For Quick Alerts
  ALLOW NOTIFICATIONS  
  For Daily Alerts

  ತಾಳಿ ಕಟ್ಟುವ ಶುಭ ವೇಳೆಗೆ ರಣ್ಬೀರ್ ಕಪೂರ್ ರೆಡಿ

  By Harshitha
  |

  ಕಡೆಗೂ ಲವ್ ಮ್ಯಾಟ್ರಲ್ಲಿ ರಣ್ಬೀರ್ ಕಪೂರ್ ಕೊಂಚ ಸೀರಿಯಸ್ ಆದ್ಹಂಗಿದೆ. ಹೊಸ ವರ್ಷದ ಹೊತ್ತಿಗೆ ಗುಡ್ ನ್ಯೂಸ್ ಕೊಡೋಕೆ ಕಪೂರ್ ಖಾನ್ದಾನ್ ಕುಡಿ ತಯಾರಿ ನಡೆಸುತ್ತಿದ್ದಾರೆ. ಸಿಂಗಲ್ ಸ್ಟೇಟಸ್ ಗೆ ಟಾಟಾ ಹೇಳಿ ಕತ್ರಿನಾ ಜೊತೆ ಜಂಟಿಯಾಗೋಕೆ ತುದಿಗಾಲಲ್ಲಿದ್ದಾರೆ ರಣ್ಬೀರ್.

  ಫೆಬ್ರವರಿ ಹೊತ್ತಿಗೆ ಬಾಲಿವುಡ್ ನ ಈ ಯುವ ಪ್ರೇಮಿಗಳು ವಿವಾಹವಾಗುವುದು ಖಚಿತ ಅಂತ ಈ ಹಿಂದೆ ಗುಲ್ಲೆದ್ದಿತ್ತು. ಅದನ್ನ ಇದೀಗ ನಿಜ ಮಾಡುವುದಕ್ಕೆ ಹೊರಟಿದ್ದಾರೆ ರಣ್ಬೀರ್. ಇನ್ನು ಕೆಲವೇ ದಿನಗಳಲ್ಲಿ, ಅಂದ್ರೆ ಹೊಸ ವರ್ಷದ ಹಿಂದೆ ಮುಂದೆ ತಮ್ಮ ಭಾವಿ ಅತ್ತೆ ಅರ್ಥಾತ್ ಕತ್ರಿನಾ ಕೈಫ್ ತಾಯಿಯನ್ನ ರಣ್ಬೀರ್ ಭೇಟಿಯಾಗಲಿದ್ದಾರಂತೆ. [ಒಂದೇ ಮನೆಯಲ್ಲಿ ಬಾಲಿವುಡ್ ಪ್ರಣಯ ಪಕ್ಷಿಗಳು]

  ಈಗಾಗಲೇ ಅಲ್ಲಿ-ಇಲ್ಲಿ ತಿರುಗಾಡುವುದನ್ನ ಬಿಟ್ಟು ಒಂದೇ ಮನೆಯಲ್ಲಿ ಲಿವಿಂಗ್-ಟು ಗೆದರ್ ರಿಲೇಶನ್ ಶಿಪ್ ನಲ್ಲಿದ್ದಾರೆ ರಣ್ಬೀರ್-ಕತ್ರಿನಾ. ಇದೀಗ ತಮ್ಮ ಪ್ರೀತಿಗೆ ಅಧಿಕೃತ ಮುದ್ರೆಯನ್ನ ಅಚ್ಚಾಗಿಸಿಕೊಳ್ಳೋಕೆ ಗುರು-ಹಿರಿಯರ ಮುಂದೆ ನಿಲ್ಲಲು ನಿರ್ಧರಿಸಿದ್ದಾರೆ. [ಕತ್ರಿನಾ ಕೈಫ್, ರಣಬೀರ್ ಮದುವೆಗೆ ಲೈನ್ ಕ್ಲಿಯರ್!]

  ಹೇಳಿಕೇಳಿ ಹೊಸ ವರ್ಷಕ್ಕೆ ಇನ್ನು ಕೆಲವೇ ದಿನಗಳು ಬಾಕಿ, ಹೀಗಾಗಿ ನ್ಯೂ ಈಯರ್ ಸೆಲೆಬ್ರೇಷನ್ ಗಂತ ಈ ಪ್ರೇಮ ಪಕ್ಷಿಗಳು ಲಂಡನ್ ಗೆ ಹಾರಲಿದ್ದಾರೆ. ಹಾಗ್ನೋಡಿದರೆ, ಕತ್ರಿನಾ ತಾಯಿ ನೆಲೆಸಿರುವುದು ಲಂಡನ್ ನಲ್ಲೇ. ಆದ್ರಿಂದ ಪಾರ್ಟಿ ಮಾಡುವುದರ ಜೊತೆಗೆ ಕತ್ರಿನಾ ಫ್ಯಾಮಿಲಿಯನ್ನೂ ಮೀಟ್ ಮಾಡಿ, ಮದುವೆ ಬಗ್ಗೆ ಮಾತುಕತೆ ನಡೆಸುವುದಕ್ಕೆ ರಣ್ಬೀರ್ ಮನಸ್ಸು ಮಾಡಿದ್ದಾರಂತೆ.

  ಅದಾಗಲೇ ಕಪೂರ್ ಖಾನ್ದಾನ್ ಗೆ ಕತ್ರಿನಾ ಎಂಟ್ರಿಕೊಟ್ಟಿದ್ದಾಗಿದೆ. ಇದೀಗ ಕೈಫ್ ಫ್ಯಾಮಿಲಿಯೊಳಗೆ ಗುರುತಿಸಿಕೊಳ್ಳುವ ಸರದಿ ರಣ್ಬೀರ್ ರದ್ದು. ಇಬ್ಬರ ಮದುವೆ ಮುಹೂರ್ತ ಈಗ ಕತ್ರಿನಾ ಕುಟುಂಬದ ಅಂಗಳದಲ್ಲಿದೆ. ಭಾವಿ ಅತ್ತೆ ಒಪ್ಪಿಕೊಂಡುಬಿಟ್ಟರೆ, ತಾಳಿ ಕಟ್ಟುವ ಶುಭ ವೇಳೆಗೆ ರಣ್ಬೀರ್ ಕಪೂರ್ ರೆಡಿ! (ಏಜೆನ್ಸೀಸ್)

  English summary
  Looks like Ranbir Kapoor has got serious with his Love-life. After planning for a New-Year Vacation in London, Ranbir has decided to meet Katrina Kaif's mother to take his love-life to the next level.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X