For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿ ಸೆಲ್ಫಿ ಕೇಳಿದ್ರೆ ರಂಪ ಮಾಡಿದ ರಾನು ಮೊಂಡಲ್

  |
  Ranu Manda got annoyed at a fan who took selfie

  'ತೇರಿ ಮೇರಿ.. ತೇರಿ ಮೇರಿ...' ಎಂಬ ಹಾಡು ಇತ್ತೀಚಿಗಷ್ಟೆ ದೊಡ್ಡ ಹಿಟ್ ಆಗಿತ್ತು. ಅದಕ್ಕೆ ಕಾರಣ ಹಾಡಿನಲ್ಲಿ ಇರುವ ಇಂಪಾದ ಧ್ವನಿ. ರಾನು ಮೊಂಡಾಲ್ ಎಂಬ ಗಾಯಕಿ ಈ ಹಾಡಿನ ಮೂಲಕ ಉದಯವಾದರು.

  ಮುಂಬೈ ರೈಲು ನಿಲ್ದಾಣದಲ್ಲಿ ಹಾಡುತ್ತಿದ್ದ ಈ ಬಡ ಗಾಯಕಿ ಬಾಲಿವುಡ್ ಪ್ರವೇಶ ಮಾಡಿದರು. ಆದರೆ, ಇದೀಗ ಇದೇ ಗಾಯಕಿ ವರ್ತನೆ ವಿರೋಧಕ್ಕೆ ಕಾರಣವಾಗಿದೆ. ಅಭಿಮಾನಿಯೊಬ್ಬರ ಜೊತೆಗೆ ನಡೆದುಕೊಂಡ ರೀತಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

  'ಕುರುಕ್ಷೇತ್ರ' ಮಲಯಾಳಂ ವರ್ಷನ್ ರಿಲೀಸ್ ಗೆ ದಿನಾಂಕ ನಿಗದಿ'ಕುರುಕ್ಷೇತ್ರ' ಮಲಯಾಳಂ ವರ್ಷನ್ ರಿಲೀಸ್ ಗೆ ದಿನಾಂಕ ನಿಗದಿ

  ಸೋಷಿಯಲ್ ಮೀಡಿಯಾದಲ್ಲಿ, ಸುದ್ದಿ ಮಾಧ್ಯಮಗಳಲ್ಲಿ ರಾನು ಮೊಂಡಲ್ ತಮ್ಮ ಹಾಡಿನ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಹೀಗಾಗಿ ಅವರ ಜೊತೆಗೆ ಫೋಟೋ ತೆಗೆಸಿಕೊಳ್ಳಬೇಕು ಎನ್ನುವುದು ಕೆಲವು ಅಭಿಮಾನಿಗಳ ಆಸೆ ಆಗಿರುತ್ತದೆ. ಆದರೆ, ಇಂತಹ ಸಣ್ಣ ಆಸೆಯನ್ನು ಪೂರೈಸಲು ಹಿಂದೇಟು ಹಾಕಿದ ರಾನು, ನೆಟ್ಟಿಗರ ವಿರೋಧಕ್ಕೆ ಕಾರಣವಾಗಿದ್ದಾರೆ.

  ಅಭಿಮಾನಿಯ ಜೊತೆಗೆ ವಾಗ್ವಾದ

  ಅಭಿಮಾನಿಯ ಜೊತೆಗೆ ವಾಗ್ವಾದ

  ಮುಂಬೈನ ಸಾರ್ವಜನಿಕ ಸ್ಥಳದಲ್ಲಿ ಅಭಿಮಾನಿಯೊಬ್ಬರು ರಾನು ಮೊಂಡಲ್ ಬಳಿಗೆ ಬಂದು ಸೆಲ್ಫಿ ಕೇಳಿದರು. ಹಿಂದೆಯಿಂದ ಬಂದ ಮಹಿಳೆಯೊಬ್ಬರು ರಾನು ಮೊಂಡಲ್ ಭುಜ ಮಟ್ಟಿ ಕರೆದು, ಒಂದು ಫೋಟೋ ನೀಡಿ ಎಂದು ಮನವಿ ಮಾಡಿದರು. ಆದರೆ, ಫೋಟೋ ನೀಡಲು ರಾನು ನಿರಾಕರಿಸಿದರು. ಅಲ್ಲದೆ ಅಭಿಮಾನಿಯ ಜೊತೆಗೆ ವಾಗ್ವಾದ ನಡೆಸಿದರು.

  ರಾನು ಮೊಂಡಲ್ ಬಯೋಪಿಕ್ನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ.!ರಾನು ಮೊಂಡಲ್ ಬಯೋಪಿಕ್ನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ.!

  ಫೋಟೋ ಕೇಳಿದ್ದಕ್ಕೆ ರಂಪ ಮಾಡಿದ ರಾನು

  ಫೋಟೋ ಕೇಳಿದ್ದಕ್ಕೆ ರಂಪ ಮಾಡಿದ ರಾನು

  ಒಂದು ಫೋಟೋ ಕೇಳಿದ್ದೇ ತಪ್ಪು, ತಮ್ಮನ್ನು ಮಾತನಾಡಿಸಿದ್ದೆ ತಪ್ಪು ಎನ್ನುವ ಹಾಗೆ ಅಭಿಮಾನಿಯ ಮೇಲೆ ರಾನು ಮೊಂಡಲ್ ಗರಂ ಆದರು. ಯಾಕೆ ನನ್ನನ್ನು ಮುಟ್ಟಿ ಮಾತನಾಡಿಸಿದೆ, ಫೋಟೋ ನೀಡಲು ಆಗುವುದಿಲ್ಲ ಎಂದು ರಂಪ ಮಾಡಿದರು. ಅಲ್ಲೇ ಇದ್ದ ಒಬ್ಬರು ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಶುರುವಾಯ್ತು.

  ಸೋಷಿಯಲ್ ಮೀಡಿಯಾದಲ್ಲಿ ವಿರೋಧ

  ಸೋಷಿಯಲ್ ಮೀಡಿಯಾದಲ್ಲಿ ವಿರೋಧ

  ಕೆಲ ತಿಂಗಳುಗಳ ಹಿಂದೆಯಷ್ಟೇ ರಾನು ಮೊಂಡಲ್ ಹಾಡಿದ ವಿಡಿಯೋವನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಅವರ ಇಂಪಾದ ಧ್ವನಿ ಕೇಳಿ ಬೆನ್ನು ತಟ್ಟಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಜೂನಿಯರ್ ಲತಾ ಮಂಗೇಶ್ವರ್ ಎಂದೆಲ್ಲ ಹೊಗಳಿದ್ದರು. ಆದರೆ, ಅಭಿಮಾನಿಯ ಜೊತೆಗೆ ರಾನು ನಡೆದುಕೊಂಡ ವರ್ತನೆಗೆ ಇದೇ ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿದೆ. ಮೂರು ತಿಂಗಳಿಗೆ ಎಲ್ಲ ಉಲ್ಟಾ ಆಗಿದೆ.

  ಬಡ ಗಾಯಕಿ ರಾನು ಮೊಂಡಲ್ ಗೆ ದುಬಾರಿ ಗಿಫ್ಟ್ ಕೊಟ್ಟ ಸಲ್ಮಾನ್ ಖಾನ್ಬಡ ಗಾಯಕಿ ರಾನು ಮೊಂಡಲ್ ಗೆ ದುಬಾರಿ ಗಿಫ್ಟ್ ಕೊಟ್ಟ ಸಲ್ಮಾನ್ ಖಾನ್

  ಜುಲೈ ತಿಂಗಳಿನಲ್ಲಿ ವಿಡಿಯೋ ವೈರಲ್ ಆಗಿತ್ತು

  ಜುಲೈ ತಿಂಗಳಿನಲ್ಲಿ ವಿಡಿಯೋ ವೈರಲ್ ಆಗಿತ್ತು

  ಜುಲೈ ತಿಂಗಳಿನಲ್ಲಿ ಪಶ್ಚಿಮ ಬಂಗಾಳದ ರಣಫಾಟ್ ನಲ್ಲಿ ರಾನು ಮೊಂಡಲ್ ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣ ವೈರಲ್ ಆಗಿತ್ತು. ನಂತರ ಒಂದು ರಿಯಾಲಿಟಿ ಶೋದಲ್ಲಿ ಹಾಡುವ ಅವಕಾಶವೂ ಅವರಿಗೆ ಬಂದಿತ್ತು. ಅದರ ಬಳಿಕ ಹಿಮೇಶ್ ರೇಶಮಿಯಾ ತಮ್ಮ ಹಾಡು ಹಾಡಿಸಿದರು. ಈ ಹಾಡು ರಾನುಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತ್ತು.

  English summary
  Singer Rani Mondal got angry on her fan for asking a selfie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X