twitter
    For Quick Alerts
    ALLOW NOTIFICATIONS  
    For Daily Alerts

    'ಶಂಶೇರಾ' ಹಿಂದಿಕ್ಕಿದ 'ವಿಕ್ರಾಂತ್ ರೋಣ': ಕನ್ನಡ ಚಿತ್ರಕ್ಕೆ ಉತ್ತರದಲ್ಲಿ ಬೇಡಿಕೆ!

    |

    ರಣ್ಬೀರ್ ಕಪೂರ್ ನಟನೆಯ 'ಶಂಶೇರಾ' ಜುಲೈ 22ರಂದು ರಿಲೀಸ್ ಆಗಿತ್ತು. ಈ ಚಿತ್ರದ ರಿಲೀಸ್‌ಗೂ ಮುನ್ನ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಇನ್ನು ಬಹಳ ದಿನಗಳ ಬಳಿಕ ರಣ್ಬೀರ್ ಕಪೂರ್‌ರನ್ನು ಸ್ಕ್ರೀನ್ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದರು. ಆದರೆ ನಿರೀಕ್ಷೆಯನ್ನು ಮುಟ್ಟುವಲ್ಲಿ ಈ ಚಿತ್ರ ವಿಫಲವಾಗಿದೆ.

    'ಶಂಶೇರಾ' ಸಿನಿಮಾ ರಿಲೀಸ್ ಬಳಿಕ ಮೊದಲ ದಿನ ಮಿಶ್ರಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಸಿನಿಮಾದ ಬಗ್ಗೆ ಅಷ್ಟೇನು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರಲ್ಲ. ಜೊತೆಗೆ ಸಿನಿಮಾದ ವಿಮರ್ಶೆ ಕೂಡ ಅಷ್ಟಕ್ಕಷ್ಟೇ ಎನ್ನುವಂತೆ ಇತ್ತು. ಆದರೆ ರಣ್ಬೀರ್, ಸಂಜಯ್ ದತ್ ಅಂತಹ ನಟರು ಇರುವ ಕಾರಣಕ್ಕೆ ಸಿನಿಮಾ ಒಂದು ರೇಂಜಿಗೆ ಸದ್ದು ಮಾಡಲಿದೆ ಎನ್ನುವ ನಿರೀಕ್ಷೆ ಇತ್ತು.

    ಎರಡು ತಿಂಗಳ ಹಿಂದೆಯೇ ಹೊರಬಿದ್ದಿತ್ತು ಆಲಿಯಾ ಭಟ್ ಪ್ರೆಗ್ನೆನ್ಸಿ ಸುದ್ದಿ! ಹೇಗೆ?ಎರಡು ತಿಂಗಳ ಹಿಂದೆಯೇ ಹೊರಬಿದ್ದಿತ್ತು ಆಲಿಯಾ ಭಟ್ ಪ್ರೆಗ್ನೆನ್ಸಿ ಸುದ್ದಿ! ಹೇಗೆ?

    ಈಗ ಬಾಲಿವುಡ್‌ನ ಯಾವುದೇ ಸಿನಿಮಾ ಬಂದರೂ ಕೂಡ, ಹೆಚ್ಚಿನ ನಿರೀಕ್ಷೆ ಇದ್ದೇ ಇರುತ್ತದೆ. ಸೌತ್ ಸಿನಿಮಾಗಳು ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಮಾಡಿದ ರೆಕಾರ್ಡ್ ಬ್ರೇಕ್ ಮಾಡಲು ಯಾವ ಸಿನಿಮಾ ಬರಲಿದೆ ಎನ್ನುವ ನಿರೀಕ್ಷೆಯಲ್ಲಿ ಬಾಲಿವುಡ್‌ಗೆ ರಣ್ಬೀರ್ ಕೂಡ ನಿರಾಸೆ ಮೂಡಿಸಿದ್ದಾರೆ.

    ಬಾಕ್ಸಾಫೀಸ್‌ನಲ್ಲಿ ರಣ್ಬೀರ್ ಸಿನಿಮಾ ಡಲ್!

    ಬಾಕ್ಸಾಫೀಸ್‌ನಲ್ಲಿ ರಣ್ಬೀರ್ ಸಿನಿಮಾ ಡಲ್!

