Just In
Don't Miss!
- Automobiles
ದೇಶಾದ್ಯಂತ ಹತ್ತು ಹೊಸ ಶೋರೂಂಗಳನ್ನು ತೆರೆಯಲಿದೆ ಸಿಟ್ರನ್
- News
ಫಿಲಿಪ್ಪೈನ್ಸ್ನಲ್ಲಿ 7.೦ ತೀವ್ರತೆಯ ಪ್ರಬಲ ಭೂಕಂಪ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 21ರ ಚಿನ್ನ, ಬೆಳ್ಳಿ ದರ
- Lifestyle
ವಾಸ್ತು ಪ್ರಕಾರ ನಿಮ್ಮ ಮನೆಯ ಬಣ್ಣ ಈ ರೀತಿ ಇದ್ದರೆ ಒಳ್ಳೆಯದು
- Sports
ಥೈಲ್ಯಾಂಡ್ ಓಪನ್: ಸಮೀರ್, ಸಾತ್ವಿಕ್-ಪೊನ್ನಪ್ಪ ಕ್ವಾರ್ಟರ್ ಫೈನಲ್ಗೆ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ವರ್ಷ ಆಚರಣೆಗಾಗಿ ಮುಂಬೈ ಬಿಟ್ಟು ಹೊರನಡೆದ ದೀಪಿಕಾ-ರಣ್ವೀರ್ ದಂಪತಿ
ಬಾಲಿವುಡ್ ತಾರಾ ದಂಪತಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮಂಗಳವಾರ ಬೆಳಗ್ಗೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹೊಸ ವರ್ಷದ ಆಚರಣೆಗಾಗಿ ಮುಂಬೈ ನಗರ ಬಿಟ್ಟು ಹೊರ ನಡೆದಿದ್ದಾರೆ ಎಂದು ಹೇಳಲಾಗಿದೆ.
ಕೈ ಕೈ ಹಿಡಿದು ಸ್ಟೈಲಿಶ್ ಲುಕ್‌ನಲ್ಲಿ ಪ್ರತ್ಯಕ್ಷವಾದ ಈ ಜೋಡಿಯ ಏರ್‌ಪೋರ್ಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
'ನನ್ನ ಜೀವನದಲ್ಲಿ ಅತ್ಯಂತ ಕಷ್ಟದ ಸಿನಿಮಾ': ಬಾಜಿರಾವ್ ಮಸ್ತಾನಿಗೆ 5 ವರ್ಷ
ರಣ್ವೀರ್ ಮತ್ತು ದೀಪಿಕಾ ಜೋಡಿ ಹೊಸ ವರ್ಷದ ಸಂಭ್ರಮಾಚರಣೆಯನ್ನು ಎಲ್ಲಿ ಆಚರಿಸಲಿದ್ದಾರೆ ಎನ್ನುವುದರ ಕುರಿತು ಸದ್ಯಕ್ಕೆ ಮಾಹಿತಿ ಇಲ್ಲ. ಆದ್ರೆ, ಎರಡು ದಿನಗಳ ಮುಂಚಿತವಾಗಿಯೇ ಮುಂಬೈನಿಂದ ಹೊರಗೆ ಹೋಗಿದ್ದಾರೆ.
ಇಬ್ಬರು ಲಾಂಗ್ ಕೋಟ್ ಧರಿಸಿದ್ದರು. ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದರು. ದೀಪಿಕಾ ಕೈಯಲ್ಲಿ ಸಣ್ಣದೊಂದು ಬ್ಯಾಗ್ ಇತ್ತು. ರಣ್ವೀರ್ ಕೈಯಲ್ಲೂ ಇನ್ನೊಂದು ಬ್ಯಾಗ್ ಇತ್ತು. ಅದು ಸಹ ದೀಪಿಕಾ ಪಡುಕೋಣೆ ಅವರ ಬ್ಯಾಗ್ ಆಗಿತ್ತು.
'ಮನರಂಜನೆಯೊಂದೇ ನನ್ನ ಧ್ಯೇಯ': ದಶಕದ ಸಂಭ್ರಮದಲ್ಲಿ ರಣ್ವೀರ್ ಸಿಂಗ್
ಪ್ರಸ್ತುತ ದೀಪಿಕಾ ಪಡುಕೋಣೆ ಶಕುನ್ ಭತ್ರಾ ಅವರ ಇನ್ನು ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಕಡೆ ರೋಹಿತ್ ಶೆಟ್ಟಿ ಅವರ ಸರ್ಕಸ್ ಚಿತ್ರದಲ್ಲಿ ರಣ್ವೀರ್ ಸಿಂಗ್ ನಟಿಸುತ್ತಿದ್ದಾರೆ. ಈಗ ಶೂಟಿಂಗ್‌ಗೆ ಬ್ರೇಕ್ ಹಾಕಿರುವ ಜೋಡಿ ಹೊಸ ವರ್ಷದ ಆಚರಣೆಗಾಗಿ ಪ್ಲಾನ್ ಮಾಡಿದೆ.