For Quick Alerts
  ALLOW NOTIFICATIONS  
  For Daily Alerts

  ಬಹಿರಂಗವಾಗಿ ಅಕ್ಷಯ್ ಕುಮಾರ್ ಕಾಲಿಗೆ ಬಿದ್ದು ಕ್ಷಮೆ ಕೇಳಿದ ರಣ್ವೀರ್ ಸಿಂಗ್

  |

  ಸ್ಟಾರ್ ಬಾಲಿವುಡ್ ನಟ, ದೀಪಿಕಾ ಪಡುಕೋಣೆ ಪತಿ ರಣ್ವೀರ್ ಸಿಂಗ್ ಹಿರಿಯ ನಟ ಅಕ್ಷಯ್ ಕುಮಾರ್, ಅಜಯ್ ದೇವಗನ್ ಕಾಲಿಗೆ ಬಿದ್ದು ಕ್ಷಮೆ ಕೇಳಿರುವ ಘಟನೆ ನಡೆದಿದೆ.

  ಈ ಯಮ್ಮ ಕನ್ನಡ ಮಾತಾಡಿದ್ದೇ ನೋಡಿಲ್ಲ ನಾನು | Shivarjuna | Nayana | Sadhu Kokila | Filmibeat Kannada

  ಹೌದು, ಇದು ನಿಜ ರಣ್ವೀರ್ ಸಿಂಗ್ ಹಿರಿಯ ನಟರಾದ ಅಕ್ಷಯ್ ಕುಮಾರ್, ಅಜಯ್ ದೇವಗನ್, ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ಅವರುಗಳ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ.

  ಆಗಿದ್ದಿಷ್ಟು, ಸೂರ್ಯವಂಶಿ ಚಿತ್ರದ ಪ್ರಮೋಷನ್ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು. ಸೂರ್ಯವಂಶಿ ಚಿತ್ರದಲ್ಲಿ ನಟರುಗಳಾದ ಅಕ್ಷಯ್ ಕುಮಾರ್, ಅಜಯ್ ದೇವಗನ್, ಕತ್ರೀನಾ ಕೈಫ್, ನಿರ್ದೇಶಕ ರೋಹಿತ್ ಶೆಟ್ಟಿ, ಕರಣ್ ಜೋಹರ್ ಅವರು ಮೊದಲೇ ಕಾರ್ಯಕ್ರಮಕ್ಕೆ ಬಂದಿದ್ದರು. ನಿಗದಿತ ಸಮಯ ಮೀರಿದರೂ ರಣ್ವೀರ್ ಸಿಂಗ್ ಸುಳಿವಿಲ್ಲ.

  ತಡವಾಗಿ ಆಗಮಿಸಿದ ರಣ್ವೀರ್ ಸಿಂಗ್ ಅವರನ್ನು ವ್ಯಂಗ್ಯವಾಗಿ ಚಪ್ಪಾಳೆ ತಟ್ಟುವ ಮೂಲಕ ಹಿರಿಯ ನಟರು ಸ್ವಾಗತಿಸಿದರು. ಕೂಡಲೇ ರಣ್ವೀರ್ ಸಿಂಗ್ ಕಿವಿ ಹಿಡಿದುಕೊಂಡು ಬಸ್ಕಿ ಹೊಡೆದು ತಪ್ಪಾಯಿತೆಂದು ಕೇಳಿಕೊಂಡರು.

  ಹಿರಿಯ ನಟರ ಕಾಲಿಗೆ ಬಿದ್ದು ಕ್ಷಮೆ ಕೋರಿದ ಅಕ್ಷಯ್

  ಹಿರಿಯ ನಟರ ಕಾಲಿಗೆ ಬಿದ್ದು ಕ್ಷಮೆ ಕೋರಿದ ಅಕ್ಷಯ್

  ಇಷ್ಟಕ್ಕೆ ಸುಮ್ಮನಾಗದೆ ಮಾಧ್ಯಮಗಳ ಮುಂದೆಯೇ ಅಕ್ಷಯ್ ಕುಮಾರ್, ಅಜಯ್ ದೇವಗನ್, ಕರಣ್ ಜೋಹರ್ ಕಾಲಿಗೆ ಬಿದ್ದು ಕ್ಷಮೆ ಕೋರಿದರು. ಹಿಂದೆ ನಿಂತಿದ್ದ ಕತ್ರಿನಾ ಕೈಫ್ ಕಾಲಿಗೆ ಬೀಳಲಿಲ್ಲ ಬದಲಿಗೆ ಅವರನ್ನು ಅಪ್ಪಿಕೊಂಡು ಕ್ಷಮೆ ಕೋರಿದರು.

