»   » ನಟ ರಣವೀರ್ ಸಿಂಗ್ ಗೆ ಡೆಂಗ್ಯೂ ಅಟ್ಯಾಕ್

ನಟ ರಣವೀರ್ ಸಿಂಗ್ ಗೆ ಡೆಂಗ್ಯೂ ಅಟ್ಯಾಕ್

Posted By:
Subscribe to Filmibeat Kannada

ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಅವರಿಗೆ ಡೆಂಗ್ಯೂ ಜ್ವರ ಇರುವುದು ಪತ್ತೆಯಾಗಿದೆ. ಸದ್ಯಕ್ಕೆ ಅವರು ಮುಂಬೈನ ಸುಬರ್ ಬನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇತ್ತೀಚೆಗೆ ಅವರು 'ಗನ್ ಡೇ' ಚಿತ್ರದ ಚಿತ್ರೀಕರಣಕ್ಕಾಗಿ ಪಶ್ಚಿಮ ಬಂಗಾಳಕ್ಕೆ ಹೋಗಿದ್ದರು. ಆ ಭಾಗದ ಚಿತ್ರೀಕರಣದಲ್ಲಿ ಪ್ರಿಯಾಂಕಾ ಚೋಪ್ರಾ, ಅರ್ಜುನ್ ಕಪೂರ್ ಭಾಗಿಯಾಗಿದ್ದರು. ಚಿತ್ರೀಕರಣದಲ್ಲೇ ರಣವೀರ್ ಅವರಿಗೆ ವಿಪರೀತ ಜ್ವರ ಕಾಣಿಸಿಕೊಂಡಿದೆ.

Ranveer Singh

ಆದರೂ ಚಿತ್ರೀಕರಣ ನಿಲ್ಲಿಸದರೆ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ ರಣವೀರ್ ಸಿಂಗ್. ಬಳಿಕ ಮುಂಬೈಗೆ ಬಂದು ವೈದ್ಯರಲ್ಲಿ ಪರೀಕ್ಷಿಸಿಕೊಂಡಾಗ ಅವರು ಡೆಂಗ್ಯೂ ಜ್ವರದಿಂದ ಬಳಲುತ್ತಿರುವುದು ಗೊತ್ತಾಗಿದೆ.

ಜ್ವರವನ್ನೂ ಲೆಕ್ಕಿಸದೆ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿವುದು ವೈದ್ಯರನ್ನೂ ಚಕಿತಗೊಳಿಸಿದೆ. 'ಗನ್ ಡೇ' ಚಿತ್ರದ ಜೊತೆಗೆ 'ರಾಮ್ ಲೀಲಾ' ಚಿತ್ರದಲ್ಲೂ ರಣವೀರ್ ಸಿಂಗ್ ಬಿಜಿಯಾಗಿದ್ದಾರೆ. ಈಗಾಗಲೆ 'ರಾಮ್ ಲೀಲಾ' ಚಿತ್ರದ ಟ್ರೇಲರ್ ಸೂಪರ್ ಡೂಪರ್ ಹಿಟ್ ಆಗಿದೆ. ರಣವೀರ್ ಉತ್ಸಾಹವನ್ನು ಇಮ್ಮಡಿಸಿದೆ. ರಣವೀರ್ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅವರ ಅಭಿಮಾನಿಗಳು ಕೋರಿಕೊಳ್ಳುತ್ತಿದ್ದಾರೆ. ತೀರಾ ಇತ್ತೀಚೆಗೆ ರಣವೀರ್ ಗೆ ದೀಪಿಕಾ ಪಡುಕೋಣೆ ಗನ್ ತೋರಿಸಿದ್ದರು. (ಏಜೆನ್ಸೀಸ್)

English summary
Bollywood star Ranveer Singh has been recently admitted to the hospital, after he was diagnosed with a severe case of dengue fever. As per the reports, Ranveer is currently admitted in a suburban hospital.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada