Don't Miss!
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ದಕ್ಷಿಣಕ್ಕಿಂತ ಬಾಲಿವುಡ್ ಹಾಡುಗಳು ರೊಮ್ಯಾಂಟಿಕ್' ಎಂದ ರಶ್ಮಿಕಾ: ರೆಹಮಾನ್, ಇಳೆಯರಾಜ ಗೊತ್ತಿಲ್ವಾ ಎಂದ ನೆಟ್ಟಿಗರು!
ದಕ್ಷಿಣ ಭಾರತದ ನಟಿಯರು ಬಾಲಿವುಡ್‌ನಲ್ಲಿ ನೆಲೆ ಕಂಡುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಆದರೂ, ಕೆಲ ನಟಿಯರು ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಸದ್ಯ ಬಾಲಿವುಡ್‌ನಲ್ಲೀಗ ರಶ್ಮಿಕಾ ಮಂದಣ್ಣ ಹೆಸರು ಚಾಲ್ತಿಯಲ್ಲಿದೆ.
ದಕ್ಷಿಣ ಭಾರತದ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಬ್ಲಾಕ್ ಬಸ್ಟರ್ ಹಿಟ್‌ಗಳನ್ನು ಕೊಟ್ಟಿದ್ದಾರೆ. ಆದರೆ, ಬಾಲಿವುಡ್‌ನಲ್ಲಿ ಒಂದೇ ಒಂದು ಹಿಟ್ ಸಿನಿಮಾವನ್ನು ನೀಡಿಲ್ಲ. ತೆರೆಕಂಡ ಮೊದಲ ಸಿನಿಮಾ 'ಗುಡ್ ಬೈ' ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. 'ಮಿಷನ್ ಮಜ್ನು' ಥಿಯೇಟರ್‌ಗೆ ಬರುತ್ತಿಲ್ಲ. ಹೀಗಾಗಿ ರಣ್ಬೀರ್ ಕಪೂರ್ ಜೊತೆ ನಟಿಸುತ್ತಿರುವ ಮೂರನೇ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ರಮ್ಯಾನೂ
ಇಲ್ಲ..
ರಚಿತಾನೂ
ಇಲ್ಲ..
ರಶ್ಮಿಕಾನೇ
ನಂಬರ್
1:
ಹೆಂಗೆ
ಇದೆಲ್ಲಾ?
ರಶ್ಮಿಕಾ ಸದ್ಯ 'ಮಿಷನ್ ಮಜ್ನು' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ನೀಡದ ಸಂದರ್ಶನದಲ್ಲಿ ರಶ್ಮಿಕಾ ಹೇಳಿಕೆಯೊಂದನ್ನು ನೀಡಿದ್ದಾರೆ. ಅದು ದಕ್ಷಿಣ ಭಾರತದ ಸಿನಿಪ್ರಿಯರಿಗೆ ಇಷ್ಟ ಆಗಿಲ್ಲ. ಹೀಗಾಗಿ ಮತ್ತೆ ರಶ್ಮಿಕಾ ಮಂದಣ್ಣ ಟ್ರೋಲ್ ಆಗುತ್ತಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಸಂದರ್ಶನದಲ್ಲಿ ಹೇಳಿದ್ದೇನು? ಅದಕ್ಕೆ ನೆಟ್ಟಿಗರ ಪ್ರತಿಕ್ರಿಯೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಬಾಲಿವುಡ್ ಹಾಡುಗಳ ಪ್ರಭಾವ
ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ರಶ್ಮಿಕಾ ಮಂದಣ್ಣ ನಟಿಸಿರೋ ಸಿನಿಮಾ 'ಮಿಷನ್ ಮಜ್ನು'. ಇದು ರಶ್ಮಿಕಾ ನಟಿಸಿದ ಮೊದಲ ಬಾಲಿವುಡ್ ಸಿನಿಮಾ. ಆದರೆ ಎರಡನೇ ಸಿನಿಮಾವಾಗಿ ರಿಲೀಸ್ ಆಗುತ್ತಿದೆ. ಜನವರಿ 19,2023ರಲ್ಲಿ ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ನೇರವಾಗಿ ರಿಲೀಸ್ ಆಗುತ್ತಿದೆ. ಇದೇ ಸಿನಿಮಾ ಹಾಡುಗಳನ್ನು ರಿಲೀಸ್ ಮಾಡುವ ವೇಳೆ ರಶ್ಮಿಕಾ ಮಂದಣ್ಣ ತಮ್ಮ ಮೇಲೆ ಬಾಲಿವುಡ್ ಹಾಡುಗಳು ಹೇಗೆ ಪ್ರಭಾವ ಬೀರಿವೆ ಎಂಬುದನ್ನು ಹೇಳಿದ್ದರು. ಅದೇ ಈಗ ರಶ್ಮಿಕಾ ಉಲ್ಟಾ ಹೊಡೆದಿದೆ.

ಬಾಲಿವುಡ್ ಹಾಡುಗಳು ತುಂಬಾನೇ ರೊಮ್ಯಾಂಟಿಕ್
'ವಿಷನ್ ಮಜ್ನು' ಸಿನಿಮಾದ ಸಾಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ ರಶ್ಮಿಕಾ ಬಾಲಿವುಡ್ ಹಾಡುಗಳ ಬಗ್ಗೆ ಮಾತಾಡಿದ್ದರು. ಬಾಲಿವುಡ್ ಹಾಡುಗಳು ಪ್ರಭಾವ ಹೇಗಿತ್ತು ಅನ್ನೋದನ್ನು ವಿವರಿಸಿದ್ದರು. ಈ ವೇಳೆ " ಬಾಲಿವುಡ್ ಹಾಡುಗಳು ತುಂಬಾನೇ ರೊಮ್ಯಾಂಟಿಕ್ ಆಗಿರುತ್ತೆ. ಅದೇ ದಕ್ಷಿಣ ಭಾರತದ ಸಿನಿಮಾ ಹಾಡುಗಳು ಮಾಸ್ ಹಾಗೂ ಐಟಂ ಸಾಂಗ್‌ಗಳಾಗಿರುತ್ತೆ " ಎಂದು ಹೇಳಿದ್ದರು. ಇದರಲ್ಲಿ ಆಕ್ಷೇಪಾರ್ಹ ಅನ್ನುವಂತಹ ಪದಗಳು ಇಲ್ಲದೆ ಹೋದರೂ, ದಕ್ಷಿಣ ಭಾರತದ ಸಿನಿಪ್ರಿಯರಿಗೆ ಹಿಡಿಸಿಲ್ಲ.

ರಶ್ಮಿಕಾಗೆ ರೆಹಮಾನ್, ಇಳೆಯರಾಜ ನೆನಪಿಸಿದ ನೆಟ್ಟಿಗರು
ರಶ್ಮಿಕಾ ಮಂದಣ್ಣ ಹೇಳಿಕೆ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಒಬ್ಬರೊಬ್ಬರು ಒಂದೊಂದು ರೀತಿ ಕಮೆಂಟ್ ಮಾಡುತ್ತಿದ್ದಾರೆ. " ದಕ್ಷಿಣದಲ್ಲಿ ಪ್ರಭಾವ ಬೀರುವ ರೊಮ್ಯಾಂಟಿಕ್ ಸಾಂಗ್‌ಗಳು ಇಲ್ಲ ಅಂತ ರಶ್ಮಿಕಾಗೆ ಅನಿಸಿದೆ. ಇಲ್ಲಿ ಬಾಲಿವುಡ್ ಗೆದ್ದಿದೆ" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು " ರಶ್ಮಿಕಾ ನಿಮಗೆ ಎ ಆರ್ ರೆಹಮಾನ್ ಹಾಡುಗಳು ಗೊತ್ತಿಲ್ಲವೇ? ಇಳಯರಾಜ ಹಾಡುಗಳು ಗೊತ್ತಿಲ್ಲವೇ. ತೆಲುಗು ಹಾಡುಗಳು ಮಾಸ್ ಹಾಗೂ ಐಟಂ ಸಾಂಗ್‌ಗಳಿರುತ್ತೆ. ಬಾಲಿವುಡ್ ಐಟಂ ಸಾಂಗ್‌ಗಳಲ್ಲಿ ಹೆಚ್ಚು ವಿಕೃತವಿರುತ್ತೆ ಅನ್ನೋದನ್ನೂ ಹೇಳಬೇಕಿತ್ತು." ಎಂದು ಟ್ವೀಟ್ ಮಾಡಿದ್ದಾರೆ.

ರಶ್ಮಿಕಾಗೆ ಭವಿಷ್ಯವಿಲ್ಲ ಎಂದಿದ್ದ ಕೆಆರ್‌ಕೆ
ಇತ್ತೀಚೆಗೆ ರಶ್ಮಿಕಾ ಮಂದಣ್ಣ ವಿರುದ್ಧ ಕೆಆರ್‌ಕೆ ಟ್ವೀಟ್ ಮಾಡಿದ್ದರು. "ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣಗೆ ಭವಿಷ್ಯವಿಲ್ಲ" ಎಂದಿದ್ದರು. ಅತ್ತ ಕಿರಿಕ್ ಪಾರ್ಟಿ ನಿರ್ಮಾಣ ಸಂಸ್ಥೆ ಹೆಸರನ್ನು ಹೇಳಲು ಹಿಂದೇಟು ಹಾಕಿದ್ದ ರಶ್ಮಿಕಾ ನೆಟ್ಟಿಗರ ಕೆಂಗಣ್ಣಿಗೂ ಗುರಿಯಾಗಿದ್ದರು. ಈಗ ಬಾಲಿವುಡ್ ಹಾಡುಗಳ ವಿಚಾರಕ್ಕೆ ಟ್ರೋಲ್ ಆಗುತ್ತಿದ್ದಾರೆ.