  ''ಸೀನಿಯರ್ ನಟರನ್ನು ಕಾಯಿಸಿದ ಮೊದಲ ವ್ಯಕ್ತಿ ರಣ್ವೀರ್''

  ''ಸೀನಿಯರ್ ನಟರನ್ನು ಕಾಯಿಸಿದ ಮೊದಲ ವ್ಯಕ್ತಿ ರಣ್ವೀರ್''

  ಇಷ್ಟಕ್ಕೆ ಸುಮ್ಮನಾಗದ ಅಕ್ಷಯ್ ಕುಮಾರ್, 'ಈ ವ್ಯಕ್ತಿ (ರಣ್ವೀರ್ ಸಿಂಗ್) ನಾಲ್ಕು ಮಂದಿ ಸೀನಿಯರ್ ನಟರನ್ನು ನಲವತ್ತು ನಿಮಿಷಗಳಿಗಿಂತಲೂ ಹೆಚ್ಚು ಕಾಲ ಕಾಯುವಂತೆ ಮಾಡಿದ ಮೊದಲ ಜ್ಯೂನಿಯರ್ ನಟ' ಎಂದು ದೂರಿದರು.

  ತಡವಾಗಿ ಬಂದಿದ್ದಕ್ಕೆ ಸಬೂಬು ನೀಡಿದ ರಣ್ವೀರ್

  ತಡವಾಗಿ ಬಂದಿದ್ದಕ್ಕೆ ಸಬೂಬು ನೀಡಿದ ರಣ್ವೀರ್

  ಇದಕ್ಕೆ ಸಬೂಬು ನೀಡಿದ ರಣ್ವೀರ್ ಸಿಂಗ್, 'ನಾನು ಬರುತ್ತಿದ್ದ ದಾರಿಯಲ್ಲಿ ಮೆಟ್ರೋ ನಿರ್ಮಾಣ ಕಾಮಗಾರಿ ಮಾಡುತ್ತಿದ್ದರು, ಅದಕ್ಕೆ ತಡವಾಯಿತು' ಎಂದರು. ಆದರೆ ಅಕ್ಷಯ್ ಇದನ್ನು ಒಪ್ಪಲಿಲ್ಲ, ಹತ್ತಿರ ಮನೆ ಇದ್ದವನು ಇಷ್ಟು ತಡವಾಗಿ ಬಂದಿದ್ದಾನೆ ನೋಡಿ ಎಂದು ಮಾಧ್ಯಮಗಳ ಮುಂದೆ ರಣ್ವೀರ್ ಮೇಲೆ ಆರೋಪ ಹೊರಿಸಿದರು.

  ಮಾತನಾಡಲು ಯೋಗ್ಯನೇ ಅಲ್ಲ ನೀನು ಎಂದ ಅಕ್ಷಯ್ ಕುಮಾರ್

  ಮಾತನಾಡಲು ಯೋಗ್ಯನೇ ಅಲ್ಲ ನೀನು ಎಂದ ಅಕ್ಷಯ್ ಕುಮಾರ್

  ರಣ್ವೀರ್ ಸಹ ಅಕ್ಷಯ್ ಕುಮಾರ್ ಅವರಿಗೆ ಟಾಂಗ್ ನೀಡಿ, ಸಾರ್ ನಾನು ಕಾರಿನಲ್ಲಿ ಬರುತ್ತೇನೆ, ನೀವೇನೋ ಹೆಲಿಕಾಪ್ಟರ್ ಮೂಲಕ ಬರುತ್ತೀರಿ ಎಂದರು. ಇದಕ್ಕೆ ಅಕ್ಷಯ್ ಕುಮಾರ್, 'ಮಾತನಾಡಲು ಯೋಗ್ಯತೆಯೇ ಇಲ್ಲ ನಿನಗೆ, ಯಾರಾದರೂ ನಲವತ್ತು ನಿಮಿಷ ತಡವಾಗಿ ಬರುತ್ತಾರಾ'' ಎಂದು ಗದರಿದರು.

  ತಪ್ಪಿಸಿಕೊಂಡು ಶೌಚಾಲಯಕ್ಕೆ ಓಡಿಹೋದ ರಣ್ವೀರ್

  ತಪ್ಪಿಸಿಕೊಂಡು ಶೌಚಾಲಯಕ್ಕೆ ಓಡಿಹೋದ ರಣ್ವೀರ್

  ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ ರಣ್ವೀರ್ ಸಿಂಗ್, 'ನಾನು ಬಾತ್‌ರೂಂ ಗೆ ಹೋಗಿ ಅಡಗಿಕೊಂಡು ಬಿಡುತ್ತೇನೆ, ಎಂದು ಶೌಚಲಯದ ಕಡೆಗೆ ಓಡಿದರು, ಅಕ್ಷಯ್ ಕುಮಾರ್, 'ಕ್ಯಾಮೆರಾ ಮನ್ ಅನ್ನು ಕರೆದು ಆತನ ಹಿಂದೆ ಬಾತ್‌ ರೂಂ ಗೆ ಹೋಗು' ಎಂದರು. ಕೂಡಲೇ ರಣ್ವೀರ್ ಸಿಂಗ್ ಕ್ಯಾಮೆರಾದಿಂದ ತಪ್ಪಿಸಿಕೊಂಡು ಓಡಿ ಹೊದರು.

  English summary
  Bollywood star Ranveer Singh fall on feet of Akshay Kumar, Ajay Devgan and Karan Johar's feet for coming late to program.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X