»   » ಬಾಲಿವುಡ್ ನಟಿ ರಾಣಿ ಮುಖರ್ಜಿ ಮಡಿಲಲ್ಲಿ ಮುದ್ದು ರಾಜಕುಮಾರಿ

ಬಾಲಿವುಡ್ ನಟಿ ರಾಣಿ ಮುಖರ್ಜಿ ಮಡಿಲಲ್ಲಿ ಮುದ್ದು ರಾಜಕುಮಾರಿ

Posted By:
Subscribe to Filmibeat Kannada

ಬಾಲಿವುಡ್ ನ ಖ್ಯಾತ ನಟಿ ರಾಣಿ ಮುಖರ್ಜಿ ತಾಯಿ ಆಗಿದ್ದಾರೆ. ನಿನ್ನೆ (ಡಿಸೆಂಬರ್ 9, ಬುಧವಾರ) ಮುಂಬೈನ ಬ್ರೀಜ್ ಕ್ಯಾಂಡಿ ಆಸ್ಪತ್ರೆಯಲ್ಲಿ ರಾಣಿ ಮುಖರ್ಜಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಅಚ್ಚರಿ ಅಂದ್ರೆ, ಹುಟ್ಟಿದ ದಿನವೇ ಮುದ್ದು ರಾಜಕುಮಾರಿಗೆ 'ಆದಿರಾ' ಅಂತ ನಾಮಕರಣ ಕೂಡ ಮಾಡಿದ್ದಾರೆ ರಾಣಿ ಮುಖರ್ಜಿ ಮತ್ತು ಪತಿ ಆದಿತ್ಯ ಛೋಪ್ರಾ.

rani-mukherji

ಆದಿತ್ಯ ಛೋಪ್ರಾ ಹೆಸರಿನ ಮೊದಲೆರಡು ಅಕ್ಷರಗಳು 'ಆದಿ' ಮತ್ತು ರಾಣಿ ಮುಖರ್ಜಿ ಹೆಸರಿನ ಮೊದಲ ಅಕ್ಷರ 'ರಾ' ಸೇರಿಸಿ ತಮ್ಮ ಪುತ್ರಿಗೆ 'ಆದಿರಾ' ಅಂತ ಹೆಸರಿಟ್ಟಿರುವುದು ಸೋಜಿಗ. [ಇಟಲಿಯಲ್ಲಿ ಗುಟ್ಟಾಗಿ ಸಪ್ತಪದಿ ತುಳಿದ ರಾಣಿ ಮುಖರ್ಜಿ]

ರಾಣಿ ಮುಖರ್ಜಿ ಮತ್ತು ಆದಿತ್ಯ ಛೋಪ್ರಾ ಕಳೆದ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರ ಸುಂದರ ದಾಂಪತ್ಯದ ಫಲವಾಗಿ ಹೆಣ್ಣು ಮಗು ಪ್ರಾಪ್ತಿಯಾಗಿದೆ.

English summary
Bollywood Actress Rani Mukerji and husband Aditya Chopra have been blessed with a baby girl on Wednesday (December 9th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada