For Quick Alerts
  ALLOW NOTIFICATIONS  
  For Daily Alerts

  18 ವರ್ಷದ ಹಿಂದಿನ ಹಳೇ ಫೋಟೋ ರಹಸ್ಯ ಬಯಲು ಮಾಡಿದ ಐಶ್ವರ್ಯ

  By ಸೋನು ಗೌಡ
  |

  ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯ ರೈ ಮತ್ತು ಹುಡುಗಿಯರ ಫೇವರಿಟ್ ನಟ ರಣಬೀರ್ ಕಪೂರ್ ಅವರು 'ಏ ದಿಲ್ ಹೈ ಮುಷ್ಕಿಲ್' ಚಿತ್ರದಲ್ಲಿ, ಯದ್ವಾ-ತದ್ವಾ ರೋಮ್ಯಾನ್ಸ್ ಮಾಡಿರೋದು ಸದ್ಯಕ್ಕೆ ಬಿಟೌನ್ ನಲ್ಲಿ ಟಾಕ್ ಆಫ್ ದ ಟಾಪಿಕ್.

  ಈಗಾಗಲೇ ಈ ಚಿತ್ರಕ್ಕೆ ಎದುರಾಗಿದ್ದ ವಿಘ್ನಗಳನ್ನೆಲ್ಲಾ ಪರಿಹರಿಸಿಕೊಂಡು, ದೀಪಾವಳಿಗೆ ತೆರೆಗೆ ಬರಲು ತಯಾರಾಗುತ್ತಿದೆ. ಮಾತ್ರವಲ್ಲದೇ ನಟ ರಣಬೀರ್, ನಟಿಯರಾದ ಐಶ್ವರ್ಯ ರೈ ಮತ್ತು ಅನುಷ್ಕಾ ಶರ್ಮಾ ಚಿತ್ರದ ಪ್ರೊಮೋಷನ್ ನಲ್ಲಿ ಫುಲ್ ಬಿಜಿಯಾಗಿ ಬಿಟ್ಟಿದ್ದಾರೆ.

  ಅಂದಹಾಗೆ ನೀಲಿ ಕಣ್ಣಿನ ಸುಂದರಿ ಐಶ್ವರ್ಯ ರೈ ಮತ್ತು ಚಾಕಲೇಟು ಹೀರೋ ರಣಬೀರ್ ಕಪೂರ್ ಅವರ 18 ವರ್ಷಗಳ ಹಿಂದಿನ ಫೋಟೋ ಒಂದರ ಬಗ್ಗೆ ನಾವೇ ನಿಮಗೆ ತಿಳಿಸಿದ್ವಿ. ಈ ಹಳೇ ಫೋಟೋ ಐಶ್ವರ್ಯ ನಟನೆಯ 'Aa Ab Laut Chalen' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ರಣಬೀರ್ ಅವರು ಐಶ್ ಜೊತೆ ಪೋಸ್ ಕೊಟ್ಟಿದ್ದರು.[18 ವರ್ಷಗಳ ಹಿಂದೆ ಐಶ್-ರಣಬೀರ್ ಕಪೂರ್ ಹೇಗಿದ್ರು ಗೊತ್ತಾ?]

  ಈ ಹಳೇ ಫೋಟೋ 'Aa Ab Laut Chalen' ಚಿತ್ರದ ಚಿತ್ರೀಕರಣದಲ್ಲಿ ತೆಗೆಸಿಕೊಂಡಿದ್ದು ಅನ್ನೋದು ಬಿಟ್ಟರೆ, ಈ ಫೋಟೋ ಬಗ್ಗೆ ಬೇರೆ ಮಾಹಿತಿ ಯಾರಿಗೂ ಗೊತ್ತಿಲ್ಲ. ಆದರೆ ಈ ಫೋಟೋ ಹಿಂದಿರುವ ಸೀಕ್ರೇಟ್ ಇನ್ನು ಈಗ ಖುದ್ದು ಐಶ್ವರ್ಯ ರೈ ಅವರೇ ಬಿಚ್ಚಿಟ್ಟಿದ್ದಾರೆ. ಏನಪ್ಪಾ ಅಂತಹ ಸೀಕ್ರೆಟ್ ಅನ್ನೋ ಕುತೂಹಲವಿದ್ದರೆ ಮುಂದೆ ಓದಿ...

  ಫೋಟೋ ಹಿಂದಿನ ರಹಸ್ಯ

  ಫೋಟೋ ಹಿಂದಿನ ರಹಸ್ಯ

  ಇದು 1998ರಲ್ಲಿ ನಡೆದ ಘಟನೆ, ರಿಷಿ ಕಪೂರ್ ನಿರ್ದೇಶನದ 'Aa Ab Laut Chalen' ಚಿತ್ರದ ಶೂಟಿಂಗ್ ಯುಎಸ್ಎ ನಲ್ಲಿ ನಡೆಯುತ್ತಿತ್ತು. ಚಿತ್ರದಲ್ಲಿ ನಟಿ ಐಶ್ವರ್ಯ ರೈ ಮತ್ತು ಅಕ್ಷಯ್ ಖನ್ನಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಅದೇ ಸಂದರ್ಭದಲ್ಲಿ ರಣಬೀರ್ ಕಪೂರ್ 10ನೇ ತರಗತಿ ವಿದ್ಯಾರ್ಥಿಯಾಗಿದ್ದರು. ಜೊತೆಗೆ ಆಗಷ್ಟೇ ಅವರ ಫಲಿತಾಂಶ ಕೂಡ ಪ್ರಕಟವಾಗಿತ್ತಂತೆ.[5 ಕೋಟಿ ದೇಣಿಗೆ: ಪ್ರಾಯಶ್ಚಿತದೊಂದಿಗೆ 'ಏ ದಿಲ್ ಹೈ ಮುಷ್ಕಿಲ್' ಬಿಡುಗಡೆ]

