For Quick Alerts
  ALLOW NOTIFICATIONS  
  For Daily Alerts

  ರಣ್ವೀರ್ ಸಿಂಗ್ ಐಷಾರಾಮಿ ಕಾರಿಗೆ ಬೈಕ್ ಡಿಕ್ಕಿ: ವಿಡಿಯೋ ವೈರಲ್

  |

  ಬಾಲಿವುಡ್ ನಟ ರಣ್ವೀರ್ ಸಿಂಗ್ ಕಾರಿನಲ್ಲಿ ಚಲಿಸುತ್ತಿದ್ದಾಗ ಬೈಕ್ ಸಾವಾರನೊಬ್ಬ ಹಿಂದೆ ಯಿಂದ ಬಂದು ಗುದ್ದಿರುವ ಘಟನೆ ಇಂದು ಬೆಳಗ್ಗೆ ಮುಂಬೈ ರಸ್ತೆಯಲ್ಲಿ ನಡೆದಿದೆ. ರಣ್ವೀರ್ ಸಿಂಗ್ ಐಷಾರಾಮಿ ಮರ್ಸಿಡಿಸ್ ಕಾರಿನಲ್ಲಿ ಚಲಾಯಿಸುತ್ತಿದ್ದರು. ಅದೃಷ್ಟವಶಾತ್ ಯಾರಿಗೂ ಏನೂ ಆಗಿಲ್ಲ.

  ರಣ್ವೀರ್ ಕಾರಿಗೆ ಬೈಕ್ ಡಿಕ್ಕಿ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಬಳಿಕ ರಣ್ವೀರ್ ಸಿಂಗ್ ಗಾಬರಿಯಾಗಿ ಕಾರಿನ ಇಳಿದು ಓಡಿ ಬಂದಿದ್ದಾರೆ. ಬೈಕ್ ಸಾವಾರನಿಗೆ ಏನಾದರು ತೊಂದರೆ ಆಗಿದೆಯಾ ಎಂದು ನೋಡಿದ್ದಾರೆ. ಏನು ಆಗಿಲ್ಲ ಎಂದು ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ. ಬೈಕ್ ಸವಾರನನ್ನು ವಿಚಾರಿಸಿ ಬಳಿಕ ತನ್ನ ಐಷಾರಾಮಿ ಕಾರಿಗೆ ಏನಾದರೂ ಹಾನಿ ಆಗಿದೆಯೋ ಇಲ್ಲವೋ ಎಂದು ಖಚಿತ ಪಡಿಸಿಕೊಂಡು ಮತ್ತೆ ಪ್ರಯಾಣ ಮುಂದುವರೆಸಿದ್ದಾರೆ.

  1983ರ ವಿಶ್ವಕಪ್ ಕಣ್ತುಂಬಿಕೊಳ್ಳಲು ರೆಡಿಯಾಗಿ: '83' ಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್

  ಈ ಘಟನೆ ಬಳಿಕ ಮುಂಬೈನ ನಡು ರಸ್ತೆಯಲ್ಲಿ ಜನ ಮುತ್ತಿಗೆ ಹಾಕಿದ್ದರು. ಏನಾಗಿದೆ ಎಂದು ಗೊತ್ತಾಗದೆ ಗಾಬರಿಯಲ್ಲಿ ಜನ ವೀಕ್ಷಿಸುತ್ತಿದ್ದರು. ಅಲ್ಲಿಂದ ರಣ್ವೀರ್ ಸೀದಾ ಯಶ್ ರಾಜ್ ಫಿಲ್ಮ್ ಸ್ಟುಡಿಯೋಗೆ ತೆರಳಿದ್ದಾರೆ.

  ಸರ್ಜಾ ಕುಟುಂಬಕ್ಕೆ ನಾಳೆ ಮಹತ್ವದ ದಿನ | Chiranjeevi Sarja Family | Filmibeat Kannada

  ಕಳೆದ ವರ್ಷ ಗಲ್ಲಿ ಬಾಯ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ರಣ್ವೀರ್ ಇದೀಗ 83 ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. 1983ರ ಭಾರತ ಕ್ರಿಕೆಟ್ ತಂಡ ಚೊಚ್ಚಲ ವಿಶ್ವಕಪ್ ಗೆದ್ದು ಬೀಗಿದ ಘಟನೆಯನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ರಣ್ವೀರ್ ಕ್ಯಾಪ್ಟನ್ ಕಪಿಲ್ ದೇವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ ಸಹ ನಟಿಸಿದ್ದಾರೆ. ಡಿಸೆಂಬರ್ ನಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

  English summary
  Bollywood Actor Ranveer singh's Mercedes acr hit bt bike. actor steps out to inspect.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X