8 ದಿನಗಳಲ್ಲಿ ಬ್ರಹ್ಮಾಸ್ತ್ರ ಗಳಿಸಿದೆಷ್ಟು..? ಎಂಟನೇ ದಿನ ಹಠಾತ್ ಏರಿಕೆ!
ಬಾಲಿವುಡ್ನ ಕ್ಯೂಟ್ ಜೋಡಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಮೊದಲ ಬಾರಿಗೆ ಜೊತೆಯಾಗಿದ್ದ ನಟಿಸಿದ್ದ 'ಬ್ರಹ್ಮಾಸ್ತ್ರ' ಚಿತ್ರ ನಿರೀಕ್ಷೆಗೂ ಮೀರಿ ಯಶಸ್ಸುಗಳಿಸಿದೆ. ಬಾಕ್ಸ್ ಆಫೀಸ್ನಲ್ಲೂ 'ಬ್ರಹ್ಮಾಸ್ತ್ರ' ಚಿತ್ರ ಸದ್ದು ಮಾಡುತ್ತಿದೆ. ಅತಿ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿರುವ ಚಿತ್ರಗಳ ಪಟ್ಟಿಗೆ ಬ್ರಹ್ಮಾಸ್ತ್ರವೂ ಸೇರಿಕೊಂಡಿದ್ದು, ಎರಡನೇ ಸ್ಥಾನದಲ್ಲಿದೆ. ಈ ಮೂಲಕ ಬಾಲಿವುಡ್ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವಲ್ಲಿ 'ಬ್ರಹಾಸ್ತ್ರ' ಯಶಸ್ವಿಯಾಗಿದೆ.
ಕರಣ್ ಜೋಹರ್ ನಿರ್ಮಾಣದ 'ಬ್ರಹ್ಮಾಸ್ತ್ರ' ಚಿತ್ರ ಕಳೆದ ಶುಕ್ರವಾರ(ಸೆಪ್ಟೆಂಬರ್ 9) ರಂದು ವಿಶ್ವದಾದ್ಯಂತ ತೆರೆಕಂಡಿತ್ತು. ಹಿಂದಿ ಭಾಷೆಯಲ್ಲಿ ಚಿತ್ರೀಕರಣ 'ಬ್ರಹ್ಮಾಸ್ತ್ರ' ಚಿತ್ರ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗೆ ಡಬ್ ಆಗಿತ್ತು. ಎಲ್ಲಾ ಭಾಷೆಗಳಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಮೊದಲ ವೀಕೆಂಡ್ನಲ್ಲಿ ₹225 ಕೋಟಿ ದೋಚಿಕೊಂಡಿತ್ತು.
ಮೊದಲ ಮೂರು ದಿನ ಹೌಸ್ಫುಲ್ ಪ್ರದರ್ಶನಗೊಂಡು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದ್ದ 'ಬ್ರಹ್ಮಾಸ್ತ್ರ' ವಿಶ್ವದಾದ್ಯಂತ ಮೊದಲ ದಿನ(ಸಪ್ಟೆಂಬರ್ 9) ₹75 ಕೋಟಿ ಗಳಿಸಿದ್ದ ಚಿತ್ರ, ಶನಿವಾರ(ಸಪ್ಟೆಂಬರ್ 10) ₹85 ಕೋಟಿ ಹಾಗೂ ಭಾನುವಾರ(ಸಪ್ಟೆಂಬರ್ 11) 65 ಕೋಟಿ ರೂಪಾಯಿ ಗಳಿಸಿತ್ತು. ಬಳಿಕ ವಾರದ ದಿನಗಳಲ್ಲಿ ಬ್ರಹ್ಮಾಸ್ತ್ರ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ಇಳಿಕೆ ಕಂಡಿದ್ದು, ವಾರಾಂತ್ಯದಲ್ಲಿ ಒಟ್ಟು ₹300 ಕೋಟಿ ಗಳಿಸಿದೆ.

8 ದಿನಗಳಲ್ಲಿ ಬ್ರಹ್ಮಾಸ್ತ್ರ ಗಳಿಸಿದೆಷ್ಟು..?
ವಿಶ್ವದಾದ್ಯಂತ ತೆರೆ ಕಂಡಿದ್ದ ಬ್ರಹ್ಮಾಸ್ತ್ರ ಚಿತ್ರ ಸದ್ಯ ಬಾಕ್ಸ್ ಆಫೀಸ್ನಲ್ಲಿ 300 ಕೋಟಿ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಪೈಕಿ ಕೇವಲ ಭಾರತದಲ್ಲಿಯೇ ಚಿತ್ರ ₹183.52 ಕೋಟಿ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಐದು ಭಾಷೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿರುವ ಬ್ರಹ್ಮಾಸ್ತ್ರ ಚಿತ್ರ ಭಾರತದ ಚಿತ್ರಮಂದಿರಗಳಲ್ಲಿ ಗಳಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್ ಈ ಕೆಳಗಿನಂತಿದೆ.
ಮೊದಲ ದಿನ (ಸಪ್ಟೆಂಬರ್ 9)- 36.42 ಕೋಟಿ ರೂ.
ಎರಡನೇ ದಿನ (ಸಪ್ಟೆಂಬರ್ 10)-42.41 ಕೋಟಿ ರೂ.
ಮೂರನೇ ದಿನ (ಸಪ್ಟೆಂಬರ್ 11)-45.66 ಕೋಟಿ ರೂ.
ನಾಲ್ಕನೇ ದಿನ (ಸಪ್ಟೆಂಬರ್ 12)-16.50 ಕೋಟಿ ರೂ.
ಐದನೇ ದಿನ (ಸಪ್ಟೆಂಬರ್ 13)-12.68 ಕೋಟಿ ರೂ.
ಆರನೇ ದಿನ (ಸಪ್ಟೆಂಬರ್ 14)-10.53 ಕೋಟಿ ರೂ.
ಏಳನೇ ದಿನ (ಸಪ್ಟೆಂಬರ್ 15)-9.02 ಕೋಟಿ ರೂ.
ಎಂಟನೇ ದಿನ (ಸಪ್ಟೆಂಬರ್ 16)-10.30 ಕೋಟಿ ರೂ ಗಳಿಸಿದೆ ಎಂದು ಅಂದಾಜಿಸಲಾಗಿದೆ.

ವೀಕೆಂಡ್ನಲ್ಲಿ ಮತ್ತೆ ಸದ್ದು ಮಾಡುತ್ತಾ ಬ್ರಹ್ಮಾಸ್ತ್ರ
ಮೊದಲ ಮೂರು ದಿನಗಳಲ್ಲಿ ಭರ್ಜರಿ ಏರಿಕೆ ಕಂಡಿದ್ದ 'ಬ್ರಹ್ಮಾಸ್ತ್ರ' ಚಿತ್ರದ ಕಲೆಕ್ಷನ್ ವಾರದಲ್ಲಿ ಗಣನೀಯ ಇಳಿಕೆಕಂಡಿದೆ. ಚಿತ್ರ ತೆರೆಕಂಡ ಮೊದಲ ಸೋಮವಾರ 16.50 ಕೋಟಿ ರೂ ಗಳಿಸಿದ್ದ ಬ್ರಹ್ಮಾಸ್ತ್ರ ಒಂದು ವಾರ ಪೂರ್ಣಗೊಳ್ಳುವ ಹೊತ್ತಿಗೆ ಅಂದಾಜು 10 ಕೋಟಿಗೆ ಬಂದು ನಿಂತಿದೆ. ಇನ್ನು ವೀಕೆಂಡ್ಗಳಲ್ಲಿ ಚಿತ್ರ ಎಷ್ಟರ ಮಟ್ಟಿಗೆ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಲಿದೆ ಎಂದು ಕಾದು ನೋಡಬೇಕಿದೆ.

ನಿರ್ಮಾಪಕರ ಕೈ ಹಿಡಿದ ಪ್ರೇಕ್ಷಕ ಪ್ರಭು
ಬ್ರಹ್ಮಾಸ್ತ್ರ ಚಿತ್ರ ತೆರೆ ಕಾಣುವ ಮುನ್ನವೇ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಚಿತ್ರದ ನಾಯಕ ರಣಬೀರ್ ಕಪೂರ್ ಅವರ ಗೋಮಾಂಸದ ಕುರಿತು ಹೇಳಿಕೆ ಚಿತ್ರಕ್ಕೆ ಬಾಯ್ಕಾಟ್ ಬಿಸಿ ತಟ್ಟುವಂತೆ ಮಾಡಿತ್ತು. ಸೋಶಿಯಲ್ ಮೀಡಿಯಾಗಳಲ್ಲಿ ಬಾಯ್ಕಾಟ್ ಬ್ರಹ್ಮಾಸ್ತ್ರ ಅಭಿಯಾನ ಕೂಡ ನಡೆದಿದ್ದು, ಇದೆಲ್ಲವನ್ನೂ ಮೀರಿ ಚಿತ್ರ ಯಶಸ್ಸುಗಳಿಸಿದೆ. 410 ಕೋಟಿ ರೂಪಾಯಿ ಬಜೆಟ್ನಲ್ಲಿ ತಯಾರಾದ ಬ್ರಹ್ಮಾಸ್ತ್ರ ಚಿತ್ರ ಮೊದಲ ವಾರದಲ್ಲೇ ಶೇ.75 ರಷ್ಟು ಬಂಡವಾಳವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.

ಸೌತ್ನಲ್ಲಿ ಚಿತ್ರಗೆಲ್ಲಲು ಕಾರಣರಾದ್ರ ಬಾಹುಬಲಿ ನಿರ್ದೇಶಕ
ಬಾಯ್ಕಾಟ್ ಅಭಿಯಾನದಿಂದ ಬೇಸರಗೊಂಡಿದ್ದ ಬ್ರಹ್ಮಾಸ್ತ್ರ ಚಿತ್ರತಂಡ ಚಿತ್ರವನ್ನು ಗೆಲ್ಲಿಸಲೇ ಬೇಕು ಎನ್ನುವ ಹಠದಲ್ಲಿ ಒಂದು ತಿಂಗಳುಗಳ ಕಾಲ ಚಿತ್ರದ ಪ್ರಚಾರ ನಡೆಸಿದ್ದರು. ಬ್ರಹ್ಮಾಸ್ತ್ರ ಚಿತ್ರತಂಡದ ಜೊತೆ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ರಾಜಮೌಳಿ ಕೂಡ ಕೈ ಜೋಡಿಸಿದ್ದು, ಚಿತ್ರದ ಪರ ಭರ್ಜರಿ ಪ್ರಚಾರ ನಡೆಸಿದ್ದರು. ಬ್ರಹ್ಮಾಸ್ತ್ರ ಚಿತ್ರದ ಇದು ಕೂಡ ಕಾರಣ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.


Click it and Unblock the Notifications











