twitter
    For Quick Alerts
    ALLOW NOTIFICATIONS  
    For Daily Alerts

    ಬಾಲಿವುಡ್‌ಗೆ ಟಾಂಗ್ ಕೊಟ್ಟು 'ಕೆಜಿಎಫ್' ಗೆ ಜೈ ಎಂದ 'ರಮಿಕಾ ಸೇನ್'

    |

    ದಕ್ಷಿಣ ಭಾರತ ಚಿತ್ರರಂಗದ ಮೇಲೆ ಪ್ರಶಂಸೆಗಳ ಸುರಿಮಳೆಯೇ ಆಗುತ್ತಿದೆ. ಒಂದರ ಹಿಂದೊಂದು ಹಿಟ್ ನೀಡುತ್ತಿರುವುದು ಮಾತ್ರವಲ್ಲ, ಬಾದ್‌ಷಾ ಆಗಿ ಮೆರೆಯುತ್ತಿದ್ದ ಬಾಲಿವುಡ್‌ ಮಂಡಿ ಊರುವಂತೆ ಮಾಡಿವೆ.

    'ಬಾಹುಬಲಿ', 'ಪುಷ್ಪ', 'RRR', 'ಕೆಜಿಎಫ್ 2' ಸಿನಿಮಾಗಳ ಯಶಸ್ಸು ಬಾಲಿವುಡ್‌ ಮಂದಿಯನ್ನು ವಿಚಲಿತಗೊಳಿಸಿವೆ. ಅಲ್ಲೀಗ ಆತ್ಮವಿಮರ್ಶೆ ನಡೆಯುತ್ತಿದೆ. ಇದೇ ಸಮಯಕ್ಕೆ ಸರಿಯಾಗಿ ಬಾಲಿವುಡ್‌ನ ದಿಗ್ಗಜ ನಟ-ನಟಿಯರು ಬಾಲಿವುಡ್‌ ಮಾಡಿರುವ ತಪ್ಪುಗಳನ್ನು ಮುಲಾಜಿಲ್ಲದೆ ಎತ್ತಿ ತೋರಿಸುತ್ತಿದ್ದಾರೆ.

    ದಕ್ಷಿಣದ ಸಿನಿಮಾಗಳ ಮುಂದೆ ಬಾಲಿವುಡ್‌ ಸೋಲುತ್ತಿರುವುದಕ್ಕೆ ಕಾರಣ ನೀಡಿದ 'ಅಧೀರ'ದಕ್ಷಿಣದ ಸಿನಿಮಾಗಳ ಮುಂದೆ ಬಾಲಿವುಡ್‌ ಸೋಲುತ್ತಿರುವುದಕ್ಕೆ ಕಾರಣ ನೀಡಿದ 'ಅಧೀರ'

    ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಂಜಯ್ ದತ್, 'ಕೆಜಿಎಫ್' ಸಿನಿಮಾ ಸರಣಿಯನ್ನು ಹೊಗಳುತ್ತಾ, 'ಬಾಲಿವುಡ್ ತನ್ನ ತನವನ್ನು ಕಳೆದುಕೊಂಡು ಬಿಟ್ಟಿದೆ. ತನಗಾಗಿ ಇದ್ದ ದೊಡ್ಡ ಪ್ರೇಕ್ಷಕ ವರ್ಗವನ್ನು ಅದು ನಿರ್ಲಕ್ಷಿಸಿದೆ' ಎಂದಿದ್ದರು. ಇದೀಗ ಮತ್ತೊಬ್ಬ 'ಕೆಜಿಎಫ್ 2' ನಟಿ ರವೀನಾ ಟಂಡನ್, ಬಾಲಿವುಡ್‌ನ ಪದ್ಧತಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬಾಲಿವುಡ್ ತನ್ನ ತನ ಕಳೆದುಕೊಂಡಿದೆ: ರವೀನಾ

    ಬಾಲಿವುಡ್ ತನ್ನ ತನ ಕಳೆದುಕೊಂಡಿದೆ: ರವೀನಾ

    ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ರವೀನಾ ಟಂಡನ್, ''ಬಾಲಿವುಡ್ ಬಹಳ ಹಿಂದೆಯೇ ತನ್ನ ತನವನ್ನು ಕಳೆದುಕೊಂಡಿದೆ. ಅದು ಪಾಶ್ಚಿಮಾತ್ಯ ಮಾದರಿಯನ್ನು ಕಾಪಿ ಮಾಡುತ್ತಿದೆ. ಇದರಿಂದಾಗಿ ಬಾಲಿವುಡ್ ಸಿನಿಮಾಗಳಿಂದ ಭಾರತದ ಸಾಮಾನ್ಯ ವರ್ಗದ ಪ್ರೇಕ್ಷಕ ದೂರ ಉಳಿದಿದ್ದಾನೆ. ಸಾಮಾನ್ಯ ವರ್ಗದ ಪ್ರೇಕ್ಷಕನಿಗೆ ಬೇಕಾದುದನ್ನು ದಕ್ಷಿಣ ಭಾರತದ ಸಿನಿಮಾಗಳು ನೀಡುತ್ತಿವೆ'' ಎಂದಿದ್ದಾರೆ.

