Don't Miss!
- Sports
U-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಣ್‌ಬೀರ್ ಕಪೂರ್ ನೋಡಿ 'ನಿನಗಿಂತ ಡ್ರೈವರ್ ಚೆನ್ನಾಗಿದ್ದಾನೆ' ಎಂದು ಕಾಲೆಳೆದ ಟ್ರೋಲಿಗರು!
ಆಲಿಯಾ ನಟಿಸುತ್ತಿರುವ ಮೊದಲ ಹಾಲಿವುಡ್ ಸಿನಿಮಾದ ಶೂಟಿಂಗ್ ಮುಗಿಸಿ ಭಾರತಕ್ಕೆ ಮರಳಿದ್ದಾರೆ. 'ಹಾರ್ಟ್ ಆಫ್ ಸ್ಟೋನ್' ಹಾಲಿವುಡ್ ಸಿನಿಮಾದ ಶೂಟಿಂಗ್‌ನಲ್ಲಿ ಕಳೆದ ಕೆಲವು ದಿನಗಳಿಂದ ಆಲಿಯಾ ನಟಿಸುತ್ತಿದ್ದರು.
ಗರ್ಭಿಣಿಯಾಗಿದ್ದರೂ, ಹಾಲಿವುಡ್‌ನ ಆಕ್ಷನ್ ಸಿನಿಮಾದಲ್ಲಿ ಆಲಿಯಾ ಭಟ್ ನಟಿಸುತ್ತಿರುವ ಸುದ್ದಿ ಕೇಳಿ ನೆಟ್ಟಿಗರು ಭೇಷ್ ಎಂದಿದ್ದರು. ಇದೇ ವೇಳೆ 'ಹಾರ್ಟ್ ಆಫ್ ಸ್ಟೋನ್' ಚಿತ್ರೀಕರಣದ ವೇಳೆ ಆಲಿಯಾ ಭಟ್ ಬೇಬಿ ಬಂಪ್ ಫೋಟೊಗಳು ವೈರಲ್ ಆಗಿತ್ತು.
ಆಲಿಯಾ
ಭಟ್
ಬೇಬಿ
ಬಂಪ್
ಫೋಟೊ
ಲೀಕ್:
ಸೋಶಿಯಲ್
ಮೀಡಿಯಾದಲ್ಲಿ
ವೈರಲ್!
ಹಾಲಿವುಡ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಪತ್ನಿಯನ್ನು ಕರೆದುಕೊಂಡು ಬರಲು ಸ್ವತ: ರಣ್‌ಬೀರ್ ಕಪೂರ್ ವಿದೇಶಕ್ಕೆ ಹಾರಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಆಲಿಯಾ ಭಟ್ ಈ ಎಲ್ಲಾ ಸುದ್ದಿಗಳನ್ನು ತಳ್ಳಿ ಹಾಕಿದ್ದರು. ಆದರೆ, ಭಾರತಕ್ಕೆ ಹಿಂತಿರುಗಿರುವ ಆಲಿಯಾ ಕರೆದುಕೊಂಡು ಹೋಗಲು ಏರ್‌ಪೋರ್ಟ್‌ಗೆ ಬಂದಿದ್ದ ರಣ್‌ಬೀರ್ ನೆಟ್ಟಿಗರಿಂದ ಟ್ರೋಲ್‌ಗೆ ಓಳಗಾಗಿದ್ದಾರೆ. ಅದ್ಯಾಕೆ ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಮುಂಬೈ ಏರ್‌ಪೋರ್ಟ್‌ನಲ್ಲಿ ಭವ್ಯ ಸ್ವಾಗತ
ಹಾಲಿವುಡ್ ಸಿನಿಮಾ ಮುಗಿಸಿದ ಮುಂಬೈಗೆ ಬಂದಿಳಿದ ಆಲಿಯಾ ಭಟ್‌ಗೆ ಏರ್‌ಪೋರ್ಟ್‌ನಲ್ಲಿ ಭವ್ಯ ಸ್ವಾಗತ ಸಿಕ್ಕಿದೆ. ತಾಯಿಯಾಗುತ್ತಿರುವ ಸುದ್ದಿಯನ್ನು ಅನೌನ್ಸ್ ಮಾಡಿದ ಬಳಿಕ ಮೊದಲ ಬಾರಿಗೆ ಕ್ಯಾಮರಾ ಕಣ್ಣಿಗೆ ಬಿದ್ದಿರುವ ಆಲಿಯಾಗೆ ಶುಭಾಶಯಗಳನ್ನು ತಿಳಿಸಲಾಗಿದೆ. ಇನ್ನು ಪತ್ನಿ ಆಲಿಯಾ ಭಟ್ ಅನ್ನು ಮುಂಬೈ ಏರ್‌ಪೋರ್ಟ್‌ನಿಂದ ಮನೆಗೆ ಕರೆದುಕೊಂಡು ಹೋಗಲು ಸ್ವತ: ರಣ್‌ಬೀರ್ ಕಪೂರ್ ಏರ್‌ಪೋರ್ಟ್‌ಗೆ ಬಂದಿದ್ದರು.
ಮೊದಲ
ಹಾಲಿವುಡ್
ಸಿನಿಮಾ
ಮುಗಿಸಿದ
ಗರ್ಭಿಣಿ
ಆಲಿಯಾ
ಭಟ್:
ವೈರಲ್
ಆಯ್ತು
ಸೆಲ್ಫಿ!

ಆಲಿಯಾಗಾಗಿ ಕಾದು ಕೂತಿದ್ದ ರಣ್‌ಬೀರ್
ತನ್ನನ್ನು ಮುಂಬೈ ಏರ್‌ಪೋರ್ಟ್‌ನಿಂದ ಕರೆದುಕೊಂಡು ಬರಲು ರಣ್‌ಬೀರ್ ಕಪೂರ್ ಬಂದಿದ್ದು ಆಲಿಯಾ ಭಟ್‌ಗೆ ಗೊತ್ತಿರಲಿಲ್ಲ. ಪತ್ನಿಸ ಸರ್ಪ್ರೈಸ್ ಕೊಡಲೆಂಡೇ ರಣ್‌ಬೀರ್ ಕಾರಿನಲ್ಲಿಯೇ ಕಾದು ಕುಳಿತಿದ್ದರು. ಕ್ಯಾಮರಾಗಳು ಸುತ್ತುವರೆದಿದ್ದರೂ ರಣ್‌ಬೀರ್ ಮಾತ್ರ ಕಾರಿನಿಂದ ಹೊರಗಿಳಿದಿರಲಿಲ್ಲ. ಈ ವೇಳೆ ರಣ್‌ಬೀರ್ ಕಾರೊಳಗೆ ಫೋನ್‌ನಲ್ಲಿ ಚಾಟ್ ಮಾಡುತ್ತಾ ಕುಳಿತಾಗ ಕ್ಯಾಮರಾ ಸೆರೆಗೆ ಸಿಕ್ಕಿದ್ದರು. ಇದೇ ಫೋಟೊಗಳು ನೆಟ್ಟಿಗರಿಂದ ಟ್ರೋಲ್‌ಗೆ ಒಳಗಾಗಿತ್ತು.

ರಣ್‌ಬೀರ್ ಫೋಟೊ ಟ್ರೋಲ್
ಪತ್ನಿ ಬಹಳ ದಿನಗಳ ಬಳಿಕ ಮನೆಗೆ ಬರುತ್ತಿರುವ ಖುಷಿಯಲ್ಲಿ ರಣ್‌ಬೀರ್ ಕಪೂರ್ ಇದ್ದರು. ಈ ವೇಳೆ ರಣ್‌ಬೀರ್ ಕಪೂರ್ ಕುಡಿದ ಮತ್ತಿನಲ್ಲಿರುವಂತೆ ಕಂಡುಬಂದಿತ್ತು. ಈ ಫೋಟೊಗಳನ್ನು ನೋಡಿ ಟ್ರೋಲಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವರು ರಣ್‌ಬೀರ್ ಕಪೂರ್ ನಶೆಯಲ್ಲಿದ್ದಾರೆ ಎಂದು ಕಮೆಂಟ್ ಮಾಡಿದ್ದರು. ಇನ್ನೊಬ್ಬರು, "ನಿನಗಿಂತ ನಿನ್ನ ಡ್ರೈವರ್ ಸುಂದರವಾಗಿ ಕಾಣಿಸುತ್ತಾನೆ" ಎಂದು ಟ್ರೋಲ್ ಮಾಡುತ್ತಿದ್ದಾರೆ.

ಆಲಿಯಾ ಭಟ್‌ಗೆ ಶಾಕ್
ರಣ್‌ಬೀರ್ ಕಪೂರ್ ತಮ್ಮ ಮುಂದಿನ 'ಬ್ರಹ್ಮಾಸ್ತ್ರ' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರಣಕ್ಕೆ ನಿರಂತರವಾಗಿ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಆಲಿಯಾ ಮುಂಬೈಗೆ ಬಂದಿಳಿದ ದಿನವು ಕೂಡ ರಣ್‌ಬೀರ್ ಕಪೂರ್ ಬ್ಯುಸಿಯಾಗಿದ್ದರು. ಅಲ್ಲದೆ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ಬಳಿಕ ಮೊದಲ ಬಾರಿಗೆ ಆಲಿಯಾ ಭಟ್ ಅನ್ನು ಭೇಟಿ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇಬ್ಬರಿಗೂ ವಿಶೇಷವಾದ ಕ್ಷಣವಾಗಿತ್ತು ಎಂದು ಬಾಲಿವುಡ್ ವರದಿ ಮಾಡಿದೆ.