Don't Miss!
- News
Namma Metro: ಬೆಂಗಳೂರಿನಲ್ಲೇ ಅತ್ಯಂತ ದೊಡ್ಡ ಬೃಹತ್ ಮೆಟ್ರೋ ನಿಲ್ದಾಣ ಸ್ಥಾಪನೆ, ಎಲ್ಲಿ?, ಹಣ ಎಷ್ಟು?
- Automobiles
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Finance
ಅದಾನಿ ಗ್ರೂಪ್ ಬಿಕ್ಕಟ್ಟಿನ ಮಧ್ಯೆ ಭರವಸೆ ನೀಡಿದ ವಿತ್ತ ಸಚಿವೆ, ಹೇಳಿದ್ದೇನು?
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಾಲಿವುಡ್‌ಗೆ ಮತ್ತೊಂದು ಸೋಲು: ರಣ್ವೀರ್‌ಗೆ ಸತತ ಎರಡನೇ ಸೋಲು, ಸಿನಿಮಾ ಗಳಿಕೆ ಎಷ್ಟು?
ಬಾಲಿವುಡ್ ಸಿನಿಮಾಗಳು ಈ ವರ್ಷ ಒಂದರ ಹಿಂದೊಂದರಂತೆ ಸೋಲುತ್ತಲಿವೆ. ಬಾಲಿವುಡ್‌ನ ಪಕ್ಕಾ ಪೈಸಾ ವಸೂಲ್ ನಟರೆಂದು ಖ್ಯಾತಿ ಗಳಿಸಿದ್ದವರ ಸಿನಿಮಾಗಳು ಸಹ ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಪ್ರದರ್ಶನ ತೋರುತ್ತಿವೆ.
ಈ ವರ್ಷದಲ್ಲಿ 'ಬ್ರಹ್ಮಸ್ತ್ರ' ಸಿನಿಮಾದ ಹೊರತಾಗಿ ಇನ್ನಾವ ಸಿನಿಮಾವೂ ದೊಡ್ಡ ಮಟ್ಟದಲ್ಲಿ ಹಿಟ್ ಆಗಿಲ್ಲ. ಇನ್ನೇನು ವರ್ಷ ಮುಗಿಯುವ ಸಮಯದಲ್ಲಿ ಬಾಲಿವುಡ್‌ನ ಪಕ್ಕಾ ಹಿಟ್ ನಿರ್ದೇಶಕ ಎನಿಸಿಕೊಂಡಿರುವ ರೋಹಿತ್ ಶೆಟ್ಟಿಯ ಸಿನಿಮಾ ಬಿಡುಗಡೆ ಆಗಿದ್ದು, ಅದೂ ಸಹ ಸೋತು ಬಾಲಿವುಡ್‌ನ ಸೋಲಿನ ಸರಣಿಯನ್ನು ಮುಂದುವರೆಸಿದೆ.
ರೋಹಿತ್ ಶೆಟ್ಟಿ ನಿರ್ದೇಶನ ಮಾಡಿ ಖ್ಯಾತ ನಟ ರಣ್ವೀರ್ ಸಿಂಗ್ ನಟಿಸಿದ್ದ 'ಸರ್ಕಸ್' ಸಿನಿಮಾ ಡಿಸೆಂಬರ್ 23 ರಂದು ಬಿಡುಗಡೆ ಆಗಿದೆ. ಆದರೆ ಮೊದಲ ದಿನ ಬಹಳ ನೀರಸ ಪ್ರದರ್ಶನವನ್ನು ಸಿನಿಮಾ ಕಂಡಿದೆ.
'ಸರ್ಕಸ್' ಸಿನಿಮಾ ಮೊದಲ ದಿನ ದೇಶದಾದ್ಯಂತ ಮೂರು ಲಕ್ಷಕ್ಕೂ ಕಡಿಮೆ ಟಿಕೆಟ್ ಮಾರಾಟ ಮಾಡಿದ್ದು, ಗಳಿಸಿರುವುದು ಕೇವಲ 6 ಕೋಟಿ ಹಣವಷ್ಟೆ. ಇದು ಅತ್ಯಂತ ಕಳಪೆ ಓಪನಿಂಗ್ ಎನಿಸಿಕೊಂಡಿದೆ.
ರೋಹಿತ್ ಶೆಟ್ಟಿಯ ಸಿನಿಮಾಗಳು ಇತ್ತೀಚೆಗೆ ಸೋತೇ ಇರಲಿಲ್ಲ. ಸಿಂಘಂ, ಸೂರ್ಯವಂಶಿ ಇನ್ನಿತರೆ ಸಿನಿಮಾಗಳು ಸತತವಾಗಿ ಸೂಪರ್ ಹಿಟ್ ಆಗಿದ್ದವು. ಆದರೆ ಈಗ 'ಸರ್ಕಸ್' ಸಿನಿಮಾ ಸೋತಿದೆ. ಇದು ರೋಹಿತ್ ಶೆಟ್ಟಿಗೆ ಹಿನ್ನಡೆ ಎನಿಸಿಕೊಂಡಿದೆ.
ರಣ್ವೀರ್ ಸಿಂಗ್‌ಗೆ ಇದು ಈ ವರ್ಷದ ಎರಡನೇ ಹೀನಾಯ ಸೋಲಾಗಿದೆ. ಇದೇ ವರ್ಷದ ಆರಂಭದಲ್ಲಿ ಬಿಡುಗಡೆ ಆಗಿದ್ದ 'ಜಯೇಶ್‌ಭಾಯ್ ಜೋರ್ದಾರ್' ಸಿನಿಮಾ ಸಹ ಅಟ್ಟರ್ ಫ್ಲಾಪ್ ಆಗಿತ್ತು. ಹೆಣ್ಣು ಮಕ್ಕಳನ್ನು ಉಳಿಸುವ ಕುರಿತಾದ ಕತೆಯನ್ನು ಒಳಗೊಂಡಿದ್ದ ಆ ಸಿನಿಮಾ ವಿಮರ್ಶಕರಿಂದ ಒಳ್ಳೆಯ ಅಭಿಪ್ರಾಯ ಪಡೆದುಕೊಂಡರೂ ಬಾಕ್ಸ್ ಆಫೀಸ್‌ನಲ್ಲಿ ಹೀನಾಯವಾಗಿ ಸೋತಿತು.
ಆದರೆ 'ಸರ್ಕಸ್' ಸಿನಿಮಾ ವಿಮರ್ಶಕರಿಂದಲೂ ತೀವ್ರ ಟೀಕೆಗೆ ಒಳಗಾಗಿದೆ. ಈ ಸಿನಿಮಾದಲ್ಲಿ ರಣ್ವೀರ್ ಸಿಂಗ್ ದ್ವಿಪಾತ್ರದಲ್ಲಿ ನಟಿಸಿದ್ದು, ಸಿನಿಮಾ ಹಾಸ್ಯಪ್ರಧಾನ ಸಿನಿಮಾ ಆಗಿದೆ. ಸಿನಿಮಾದ ಹಾಸ್ಯಕ್ಕೆ ಸೂಕ್ತವಾದ ಲಾಜಿಕ್ ಇಲ್ಲವೆಂದು ಟೀಕೆ ಮಾಡಿದ್ದಾರೆ ವಿಮರ್ಶಕರು. ಸರ್ಕಸ್ ಸಿನಿಮಾದಲ್ಲಿ ಪೂಜಾ ಹೆಗ್ಡೆ, ಜಾಕ್ವೆಲಿನ್ ಫರ್ನಾಂಡೀಸ್ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.