For Quick Alerts
  ALLOW NOTIFICATIONS  
  For Daily Alerts

  ಧೋನಿ ಪಾದದಡಿ ಕುಳಿತ ರಣ್ವೀರ್: ಮಾಹಿ ಬಗ್ಗೆ ಭಾವನಾತ್ಮಕ ಪೋಸ್ಟ್

  |

  ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕವೂ ಧೋನಿ ಖ್ಯಾತಿ ಸ್ವಲ್ಪವೂ ಕಡಿಮೆಯಾಗಿಲ್ಲ. ದಿನೇ ದಿನೇ ಹೆಚ್ಚಾಗುತ್ತಲೇ ಸಾಗಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಇತ್ತೀಚಿಗಷ್ಟೆ ಬಾಲಿವುಡ್ ಸ್ಟಾರ್‌ಗಳ ಜೊತೆ ಪುಟ್ಬಾಲ್ ಆಡಿದ್ದಾರೆ. ಈ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಪುಟ್‌ಬಾಲ್ ಆಟದ ನಡುವೆ ಧೋನಿ ಮತ್ತು ನಟ ರಣ್ವೀರ್ ಸಿಂಗ್ ಮಾತುಕತೆ, ಚರ್ಚೆ ಮಾಡುತ್ತಿರುವ ಫೋಟೋ ಮತ್ತು ವಿಡಿಯೋಗಳು ಎಲ್ಲರ ಗಮನ ಸೆಳೆದಿದೆ.

  ರಣ್ವೀರ್ ಸಿಂಗ್ ಹೊಸ ಸ್ಟೈಲ್ ವೈರಲ್: ವಿಚಿತ್ರ ಬಟ್ಟೆಯ ಬೆಲೆ ಎಷ್ಟು?ರಣ್ವೀರ್ ಸಿಂಗ್ ಹೊಸ ಸ್ಟೈಲ್ ವೈರಲ್: ವಿಚಿತ್ರ ಬಟ್ಟೆಯ ಬೆಲೆ ಎಷ್ಟು?

  ಧೋನಿ ಜೊತೆ ಪುಟ್ಬಾಲ್ ಆಡಿದ ರಣ್ವೀರ್ ಸಿಂಗ್, ಮಾಹೀ ಭಾಯ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅದರಲ್ಲೂ ಫೋಟೋವೊಂದರಲ್ಲಿ ಧೋನಿ ಪಾದಗಳ ಬಳಿ ಕುಳಿತು ಮಾತನಾಡುತ್ತಿರುವುದು ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

  ಸೂಪರ್ ಸ್ಟಾರ್ ನಟ ಎನ್ನುವ ಅಹಂ ಇಲ್ಲದೇ ಧೋನಿ ಕಾಲುಗಳ ಬಳಿ ಕುಳಿತಿರುವ ಬಗ್ಗೆ ಪಾಸಿಟಿವ್ ಅಭಿಪ್ರಾಯ ಕೇಳಿ ಬರ್ತಿದೆ. ಒಂದು ಕೈಯಲ್ಲಿ ಧೋನಿ ಕಾಲನ್ನು ಮುಟ್ಟಿ ಮಾತನಾಡುತ್ತಿದ್ದಾರೆ. ಈ ಫೋಟೋಗಳನ್ನು ಸ್ವತಃ ರಣ್ವೀರ್ ಸಿಂಗ್, ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿ ಹೃದಯಸ್ಪರ್ಶಿ ಪೋಸ್ಟ್ ಹಾಕಿದ್ದಾರೆ.

  ಧೋನಿ ಪಾದಗಳ ಬಳಿ ಕುಳಿತಿರುವ ಫೋಟೋ ಹಂಚಿಕೊಂಡು, ''ನಾನು ಸದಾ ಹಿರಿಯಣ್ಣನ ಪಾದಗಳ ಬಳಿ'' ಎಂದು ಕ್ಯಾಪ್ಷನ್ ಹಾಕಿದ್ದಾರೆ. ಇದರ ಜೊತೆಗೆ ಮತ್ತೊಂದು ಫೋಟೋ ಶೇರ್ ಮಾಡಿದ್ದು, ಹೆಗಲ ಮೇಲೆ ಕೈ ಹಾಕಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

  ರಣ್ವೀರ್ ಸಿಂಗ್ ಧರಿಸಿದ್ದ ಈ ಸ್ವೆಟ್ ಶರ್ಟ್ ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ?ರಣ್ವೀರ್ ಸಿಂಗ್ ಧರಿಸಿದ್ದ ಈ ಸ್ವೆಟ್ ಶರ್ಟ್ ಬೆಲೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ?

  ಇನ್ನು ಧೋನಿ ಜೊತೆ ಜಾಹೀರಾತುವೊಂದನ್ನು ನಿರ್ದೇಶನ ಮಾಡಿದ ಫರಾಹ್ ಖಾನ್, ಎಂಎಸ್‌ಡಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಧೋನಿ ಜೊತೆಗಿನ ಫೋಟೋ ಶೇರ್ ಮಾಡಿ, ''ಎಂತಹ ಅದ್ಭುತ ವ್ಯಕ್ತಿ. ಅವರ ಸಮಯ ಪ್ರಜ್ಞೆ, ಅವರ ಸರಳ ವ್ಯಕ್ತಿತ್ವ. ಎಲ್ಲರೊಂದಿಗೆ ನಗುನಗುತ್ತಾ ಫೋಟೋಗೆ ಪೋಸ್ ಕೊಟ್ಟರು. ನಾನು ಅವರ ಅಭಿಮಾನಿ'' ಎಂದು ಹೇಳಿದ್ದಾರೆ.

  Ranveer Singh shares a heartwarming post about MS Dhoni

  ಫರಾಹ್ ಖಾನ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ರಣ್ವೀರ್ ಸಿಂಗ್, ''ಅವರು ಅತ್ಯುತ್ತಮ'' ಎಂದಿದ್ದಾರೆ.

  ಭಾನುವಾರ (ಜುಲೈ 25) ಮುಂಬೈನಲ್ಲಿ ಸ್ನೇಹಿತರ ಜೊತೆ ಧೋನಿ ಪುಟ್‌ಬಾಲ್ ಆಡಿದ್ದಾರೆ. ರಣ್ವೀರ್ ಸಿಂಗ್, ಟೈಗರ್ ಶ್ರಾಫ್, ಶ್ರೇಯಸ್ ಅಯ್ಯರ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.ದುಬೈನಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಧೋನಿ ಮುನ್ನಡೆಸಲಿದ್ದಾರೆ.

  English summary
  Bollywood actor Ranveer Singh shares a heartwarming post about MS Dhoni.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X