For Quick Alerts
  ALLOW NOTIFICATIONS  
  For Daily Alerts

  ತಪ್ಪು ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡ ಖ್ಯಾತ ಗಾಯಕ ಬಾದ್‌ಶಾ

  |

  ಬಾಲಿವುಡ್ ಸೆಲೆಬ್ರಿಟಿಗಳ ಸಾಮಾಜಿಕ ಜಾಲತಾಣ 'ಭ್ರಷ್ಟಾಚಾರ' ಬಹುತೇಕ ಹೊರಬಿದ್ದಿದೆ. ಆದರೆ ಇನ್ನೂ ತನಿಖೆ ನಡೆಯುತ್ತಿದ್ದು, ಯಾರು-ಯಾರೆಲ್ಲಾ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬುದು ಇನ್ನಷ್ಟೆ ತಿಳಿಯಬೇಕಿದೆ.

  ಮುಂಬೈ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಹಲವಾರು ನಟ-ನಟಿಯರು, ಗಾಯಕರು ಅವರುಗಳ ಆಪ್ತ ಕಾರ್ಯದರ್ಶಿಗಳು, ಸಾಮಾಜಿಕ ಜಾಲತಾಣಗಳ ವಿಭಾಗ ಮುಖ್ಯಸ್ಥರುಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

  ಬಾಲಿವುಡ್‌ನ ಖ್ಯಾತ ರ್ಯಾಪರ್, ಸಂಗೀತ ನಿರ್ದೇಶಕ ಬಾದ್‌ಶಾ ಇದೀಗ ತಾವು 'ಸಾಮಾಜಿಕ ಜಾಲತಾಣ ಭ್ರಷ್ಟಾಚಾರ'ದಲ್ಲಿ ಪಾಲ್ಗೊಂಡಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

  ದಾಖಲೆ ಬರೆದಿದ್ದ ಬಾದ್‌ಶಾ ನ ವಿಡಿಯೋ

  ದಾಖಲೆ ಬರೆದಿದ್ದ ಬಾದ್‌ಶಾ ನ ವಿಡಿಯೋ

  ರ್ಯಾಪರ್ ಬಾದ್‌ಶಾ ನ 'ಪಾಗಲ್' ಎಂಬ ವಿಡಿಯೋ ಹಾಡೊಂದು 7.50 ಕೋಟಿ ವೀವ್ಸ್‌ ಪಡೆದಿತ್ತು. ಇದು ಭಾರತದ ಮಟ್ಟಿಗೆ ದಾಖಲೆ ಸೃಷ್ಟಿಸಿತ್ತು. ಕೇವಲ 24 ಗಂಟೆಯಲ್ಲಿ ಅತಿ ಹೆಚ್ಚು ವೀವ್ಸ್ ಪಡೆದ ವಿಶ್ವದಾಖಲೆಯನ್ನೂ ಈ ವಿಡಿಯೋ ಸೃಷ್ಟಿಸಿತ್ತು. ಆದರೆ ಇದು ನಿಜವಾಗಿರಲಿಲ್ಲ.

  ಹಣ ಕೊಟ್ಟು ವೀವ್ಸ್ ಪಡೆದಿದ್ದ ಬಾದ್‌ಶಾ

  ಹಣ ಕೊಟ್ಟು ವೀವ್ಸ್ ಪಡೆದಿದ್ದ ಬಾದ್‌ಶಾ

  ಅತಿ ಹೆಚ್ಚು ವೀವ್ಸ್ ಪಡೆಯಲು ತಾನು 75 ಲಕ್ಷ ರೂಪಾಯಿ ಹಣವನ್ನು ಸಂಸ್ಥೆ ಒಂದಕ್ಕೆ ನೀಡಿದ್ದಾಗಿ ಬಾದ್‌ಶಾ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆ. ಹಣ ಪಡೆದ ಸಂಸ್ಥೆಯು ಕಳ್ಳದಾರಿಯಲ್ಲಿ ಪಾಗಲ್ ವಿಡಿಯೋಕ್ಕೆ ಅತಿ ಹೆಚ್ಚು ವೀವ್ಸ್ ಬರುವಂತೆ ಮಾಡಿದೆ.

  ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಹಣ!

  ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಹಣ!

  ಯೂಟ್ಯೂಬ್ ವೀವ್ಸ್ ಮಾತ್ರವಲ್ಲದೆ. ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳಿಗೆ ಅತಿ ಹೆಚ್ಚು ಫಾಲೋವರ್‌ಗಳನ್ನು ಕೊಡಿಸುವ ದಂಧೆಯೂ ಬಾಲಿವುಡ್‌ನಲ್ಲಿದ್ದು, ಹಲವಾರು ನಟ-ನಟಿಯರು ಹಣ ಕೊಟ್ಟು ಫಾಲೋವರ್‌ಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

  ಖ್ಯಾತ ನಟ-ನಟಿಯರ ಹೆಸರು

  ಖ್ಯಾತ ನಟ-ನಟಿಯರ ಹೆಸರು

  ಸಾಮಾಜಿಕ ಜಾಲತಾಣ ಭ್ರಷ್ಟಾಚಾರದ ತನಿಖೆಯನ್ನು ಪೊಲೀಸರು ಮಾಡುತ್ತಿದ್ದು, ದೀಪಿಕಾ ಪಡುಕೋಣೆ, ಕಂಗನಾ ರಣೌತ್ ಸೇರಿ ಹಲವು ಸೆಲೆಬ್ರಿಟಿಗಳ ಹೆಸರೂ ಸಹ ಈ ಪ್ರಕರಣದಲ್ಲಿ ಇದೆ. ಹಗರಣ ಹೊರಬೀಳುತ್ತಿದ್ದಂತೆ ಬಾದ್‌ಶಾ ಗೆ ನೆಟ್ಟಿಗರು ಮಂಗಳಾರತಿ ಮಾಡಿದ್ದಾರೆ.

  English summary
  Bollywood rapper, music composer Badshah confess he gave money to get 7.5 crore views in YouTube for his video 'Pagal'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X