»   » ಬಾಲಿವುಡ್ ನಟ ರಣವೀರ್ ಸಿಂಗ್ ಗೆ 24 ಬಾರಿ ಕಪಾಳಮೋಕ್ಷ!

ಬಾಲಿವುಡ್ ನಟ ರಣವೀರ್ ಸಿಂಗ್ ಗೆ 24 ಬಾರಿ ಕಪಾಳಮೋಕ್ಷ!

Posted By:
Subscribe to Filmibeat Kannada

ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ 24 ಬಾರಿ ಕಪಾಳಮೋಕ್ಷ ಮಾಡಲಾಗಿದೆ. ಆದರೆ ಇದು ರಿಯಲ್ ಆಗಿ ನಡೆದ ಘಟನೆ ಅಲ್ಲ. 'ಪದ್ಮಾವತಿ' ಚಿತ್ರದ ಚಿತ್ರೀಕರಣದಲ್ಲಿ ತೆಗೆಯಲಾದ ದೃಶ್ಯ.

ದೀಪಿಕಾಗೆ ಹತ್ತಿರವಾಗಲು ರಣವೀರ್ ಬಹುದೊಡ್ಡ ಪ್ಲಾನ್! ಏನದು?

ರಣವೀರ್ ಸಿಂಗ್ ಮುಂದಿನ ಸಿನಿಮಾ 'ಪದ್ಮಾವತಿ' ಚಿತ್ರದ ಶೂಟಿಂಗ್ ಜೋರಾಗಿ ನಡೆಯುತ್ತಿದೆ. ಸದ್ಯ ಈ ಚಿತ್ರದ ಒಂದು ದೃಶ್ಯದಲ್ಲಿ ಹಿರಿಯ ನಟ ರಝಾ ಮುರಾದ್ ಅವರು ರಣವೀರ್ ಸಿಂಗ್ ಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ದೃಶ್ಯ ಸರಿಯಾಗಿ ಬರಲಿಲ್ಲ ಎಂದು ಸತತ 24 ಬಾರಿ ರಿಟೇಕ್ ಮಾಡಿದ್ದು, ಅಷ್ಟೋಂದು ಸಲ ರಝಾ ಮುರಾದ್ ಅವರು ರಣಬೀರ್ ಗೆ ಹೊಡೆದಿದ್ದಾರಂತೆ.

Ranveer Singh slapped 24 times, beats previous record

ಈ ಹಿಂದೆ 'ಬೇಫ್ರಿಕೆ' ಚಿತ್ರದಲ್ಲಿ 21 ಬಾರಿ ಕೆನ್ನೆಗೆ ಏಟು ತಿಂದಿದ್ದ ರಣವೀರ್ ಈಗ ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ. ಅಂದಹಾಗೆ, ಈ ಸಿನಿಮಾವನ್ನು ನಿರ್ದೇಶಕ ಸಂಜಯ್ ಲೀಲಾ ಬಂಸಾಲಿ ನಿರ್ದೇಶನ ಮಾಡಿದ್ದಾರೆ. 'ರಾಮ್ ಲೀಲಾ' ಮತ್ತು 'ಬಾಜೀರಾವ್ ಮಸ್ತಾನಿ' ಚಿತ್ರದ ನಂತರ ಮತ್ತೆ ಈ ಚಿತ್ರದಲ್ಲಿಯೂ ಸಂಜಯ್ ಲೀಲಾ ಬಂಸಾಲಿ ಹಾಗೂ ರಣವೀರ್ ಸಿಂಗ್ ಕಾಂಬಿನೇಶನ್ ಮುಂದುವರೆದಿದೆ. ಈ ಚಿತ್ರದಲ್ಲಿಯೂ ಸಹ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದಾರೆ.

English summary
Padmavati actor Ranveer Singh slapped 24 times, beats previous record
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada