»   » ಇಟಲಿಯಲ್ಲಿ ಗುಟ್ಟಾಗಿ ಸಪ್ತಪದಿ ತುಳಿದ ರಾಣಿ ಮುಖರ್ಜಿ

ಇಟಲಿಯಲ್ಲಿ ಗುಟ್ಟಾಗಿ ಸಪ್ತಪದಿ ತುಳಿದ ರಾಣಿ ಮುಖರ್ಜಿ

Posted By:
Subscribe to Filmibeat Kannada

ಬಾಲಿವುಡ್ ತಾರೆ ರಾಣಿ ಮುಖರ್ಜಿ ಮದುವೆ ಸದ್ದು ಗದ್ದಲವಿಲ್ಲದಂತೆ ನಡೆದುಹೋಗಿದೆ. ಇಡೀ ಬಾಲಿವುಡ್ ಚಿತ್ರೋದ್ಯಮ ಹಾಗೂ ಅವರ ಅಭಿಮಾನಿಗಳು ರಾಣಿ ಮದುವೆಯನ್ನು ಕಣ್ತುಂಬಿಕೊಳ್ಳಬೇಕೆಂದು ನಿರೀಕ್ಷಿಸಿದ್ದರು. ಆದರೆ ರಾಣಿ ಗಪ್ ಚುಪ್ ಆಗಿ ಮದುವೆಯಾಗಿ ಎಲ್ಲರಿಗೂ ಶಾಕ್ ನೀಡಿದ್ದಾರೆ.

ತನ್ನ ಅನುಗಾಲದ ಗೆಳೆಯ ಆದಿತ್ಯ ಚೋಪ್ರಾ ಅವರ ಕೈಹಿಡಿದಿದ್ದಾರೆ ರಾಣಿ. ತಮ್ಮ ಮದುವೆ ಬಗ್ಗೆ ಇಬ್ಬರಿಗೂ ಬಹಳ ಗೌಪ್ಯತೆ ಕಾಪಾಡಿಕೊಂಡು ಬಂದಿದ್ದರು. ಇದೀಗ ಸ್ವತಃ ರಾಣಿ ಅವರೇ ತಾವಿಬ್ಬರೂ ಮದುವೆಯಾಗಿದ್ದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಬಗ್ಗೆ ಅವರು ಮಾಧ್ಯಮಗಳಿಗೂ ಸಣ್ಣ ಸಂದೇಶ ರವಾನಿಸಿದ್ದಾರೆ. [ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ ಖ್ಯಾತ ತಾರೆ]


"ನನ್ನ ಜೀವನದ ಅತ್ಯಂತ ಸಂತಸದ ಸಮಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಈ ಒಂದು ಸುಂದರ ಗಳಿಗೆಗಾಗಿ ನನ್ನ ಹಿತೈಷಿಗಳು ಸಹ ನಿರೀಕ್ಷಿಸುತ್ತಿದ್ದರು. ಕೇವಲ ಆತ್ಮೀಯರು ಹಾಗೂ ಬಂಧುಬಳಗದ ನಡುವೆ ನಮ್ಮ ಮದುವೆ ಇಟಲಿಯಲ್ಲಿ ಸರಳ ಸುಂದರವಾಗಿ ನೆರವೇರಿತು. ಆದರೆ ನಮ್ಮಿಬ್ಬರ ಮದುವೆಗೆ ಯಶ್ ಅಂಕಲ್ ಇಲ್ಲದ ಕೊರತೆ ಕಾಡುತ್ತಿದ್ದು..." ಎಂದಿದ್ದಾರೆ.

ರಾಣಿ ಮುಖರ್ಜಿ ತಮ್ಮ ನಿಶ್ಚಿತಾರ್ಥವನ್ನೂ ಗುಟ್ಟಾಗಿ ಮಾಡಿಕೊಂಡಿದ್ದರು. ಇವರಿಬ್ಬರೂ ಕಳೆದ ಕೆಲವು ವರ್ಷಗಳಿಂದ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಿಕೊಳ್ಳುತ್ತಿದ್ದರು. ಇವರಿಬ್ಬರದ್ದೂ ಚೋಟಿಸಿ ಲವ್ ಸ್ಟೋರಿ ಏನು ಅಲ್ಲ. ವಯಸ್ಕರ ಪ್ರೇಮ ಕಥೆಯೇ.

"ಮದುವೆ ಎಂಬುದು ನಮ್ಮ ಕೈಯಲ್ಲಿಲ್ಲ. ಅದೆಲ್ಲಾ ದೇವರ ಆಟ" ಎನ್ನುತ್ತಿದ್ದ ರಾಣಿ ಈಗ ದಾಂಪತ್ಯಕ್ಕೆ ಅಡಿಯಿಟ್ಟಿದ್ದಾರೆ. ಆದಿತ್ಯ ಚೋಪ್ರಾ ಅವರ ತಂದೆ ಯಶ್ ಚೋಪ್ರಾ ನಿಧನದ ಕಾರಣ ಇವರಿಬ್ಬರ ಮದುವೆ ಮುಂದೂಡಲಾಗಿತ್ತು. ಪಂಜಾಬಿ ಶಾಸ್ತ್ರ ಸಂಪ್ರದಾಯದ ಪ್ರಕಾರ ಮನೆಯಲ್ಲಿ ಯಾರಾದರೂ ತೀರಿಕೊಂಡರೆ ಒಂದು ವರ್ಷ ಕಾಲ ಯಾವುದೇ ಶುಭ ಕಾರ್ಯಗಳು ಮಾಡುವಂತಿಲ್ಲ. ಹಾಗಾಗಿ ಮದುವೆಯನ್ನು ಮುಂದೂಡಲಾಗಿತ್ತು. (ಏಜೆನ್ಸೀಸ್)

English summary
Rani Mukerjee and Aditya Chopra got married secretly in Italy. The news about them getting married was floating around for sometime now. Finally, they have tied the knot. Aditya chopra and Rani Mukerji were seeing each other for a long time. They have kept the wedding details and venue under wraps. Now, they are happily married.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada