಮಾಡಿ ಸುದ್ದಿಯಾಗಿದ್ದರು.

  ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್ ಆದ ರಾಗಿಣಿ | Ragini Hospitalised | Filmibeat Kannada
  32 ಕೋಟಿ ರೂ. ಮನೆ ಖರೀದಿ ಮಾಡಿರುವ ಅಲಿಯಾ

  32 ಕೋಟಿ ರೂ. ಮನೆ ಖರೀದಿ ಮಾಡಿರುವ ಅಲಿಯಾ

  32 ಕೋಟಿ ರೂ. ಬೆಲೆಬಾಳುವ ಮನೆಯನ್ನು ರಣ್ಬೀರ್ ಕಪೂರ್ ಇರುವ ಅಪಾರ್ಟ್ಮೆಂಟ್ ನ ಬಿಲ್ಡಿಂಗ್ ನಲ್ಲಿಯೇ ಖರೀದಿಸಿದ್ದಾರೆ. ಸದ್ಯ ಇಬ್ಬರು ಬ್ರಹ್ಮಾಸ್ತ್ರ್ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ರಿಲೀಸ್ ಗೆ ರೆಡಿಯಾಗುತ್ತಿದೆ. ಮುಂದಿನ ವರ್ಷ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ.

  English summary
  Ranbir Kapoor Finally breaks silence his wedding plans with Alia Bhatt. He says Alia Bhatt is my girlfriend.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X