For Quick Alerts
  ALLOW NOTIFICATIONS  
  For Daily Alerts

  ತೆರೆಮೇಲೆ ಬರ್ತಿದೆ ರಾತ್ರೋರಾತ್ರಿ ಸ್ಟಾರ್ ಆಗಿ ಮೆರೆದ ಗಾಯಕಿ ರಾನು ಮಂಡಲ್ ಜೀವನ

  By ಫಿಲ್ಮಿಬೀಟ್ ಡೆಸ್ಕ್
  |

  ಸೋಶಿಯಲ್ ಮೀಡಿಯಾದಲ್ಲಿ ಯಾರು ಬೇಕಾದರೂ ಜನಪ್ರಿಯ ಆಗಬಹುದು. ರಾತ್ರೋ ರಾತ್ರಿ ಸ್ಟಾರ್ ಆಗಿ ಹೊರಹೊಮ್ಮಿದವರು ಅನೇಕರಿದ್ದಾರೆ. ಆದರೆ ಆ ಜನಪ್ರಿಯತೆಯನ್ನು ಉಳಿಸಿಕೊಳ್ಳುವುದು ಸುಲಭವಲ್ಲ. ಬೀದಿಯಲ್ಲಿ ಹಾಡುತ್ತಿದ್ದ ರಾನು ಮಂಡಲ್ ಎನ್ನುವ ಎನ್ನುವ ಗಾಯಕಿ ಸಾಮಾಜಿಕ ಜಾಲತಾಣದಿಂದ ಸಿಕ್ಕಾಪಟ್ಟೆ ಫೇಮಸ್‌ ಆಗಿದ್ದರು. ಆದರೆ ಖ್ಯಾತಿಗಳಿಸಿದ ವೇಗದಲ್ಲೇ ರಾನು ಮತ್ತೆ ಬೀದಿಗೆ ಬಂದಿದ್ದಾರೆ.

  ಮಿಂಚಿ ಅಷ್ಟೆ ವೇಗದಲ್ಲಿ ಮರೆಯಾದ ಗಾಯಕಿ ರಾನು ಮಂಡಲ್ ಜೀವನ ತೆರೆ ಬರಲು ಸಿದ್ಧವಾಗುತ್ತಿದೆ. 2019ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ರಾನು ಮಂಡಲ್ ಜೀವನ ಸಿನಿಮಾ ರೂಪ ತಾಳುತ್ತಿದ್ದಿದೆ. ತೆರಿ ಮೇರಿ ಕಹಾನಿ ಹಾಡಿನ ಮೂಲಕ ಖ್ಯಾತಿ ಗಳಿಸಿದ್ದ ರಾನು ಇದೀಗ ಮತ್ತೆ ರೈಲ್ವೆ ಸ್ಟೇಷನ್ ನಲ್ಲಿ ಹಾಡುತ್ತಿದ್ದಾರೆ ಎನ್ನಲಾಗುತ್ತಿದೆ.

  ಸಾಮಾಜಿಕ ಜಾಲತಾಣದಲ್ಲಿ ರಾನು ಮಂಡಲ್ ಹಾಡು ಸಂಚಲನ ಸೃಷ್ಟಿಮಾಡುತ್ತಿದ್ದಂತೆ ಖ್ಯಾತ ಗಾಯಕ ಹಿಮೇಶ್ ರೇಷಮಿಯಾ, ರಾನು ಅವರಿಗೆ ಸಿನಿಮಾದಲ್ಲಿ ಹಾಡಲು ಅವಕಾಶ ನೀಡಿದರು. ಅಷ್ಟೆಯಲ್ಲ ಸಿಂಗಿಂಗ್ ರಿಯಾಲಿಟಿ ಶೋನಲ್ಲೂ ಅವಕಾಶ ನೀಡಿದರು. ಕೆಲವು ದಿನಗಳು ಸಿಕ್ಕಾಪಟ್ಟೆ ಸದ್ದು ಸಿದ್ದಿಯಲ್ಲಿದ್ದ ರಾನು ಮಂಡಲ್ ಅಷ್ಟೆ ವೇಗವಾಗಿ ಮರೆಗೆ ಸರಿದರು. ಮುಂದೆ ಓದಿ..

   ಸಿದ್ಧವಾಗುತ್ತಿದೆ ರಾನು ಮಂಡಲ್ ಬಯೋಪಿಕ್

  ಸಿದ್ಧವಾಗುತ್ತಿದೆ ರಾನು ಮಂಡಲ್ ಬಯೋಪಿಕ್

  ಇದೀಗ ರಾನು ಮಂಡಲ್ ಬಯೋಪಿಕ್ ತಯಾರಾಗುತ್ತಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಬಯೋಪಿಕ್ ಗೆ ಸಿದ್ಧತೆ ನಡೆಯುತ್ತಿದ್ದು, ಈಗಾಗಲೇ ತಯಾರಿ ಎಲ್ಲಾ ತಯಾರಿ ನಡೆದಿದೆ. ರಾನು ಮಂಡಲ್ ಪಾತ್ರದಲ್ಲಿ ಇಶಿಕಾ ಡೇ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕಾಗಿ ಇಶಿಕಾ ಸಿಕ್ಕಾಪಟ್ಟೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಂತೆ. ಅಂದಹಾಗೆ ರಾನು ಮಂಡಲ್ ಬಯೋಪಿಕ್ ಸಿನಿಮಾಗೆ 'ಮಿಸ್ ರಾನು ಮಾರಿಯಾ' ಎಂದು ಟೈಟಲ್ ಇಡಲಾಗಿದೆ.