  ಪಾರ್ಟಿಯಲ್ಲಿ ತೆಗೆದ ಫೋಟೋ

  ಪಾರ್ಟಿಯಲ್ಲಿ ತೆಗೆದ ಫೋಟೋ

  ರಣಬೀರ್ ಅವರ ಅಜ್ಜಿ, ತಮ್ಮ ಮೊಮ್ಮಗ ಹತ್ತನೇ ತರಗತಿಯಲ್ಲಿ ಶೇ 65.4% ಅಂಕ ಗಳಿಸಿದ್ದಾನೆ ಎಂಬ ಖುಷಿಯಲ್ಲಿ ಮನೆಯಲ್ಲಿ ಪಾರ್ಟಿ ಏರ್ಪಾಡು ಮಾಡಿದ್ದರಂತೆ. ಆ ಪಾರ್ಟಿಗೆ ಐಶ್ವರ್ಯ ರೈ ಅವರನ್ನು ಕೂಡ ರಿಷಿ ಕಪೂರ್ ಅವರು ಆಹ್ವಾನಿಸಿದ್ದು, ಆವಾಗ ರಣಬೀರ್, ಐಶ್ ಗೆ ಅವರ ಮಾರ್ಕ್ಸ್ ತೋರಿಸಿ ಖುಷಿ ಪಟ್ಟು ಒಂದು ಫೋಟೋ ಕ್ಲಿಕ್ಕಿಸಿಕೊಂಡಿದ್ದರಂತೆ. ಅದೇ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.[ರಣಬೀರ್ ಕಪೂರ್ ಗೆ 'ಅಪ್ಪ' ಅಂತ ಕರೆದ ಆರಾಧ್ಯ ಬಚ್ಚನ್]

  ನಿಜವಾಗಿ ರಣಬೀರ್ ಗಳಿಸಿದ ಅಂಕ ಎಷ್ಟು?

  ನಿಜವಾಗಿ ರಣಬೀರ್ ಗಳಿಸಿದ ಅಂಕ ಎಷ್ಟು?

  ಆದರೆ ನಿಜವಾಗಿ ರಣಬೀರ್ ಕಪೂರ್ ಅವರಿಗೆ 10ನೇ ತರಗತಿ ಪರೀಕ್ಷೆಯಲ್ಲಿ ಬಂದ ಅಂಕ 54.3%. ರಣಬೀರ್ ಅವರು ಐಶ್ವರ್ಯ ರೈ ಅವರ ಹತ್ತಿರ 65.4% ಅಂತ ಸುಳ್ಳು ಹೇಳಿದ್ದರಂತೆ. ಈ ನಿಜಾಯಿತಿ ಬಯಲಾಗಿದ್ದು ಮಾತ್ರ 'ಏ ದಿಲ್ ಹೈ ಮುಷ್ಕಿಲ್' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಎಂದು ನಗುತ್ತಾರೆ ಐಶ್ವರ್ಯ ರೈ ಬಚ್ಚನ್.['ಮುಷ್ಕಿಲ್' ನಲ್ಲಿ ಕರಣ್: ಗೃಹ ಸಚಿವರ ಸಹಾಯ ಕೇಳಿದ ಚಿತ್ರತಂಡ]

  ಕಪಿಲ್ ಶರ್ಮ ಶೋನಲ್ಲಿ ಅಸಲಿ ರಹಸ್ಯ ಬಯಲು

  ಕಪಿಲ್ ಶರ್ಮ ಶೋನಲ್ಲಿ ಅಸಲಿ ರಹಸ್ಯ ಬಯಲು

  ನಟಿ ಐಶ್ವರ್ಯ ರೈ ಬಚ್ಚನ್ ಅವರು ಈ ಫೋಟೋ ಹಿಂದಿನ ಅಸಲಿ ರಹಸ್ಯ ಬಯಲು ಮಾಡಿದ್ದು, ಎಲ್ಲರ ಫೆವರಿಟ್ ಕಾಮಿಡಿ ಶೋ, ಕಪಿಲ್ ಶರ್ಮ ಕಾರ್ಯಕ್ರಮದಲ್ಲಿ. ಚಿತ್ರದ ಪ್ರೊಮೋಷನ್ ಗಾಗಿ ಇಡೀ ಚಿತ್ರತಂಡ ಕಪಿಲ್ ಶೋಗೆ ಆಗಮಿಸಿತ್ತು. ಆವಾಗಲೇ ಐಶ್ವರ್ಯ ಅವರು ಈ ರಹಸ್ಯ ಬಿಚ್ಚಿಟ್ಟರು.

  ದೀಪಾವಳಿಗೆ 'ಏ ದಿಲ್ ಹೈ ಮುಷ್ಕಿಲ್' ರಿಲೀಸ್

  ದೀಪಾವಳಿಗೆ 'ಏ ದಿಲ್ ಹೈ ಮುಷ್ಕಿಲ್' ರಿಲೀಸ್

  ಅಕ್ಟೋಬರ್ 28, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕರಣ್ ಜೋಹರ್ ನಿರ್ದೇಶನದ 'ಏ ದಿಲ್ ಹೈ ಮುಷ್ಕಿಲ್' ಸಿನಿಮಾ ಇಡೀ ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆ ಕಾಣಲಿದೆ.

  English summary
  Recently, during ADHM movie promotion, Actress Aishwarya Rai revealed a funny story behind their throwback picture, which went viral on social media a few days ago.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X