»   » ತಾರೆ ರಾಣಿ ಮುಖರ್ಜಿ ಮದುವೆಗೆ ಮುಹೂರ್ತ ಫಿಕ್ಸ್

ತಾರೆ ರಾಣಿ ಮುಖರ್ಜಿ ಮದುವೆಗೆ ಮುಹೂರ್ತ ಫಿಕ್ಸ್

Posted By:
Subscribe to Filmibeat Kannada

ಬಹಳ ದಿನಗಳಿಂದ ಬಾಲಿವುಡ್ ನಲ್ಲಿ ಕೇಳಿಬರುತ್ತಿರುವ ಗುಸುಗುಸು ಸುದ್ದಿಗೆ ಬ್ರೇಕ್ ಬೀಳುವ ಸಮಯ ಹತ್ತಿರವಾಗುತ್ತಿದೆ. ನಟಿ ರಾಣಿ ಮುಖರ್ಜಿ ಹಾಗೂ ಚಿತ್ರಕರ್ಮಿ ಆದಿತ್ಯ ಚೋಪ್ರಾ ಅವರು ಹಸೆಮಣೆ ಏರಲಿದ್ದಾರೆ. ಜನವರಿ 2014ರಲ್ಲಿ ರಾಣಿ ಮದುವೆಗೆ ಗಟ್ಟಿಮೇಳ.

ಇಷ್ಟೊತ್ತಿಗಾಗಲೆ ಇವರಿಬ್ಬರಿಗೂ ಮದುವೆಯಾಗಿ ಒಂದು ಮಗುವೂ ಇರಬೇಕಾಗಿತ್ತು. ಆದರೆ ಆದಿತ್ಯ ಅವರ ತಂದೆ ಯಶ್ ಚೋಪ್ರಾ ನಿಧನದ ಕಾರಣ ಇವರಿಬ್ಬರ ಮದುವೆ ಮುಂದೂಡಲಾಗಿತ್ತು. ಈಗ ಜನವರಿ 2014ರಲ್ಲಿ ಮಾಂಗಲ್ಯಂ ತಂತು ನಾನೇನಾ ವೇದಮಂತ್ರ ಮೊಳಗಳಿದೆ.


ಬಾಲಿವುಡ್ ಚಿತ್ರೋದ್ಯಮದಲ್ಲಿ ನಡೆಯಲಿರುವ ಮತ್ತೊಂದು ರಾಯಲ್ ಮದುವೆ ಇದಾಗಲಿದೆ. ಆದಿತ್ಯ ಅವರ ತಾಯಿ ಪಮೇಲಾ ಅವರು ಈಗಾಗಲೆ ಪುರೋಹಿತರನ್ನು ಸಂಪರ್ಕಿಸಿದ್ದು ಶುಭ ಮುಹೂರ್ತ ನಿಗದಿಪಡಿಸಿದ್ದಾರಂತೆ.

ಪಂಜಾಬಿ ಶಾಸ್ತ್ರ ಸಂಪ್ರದಾಯದ ಪ್ರಕಾರ ಮನೆಯಲ್ಲಿ ಯಾರಾದರೂ ತೀರಿಕೊಂಡರೆ ಒಂದು ವರ್ಷ ಕಾಲ ಯಾವುದೇ ಶುಭ ಕಾರ್ಯಗಳು ಮಾಡುವಂತಿಲ್ಲ. ಹಾಗಾಗಿ ಮದುವೆಯನ್ನು ಮುಂದೂಡಲಾಗಿತ್ತು. ಇನ್ನು ರಾಣಿ ಹಾಗೂ ಆದಿತ್ಯ ಕಳೆದ ಕೆಲವು ವರ್ಷಗಳಿಂದ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸಿಕೊಳ್ಳುತ್ತಿದ್ದಾರೆ.

ಇವರಿಬ್ಬರದ್ದೂ ಚೋಟಿಸಿ ಲವ್ ಸ್ಟೋರಿ ಏನು ಅಲ್ಲ. ವಯಸ್ಕರ ಪ್ರೇಮ ಕಥೆಯೇ. ಇವರಿಬ್ಬರೂ ಈಗಾಗಲೆ ಹಾರ ಬದಲಾಯಿಸಿಕೊಂಡಿದ್ದು ಮದುವೆ ಶಾಸ್ತ್ರಗಳೆಲ್ಲಾ ಮುಗಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. "ಮದುವೆ ಎಂಬುದು ನಮ್ಮ ಕೈಯಲ್ಲಿಲ್ಲ. ಅದೆಲ್ಲಾ ದೇವರ ಆಟ" ಎನ್ನುವ ರಾಣಿ ಮುಖರ್ಜಿ ನಿಶ್ಚಿತಾರ್ಥ ಮಾತ್ರ ಗುಟ್ಟಾಗಿ ಮಾಡಿಕೊಂಡಿದ್ದರು. (ಏಜೆನ್ಸೀಸ್)

English summary
According to Bollywood industry sources, “Rani will get married in grand filmi style to Yash Raj Films scion Aditya Chopra in January 2014. The couple was supposed to marry early last year but due to the death of Yash Chopra the plan pushed behind.
Please Wait while comments are loading...