  ರಾನು ಪಾತ್ರದಲ್ಲಿ ಇಶಿಕಾ

  ರಾನು ಪಾತ್ರದಲ್ಲಿ ಇಶಿಕಾ

  ಇಶಿಕಾ ಡೇ ತನ್ನ ಪಾತ್ರದ ಬಗ್ಗೆ ಮಾತನಾಡಿದ್ದು, "ಪಾತ್ರಕ್ಕಾಗಿ ಕಷ್ಟಪಟ್ಟು ಡಯಟ್ ಮಾಡಿದ್ದೀನಿ. ನಾನು ತುಂಬಾ ಆಹಾರ ಇಷ್ಟ ಪಡುತ್ತೇನೆ. ಆದರೆ ಪಾತ್ರಕ್ಕಾಗಿ ಸಿಕ್ಕಾಪಟ್ಟೆ ಡಯಟ್ ಮಾಡುತ್ತಿದ್ದೀನಿ. ಎರಡು ತಿಂಗಳಲ್ಲಿ 10 ಕೆಜಿ ತೂಕ ಇಳಿಸಿಕೊಳ್ಳುವ ಗುರಿ ಹೊಂದಿದ್ದೇನೆ" ಎಂದು ಹೇಳಿದ್ದಾರೆ. ಅಂದಹಾಗೆ ಈ ಸಿನಿಮಾದಲ್ಲಿ ಖ್ಯಾತ ಗಾಯಕ ಹಿಮೇಶ್ ರೇಷಮಿಯಾ ಕೂಡ ಇರ್ತಾರಾ ಎನ್ನುವುದು ಕುತೂಹಲ ಮಾಡಿದೆ. ಮೂಲಗಳ ಪ್ರಕಾರ ಹಿಮೇಶ್ ಚಿತ್ರದಲ್ಲಿ ತನ್ನ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಎಲ್ಲೂ ಬಹಿರಂಗ ಪಡಿಸಿಲ್ಲ.

  12 ವರ್ಷಗಳ ಕಾಲ ರೈಲ್ವೆ ಸ್ಟೇಷನ್ ನಲ್ಲಿ ಹಾಡಿದ್ದ ರಾನು

  12 ವರ್ಷಗಳ ಕಾಲ ರೈಲ್ವೆ ಸ್ಟೇಷನ್ ನಲ್ಲಿ ಹಾಡಿದ್ದ ರಾನು

  12 ವರ್ಷಗಳ ಕಾಲ ರೈಲ್ವೆ ಸ್ಟೇಷನ್ ನಲ್ಲಿ ಹಾಡುತ್ತಾ ಜೀವನ ನಡೆಸುತ್ತಿದ್ದ ರಾನು ಮಂಡಲ್ ಬಳಿಕ ಸಾಮಾಜಿಕ ಜಾಲತಾಣದ ಮೂಲಕ ಸ್ಟಾರ್ ಆಗಿ ಹೊರಹೊಮ್ಮಿದ್ದರು. ಬಳಿಕ ತನ್ನ ನವಳಿಕೆಯಿಂದನೇ ಸಿಕ್ಕಾಟ್ಟೆ ಟೀಕೆಗೆ ಗುರಿಯಾದರು. ಬಳಿಕ ಅವಕಾಶಗಳಿಲ್ಲದೆ ರಾನು ಮತ್ತೆ ರೈಲ್ವೆ ಸ್ಟೇಷನ್ ನಲ್ಲಿ ಹಾಡುವಂತಾಗಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

  ಮತ್ತೆ ಬೀದಿಗೆ ಬಂದ ರಾನು

  ಮತ್ತೆ ಬೀದಿಗೆ ಬಂದ ರಾನು

  ಖ್ಯಾತಿ ಗಳಿಸುತ್ತಿದ್ದಂತೆ ರಾನು ಮುಂಬೈನ ಮನೆಯೊಂದಕ್ಕೆ ಶಿಫ್ಟ್ ಆಗಿದ್ದರು. ಆದರೆ ಲಾಕ್‌ಡೌನ್‌ ಸಂದರ್ಭದಲ್ಲಿ ಜೀವನ ಸಾಗಿಸುವುದು ಕಷ್ಟ ಆಗಿದ್ದು ಒಂದೊತ್ತಿನ ಊಟಕ್ಕೂ ಪರದಾಡಿದ್ದರು ಎನ್ನಲಾಗುತ್ತಿದೆ. ಯಾವುದೇ ಕಾರ್ಯಕ್ರಮಗಳು ಇಲ್ಲದ ಕಾರಣ ಅವರ ಆದಾಯದ ಮೂಲವೂ ನಿಂತು ಹೋಯಿತು. ಆ ಕಾರಣದಿಂದಾಗಿ ಮುಂಬೈನಲ್ಲಿ ವಾಸವಾಗಿದ್ದ ಮನೆಯನ್ನು ಬಿಟ್ಟು ಮತ್ತೆ ಅವರು ಬೀದಿಗೆ ಬಂದಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ರಾನು ಎಲ್ಲಿಯೂ ಮಾತನಾಡಿಲ್ಲ.

  English summary
  Ranu Mandal biopic: Eshika dey play lead role in Ranu Mandal biopic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X