    'ಶಂಶೇರಾ' ಸಿನಿಮಾ ನಿರೀಕ್ಷೆ ಮಟ್ಟಕ್ಕೆ ಅಲ್ಲದಿದ್ದರೂ, ತಕ್ಕ ಮಟ್ಟಿಗೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿದೆ ಎನ್ನುವ ಮಾತುಗಳು ಬಾಲಿವುಡ್‌ನಲ್ಲಿ ವ್ಯಕ್ತವಾಗಿದ್ದವು. ಆದರೆ ದಿನ ಕಳೆದಂತೆ 'ಶಂಶೇರಾ' ಬಾಕ್ಸಾಫೀಸ್‌ನಲ್ಲಿ ಕುಸಿಯುತ್ತಿದೆ. ಇನ್ನು ಸಿನಿಮಾ ರಿಲೀಸ್ ಆಗಿ 6ನೇ ದಿನಕ್ಕೆ ಕಾಲಿಟ್ಟಿದೆ. ಆದರೂ ಕೂಡ ಸಿನಿಮಾದ ಗಳಿಕೆಯಲ್ಲಿ ಯಾವುದೇ ರೀತಿಯ ಚೇತರಿಕೆ ಕಂಡು ಬಂದಿಲ್ಲ. ಹಾಗಾಗಿ ಈ ಸಿನಿಮಾ ಬಹುತೇಕ ಸೋತ ಹಾಗೆ ಎನ್ನುವ ಲೆಕ್ಕವನ್ನು ಬಾಲಿವುಡ್‌ನಲ್ಲಿ ಹಬ್ಬಿದೆ.

    'ಶಂಶೇರ'ಗೆ ರಣ್ಬೀರ್, ವಾಣಿ ಕಪೂರ್, ಸಂಜಯ್ ದತ್ ಪಡೆದ ಸಂಭಾವನೆ ಎಷ್ಟು?'ಶಂಶೇರ'ಗೆ ರಣ್ಬೀರ್, ವಾಣಿ ಕಪೂರ್, ಸಂಜಯ್ ದತ್ ಪಡೆದ ಸಂಭಾವನೆ ಎಷ್ಟು?

    'ಶಂಶೇರಾ' 5ನೇ ₹36 ಕೋಟಿ ರೂ.

    'ಶಂಶೇರಾ' 5ನೇ ₹36 ಕೋಟಿ ರೂ.

    ಸದ್ಯ 'ಶಂಶೇರಾ' ಸಿನಿಮಾದ ಬಾಕ್ಸಾಫೀಸ್ ಲೆಕ್ಕಾಚಾರ ಹೊರ ಬಿದ್ದಿದೆ. ಒಟ್ಟು 5 ದಿನಗಳ ಲೆಕ್ಕಾಚಾರ ಬಂದಿದೆ. 'ಶಂಶೇರಾ' ಸಿನಿಮಾ ಒಟ್ಟು 5 ದಿನಗಳಲ್ಲಿ 50 ಕೋಟಿ ರೂ. ಗಡಿ ಮುಟ್ಟಲು ಸರ್ಕಸ್ ಮಾಡುತ್ತಿದೆ. ಸಿನಿಮಾ ಆಗಿ ಒಂದು ವಾರ ಆಗುತ್ತಾ ಬಂದಿದೆ. ಆದರೂ ಗಳಿಕೆಯಲ್ಲಿ ಚೇತರಿಕೆ ಇಲ್ಲದ ಕಾರಣ ಈ ಸಿನಿಮಾವನ್ನು ಚಿತ್ರಮಂದಿರಗಳಿಂದ ಎತ್ತಂಗಡಿ ಮಾಡಲಾಗುತ್ತಿದೆಯಂತೆ. ಇನ್ನು 5ನೇ ದಿನಕ್ಕೆ 'ಶಂಶೇರಾ' ಗಳಿಸಿದ್ದು, 36 ಕೋಟಿ ರೂ. ಇನ್ನು ಹೆಚ್ಚು ಎಂದರೆ 50 ಕೋಟಿ ರೂ ತನಕ ಈ ಚಿತ್ರ ಗಳಿಕೆ ಕಾಣಬಹುದು ಎನ್ನಲಾಗುತ್ತಿದೆ.

    ಬಾಲಿವುಡ್‌ನಲ್ಲಿ ಸಾಲು, ಸಾಲು ಸೋಲು!

    ಬಾಲಿವುಡ್‌ನಲ್ಲಿ ಸಾಲು, ಸಾಲು ಸೋಲು!

    'ಶಂಶೇರಾ' ಚಿತ್ರದ ಜೊತೆಗೆ ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳು ನೆಲ ಕಚ್ಚುತ್ತಿವೆ. 'ಕೆಜಿಎಫ್ 2', 'RRR' ಸಿನಿಮಾಗಳು ಬಂದ ಮೇಲೆ ಬಾಲಿವುಡ್‌ ಸಿನಿಮಾಗಳು ಬಹುತೇಕ ಮಂಕಾಗಿ ಬಿಟ್ಟಿವೆ. ಇತ್ತೀಚೆಗೆ ದೊಡ್ಡ ಸ್ಟಾರ್ ನಟರ ದೊಡ್ಡ ಸಿನಿಮಾಗಳು ರಿಲೀಸ್ ಆದರು ಕೂಡ ಯಾವುದೇ ಪ್ರಯೋಜನವಾಗಿಲ್ಲ. 'ಹೀರೋ ಪಂತಿ 2', 'ರನ್ ವೇ 34', 'ಪೃಥ್ವಿರಾಜ್', 'ಧಾಕಡ್' ಅಂತಹ ಸಿನಿಮಾಗಳು ಸೋತು ಸುಣ್ಣವಾಗಿವೆ. ಈ ಸಾಲಿಗೆ ಈಗ 'ಶಂಶೇರಾ' ಕೂಡ ಸೇರಿಕೊಂಡಿದೆ. ಇದರ ನಡುವೆ ಬಾಲಿವುಡ್‌ಗೆ ಕೊಂಚ ಸಮಾಧಾನ ಕೊಟ್ಟಿದ್ದು ಮಾತ್ರ ಕಾರ್ತಿಕ್ ಆರ್ಯನ್ ಅಭಿನಯದ 'ಭೂಲ್ ಭುಲಯ್ಯ 2'.

    ಬಿಟೌನ್‌ನಲ್ಲಿ 'ವಿಕ್ರಾಂತ್ ರೋಣ' ಅಬ್ಬರ!

    ಬಿಟೌನ್‌ನಲ್ಲಿ 'ವಿಕ್ರಾಂತ್ ರೋಣ' ಅಬ್ಬರ!

    ಮೊದಲೆಲ್ಲಾ ಸೌತ್‌ನಲ್ಲಿ ನಾರ್ತ್ ಸಿನಿಮಾಗಳಿಗೆ ಬೇಡಿಕೆ ಇತ್ತು. ಈಗ ನಾರ್ತ್‌ನಲ್ಲಿ ಸೌತ್‌ನಿಂದ ಯಾವ ಉತ್ತಮ ಸಿನಿಮಾ ಬರುತ್ತದೆ ಎನ್ನುವುದನ್ನು ಕಾಯುವಂತಾಗಿದೆ. ಸದ್ಯ 'ವಿಕ್ರಾಂತ್ ರೋಣ' ಸಿನಿಮಾಗೆ ನಾರ್ತ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. 'ಶಂಶೇರಾ' ಸಿನಿಮಾ ಎತ್ತಂಗಡಿ ಆಗುತ್ತಿದ್ದು, ಅದರ ಬದಲಿಗೆ 'ವಿಕ್ರಾಂತ್ ರೋಣ' ಸಿನಿಮಾಗೆ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ 1000 ಸ್ಕ್ರೀನ್‌ಗಳು 'ವಿಕ್ರಾಂತ್ ರೋಣ' ಸಿನಿಮಾಗೆ ನಿಗದಿ ಆಗಿದ್ದವು. ಆದರೆ ಈ ಸಂಖ್ಯೆ ಈಗ ಮತ್ತಷ್ಟು ಹೆಚ್ಚಾಗುತ್ತಿದ್ದು, ಈ ಬಾರಿ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಸುದೀಪ್ ಅಬ್ಬರಿಸಲಿದ್ದಾರೆ.

    Recommended Video

    ಹೈದ್ರಾಬಾದ್ ಗೆ ಹೋಗಿ ತೆಲುಗಿನಲ್ಲಿ ಹಾಡು ಹಾಡಿದ ವಿಕ್ರಾಂತ್ ರೋಣ ನಿರ್ದೇಶಕ | Vikrant Rona | Kiccha Sudeep

    English summary
    Ranbir Kapoor's Shamshera complete washout at box office, Shamshera Day 5 collection Report Is Here, Know More,
    Wednesday, July 27, 2022, 13:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X