For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ದೊಡ್ಡ ಬಾಲಿವುಡ್‌ ಪ್ರಾಜೆಕ್ಟ್‌ ಬಾಚಿಕೊಳ್ಳುವತ್ತ ರಶ್ಮಿಕಾ!

  |

  ಸಾಮಾಜಿಕ ಜಾಲತಾಣದಲ್ಲಿ ಅತಿಯಾಗಿ ಟ್ರೋಲ್‌ಗೆ ಒಳಗಾಗುತ್ತಿರುವ ನಟಿಯರಲ್ಲಿ ರಶ್ಮಿಕಾ ಮಂದಣ್ಣ ಸಹ ಒಬ್ಬರು. ಹಲವು ಕಾರಣಗಳಿಗೆ ಅವರನ್ನು ಸತತ ಟ್ರೋಲ್ ಮಾಡುತ್ತಲೇ ಇರುತ್ತಾರೆ ಕೆಲವು ನೆಟ್ಟಿಗರು. ಅದೆನೇ ಟ್ರೋಲ್ ಮಾಡುತ್ತಿರಲಿ, ಆದರೆ ತಮ್ಮ ವೃತ್ತಿಯಲ್ಲಿ ಅವರು ಏರುತ್ತಿರುವ ರೀತಿ ಮಾತ್ರ ಹಲವರಿಗೆ ಮಾದರಿ.

  'ಕಿರಿಕ್ ಪಾರ್ಟಿ' ಸಿನಿಮಾದಿಂದ ಪ್ರರಾಂಭಿಸಿ ಅತ್ಯಂತ ಕಡಿಮೆ ಅವಧಿಯಲ್ಲಿಯೇ ಅವರು ಬಹುಭಾಷಾ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ದಾರೆ.

  ರಶ್ಮಿಕಾ ಚಿತ್ರಕ್ಕಿಲ್ಲ ಥಿಯೇಟರ್ ಭಾಗ್ಯ: 'ಮಿಷನ್ ಮಜ್ನು' ಓಟಿಟಿ ರಿಲೀಸ್ ಡೇಟ್ ಘೋಷಿಸಿದ ಕಿರಿಕ್ ಬೆಡಗಿರಶ್ಮಿಕಾ ಚಿತ್ರಕ್ಕಿಲ್ಲ ಥಿಯೇಟರ್ ಭಾಗ್ಯ: 'ಮಿಷನ್ ಮಜ್ನು' ಓಟಿಟಿ ರಿಲೀಸ್ ಡೇಟ್ ಘೋಷಿಸಿದ ಕಿರಿಕ್ ಬೆಡಗಿ

  ದಕ್ಷಿಣದ ಹಲವು ಖ್ಯಾತ ನಟಿಯರು ದಶಕಗಳ ಕಾಲ ಇಲ್ಲಿ ನಟಿಸಿದರೂ ಬಾಲಿವುಡ್ ಅವಕಾಶ ಗಿಟ್ಟಿಸಿಕೊಳ್ಳಲು ಹೆಣಗಾಡಿದ್ದರು. ಆದರೆ ರಶ್ಮಿಕಾ ಅತ್ಯಂತ ಕಡಿಮೆ ಅವಧಿಯಲ್ಲಿ ಬಾಲಿವುಡ್‌ ಅವಕಾಶ ಗಿಟ್ಟಿಸಿಕೊಂಡಿದ್ದು ಮಾತ್ರವಲ್ಲ, ಅಮಿತಾಬ್ ಬಚ್ಚನ್, ರಣ್ಬೀರ್ ಕಪೂರ್, ಸಿದ್ಧಾರ್ಥ್, ವರುಣ್ ಧವನ್ ಅವರಂಥಹಾ ದೊಡ್ಡ ಸ್ಟಾರ್‌ ನಟರೊಟ್ಟಿಗೆ ಮುಖ್ಯ ಪಾತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಬಾಲಿವುಡ್‌ನಲ್ಲಿ ಇನ್ನೂ ಒಂದು ದೊಡ್ಡ ಪ್ರಾಜೆಕ್ಟ್‌ ಬಾಚಿಕೊಳ್ಳುವ ಯತ್ನದಲ್ಲಿದ್ದಾರೆ.

  ಬಾಲಿವುಡ್‌ನಲ್ಲಿ ಛಾಪು ಮೂಡಿಸುತ್ತಿರುವ ರಶ್ಮಿಕಾ

  ಬಾಲಿವುಡ್‌ನಲ್ಲಿ ಛಾಪು ಮೂಡಿಸುತ್ತಿರುವ ರಶ್ಮಿಕಾ

  ಈಗಾಗಲೇ ಬಾಲಿವುಡ್‌ನ ಸ್ಟಾರ್ ನಟ ರಣ್ಬೀರ್ ಕಪೂರ್ ಜೊತೆ 'ಅನಿಮಲ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ ರಶ್ಮಿಕಾ ಮಂದಣ್ಣ. ಇದೀಗ ಬಾಲಿವುಡ್‌ನ ಸ್ಟಾರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಸಂಜಯ್ ಲೀಲಾ ಬನ್ಸಾಲಿಯ ಕಚೇರಿಯ ಹೊರಗೆ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

  ಹಲವು ಐಕಾನಿಕ್ ಸಿನಿಮಾ ನೀಡಿರುವ ಸಂಜಯ್

  ಹಲವು ಐಕಾನಿಕ್ ಸಿನಿಮಾ ನೀಡಿರುವ ಸಂಜಯ್

  'ಹಮ್ ದಿಲ್ ದೇ ಚುಕೆ ಸನಮ್', 'ದೇವದಾಸ್', 'ಸಾವರಿಯಾ', 'ರಾಮ್‌ಲೀಲಾ', 'ಬ್ಲ್ಯಾಕ್', 'ಪದ್ಮಾವತ್', ಇತ್ತೀಚೆಗೆ 'ಗಂಗೂಬಾಯಿ ಕಾಠಿಯಾವಾಡಿ' ರೀತಿಯ ಟಾಪ್ ಸಿನಿಮಾಗಳನ್ನು ನೀಡಿರುವ ಸಂಜಯ್ ಲೀಲಾ ಬನ್ಸಾಲಿ ಹೊಸ ಸಿನಿಮಾ ನಿರ್ದೇಶಿಸುವ ತಯಾರಿಯಲ್ಲಿದ್ದು, ಇದೇ ಸಮಯದಲ್ಲಿ ರಶ್ಮಿಕಾ ಮಂದಣ್ಣ ಸಂಜಯ್ ರ ಕಚೇರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಬಾಲಿವುಡ್ ಪಂಡಿತರಲ್ಲಿ ಹಲ್‌-ಚಲ್ ಎಬ್ಬಿಸಿದ್ದು, ರಶ್ಮಿಕಾ, ಸಂಜಯ್‌ರ ಸಿನಿಮಾದ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಎಂಬ ಮಾತುಗಳು ಈಗಾಗಲೇ ಹರಿದಾಡಲು ಆರಂಭವಾಗಿವೆ.

  ಎರಡು ಬಾಲಿವುಡ್ ಸಿನಿಮಾದಲ್ಲಿ ನಟನೆ

  ಎರಡು ಬಾಲಿವುಡ್ ಸಿನಿಮಾದಲ್ಲಿ ನಟನೆ

  ಇನ್ನು ರಶ್ಮಿಕಾ ಈಗಾಗಲೇ ಎರಡು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೊದಲ ಸಿನಿಮಾ ಅಮಿತಾಬ್ ಬಚ್ಚನ್ ಜೊತೆ ನಟಿಸಿರುವ 'ಗುಡ್ ಬೈ' ಸಿನಿಮಾ ಬಿಡುಗಡೆ ಆಗಿ ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಆಗಿದೆ. 'ಮಿಷನ್ ಮಜ್ನು' ಹೆಸರಿನ ಸಿನಿಮಾದಲ್ಲಿ ಸಿದ್ಧಾರ್ಥ್ ಜೊತೆಗೆ ನಟಿಸಿದ್ದಾರೆ ಆದರೆ ಈ ಸಿನಿಮಾ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ. ಇದರ ಜೊತೆಗೆ ರಣ್ಬೀರ್ ಕಪೂರ್ ಜೊತೆಗೆ 'ಅನಿಮಲ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ತೆಲುಗಿನ 'ಅರ್ಜುನ್ ರೆಡ್ಡಿ' ನಿರ್ದೇಶಕ ಸಂದೀಪ್ ವಂಗ ನಿರ್ದೇಶನ ಮಾಡುತ್ತಿದ್ದಾರೆ.

  ದಕ್ಷಿಣದಲ್ಲಿಯೂ ರಶ್ಮಿಕಾ ಮಂದಣ್ಣ ಬ್ಯುಸಿ

  ದಕ್ಷಿಣದಲ್ಲಿಯೂ ರಶ್ಮಿಕಾ ಮಂದಣ್ಣ ಬ್ಯುಸಿ

  ಇನ್ನು ದಕ್ಷಿಣದಲ್ಲಿಯೂ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್ ಜೊತೆಗೆ 'ಪುಷ್ಪ 2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಸ್ಟಾರ್ ನಟ ವಿಜಯ್ ಜೊತೆಗೆ ನಟಿಸಿರುವ 'ವಾರಿಸು' ಸಿನಿಮಾ ಕೆಲವೆ ದಿನಗಳಲ್ಲಿ ತೆರೆಗೆ ಬರಲಿದೆ. ಇದರ ಜೊತೆಗೆ ಒಂದು ಮಲಯಾಳಂ ಸಿನಿಮಾವನ್ನು ಸಹ ರಶ್ಮಿಕಾ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಮತ್ತೊಂದು ತಮಿಳು ಸಿನಿಮಾವನ್ನು ಸಹ ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಇದೆ.

  English summary
  Actress Rashmika Mandanna seen out side the office of director Sanjay Leela Bhansali. She may act in Sanjay's next movie.
  Thursday, December 29, 2022, 13:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X