    ಬಾಲಿವುಡ್, ಹಾಲಿವುಡ್‌ ಅನ್ನು ಅನುಕರಿಸುತ್ತಿದೆ: ರವೀನಾ

    ಬಾಲಿವುಡ್, ಹಾಲಿವುಡ್‌ ಅನ್ನು ಅನುಕರಿಸುತ್ತಿದೆ: ರವೀನಾ

    ''90ರ ದಶಕದ ಹಿಂದಿ ಸಿನಿಮಾಗಳಲ್ಲಿ ಒಳ್ಳೆಯ ಸಂಗೀತ, ಕತೆ, ಭಾವುಕತೆ ಇರುತ್ತಿತ್ತು ಬಳಿಕ ಹಾಲಿವುಡ್ ಮಾದರಿಯಲ್ಲಿ ಬಾಲಿವುಡ್ ಸಿನಿಮಾಗಳು ಹೆಲಿಕಾಪ್ಟರ್‌ಗಳು, ಐಶಾರಾಮಿ ಗಾಡಿಗಳನ್ನು ತೋರಿಸುತ್ತಾ, ಗ್ಲಾಮರ್‌ಗೆ ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತಾ, ಸಿನಿಮಾಗಳಲ್ಲಿ ನಮ್ಮ ಸಂಸ್ಕೃತಿಯನ್ನೇ ನಿರ್ಲಕ್ಷಿಸಲಾಯ್ತು. ಅದೇ ದಕ್ಷಿಣ ಭಾರತ ಸಿನಿಮಾಗಳು ತಮ್ಮ ಸಂಸ್ಕೃತಿ, ನಂಬಿಕೆಗಳಿಗೆ ಬದ್ಧವಾಗಿದ್ದು, ಅದಕ್ಕೆ ಹೊಂದಿಕೆ ಆಗುವಂಥಹಾ ಸಿನಿಮಾಗಳನ್ನೇ ನೀಡುತ್ತಿವೆ. ಹಿಂದಿ ಭಾಷಿಕ ಸಾಮಾನ್ಯ ವರ್ಗದ ಪ್ರೇಕ್ಷಕನಿಗೂ ಅದೇ ಬೇಕಿತ್ತಾದ್ದರಿಂದ ಆತ ದಕ್ಷಿಣ ಭಾರತ ಸಿನಿಮಾಗಳನ್ನು ಮೆಚ್ಚಿಕೊಳ್ಳಲು ಆರಂಭಿಸಿದ್ದಾನೆ'' ಎಂದು ವಿಶ್ಲೇಷಿಸಿದ್ದಾರೆ ನಟಿ ರವೀನಾ ಟಂಡನ್.

    ''ದಕ್ಷಿಣ ಭಾರತ ಸಿನಿಮಾಗಳು ಅವರ ಸಂಸ್ಕೃತಿಯ ಪ್ರತಿರೂಪ''

    ''ದಕ್ಷಿಣ ಭಾರತ ಸಿನಿಮಾಗಳು ಅವರ ಸಂಸ್ಕೃತಿಯ ಪ್ರತಿರೂಪ''

    ''ನಾನು ದಕ್ಷಿಣ ಭಾರತದ ಸಿನಿಮಾಗಳ ಚಿತ್ರೀಕರಣಕ್ಕೆ ಹೋದಾಗಲೆಲ್ಲ, ಅವರು ತಮ್ಮ ಸಂಸ್ಕೃತಿ, ಆಚಾರ-ವಿಚಾರಗಳಿಗೆ ಬದ್ಧವಾಗಿರುವುದನ್ನು ಗಮನಿಸುತ್ತಿದ್ದೆ. ಅವರ ಚಿತ್ರಕತೆಗಳಲ್ಲಿ ಸಹ ಅದು ಎದ್ದು ಕಾಣುತ್ತಿತ್ತು. ಅಂಥಹಾ ಕತೆಗಳು, ಪಾತ್ರಗಳು ಪ್ರೇಕ್ಷಕರನ್ನು ಶೀಘ್ರವಾಗಿ ಸೆಳೆಯುತ್ತಿದ್ದವು. ದಕ್ಷಿಣ ಭಾರತದಲ್ಲಿ ಅಂಥಹಾ ಕೆಲವು ಸಿನಿಮಾಗಳನ್ನು ಮಾಡಿ ನಾನು ಹಿಟ್‌ಗಳನ್ನು ಪಡೆದುಕೊಂಡಿದ್ದೇನೆ. ಅದೇ ನಾನು ಮುಂಬೈನಲ್ಲಿ ಸಿನಿಮಾ ಮಾಡಿದಾಗ ನಮ್ಮ ಸಂಸ್ಕೃತಿ, ಪದ್ಧತಿ, ರೀತಿ ರಿವಾಜುಗಳಿಗೆ ಸಂಬಂಧಪಟ್ಟ ಅಂಶಗಳು ಕತೆಯಲ್ಲಿ ಇರುತ್ತಲೇ ಇರಲಿಲ್ಲ. ಆಗಲೇ ನನಗೆ ಅನಿಸಿತ್ತು, ಈ ರೀತಿಯ ಸಿನಿಮಾಗಳ ಮೂಲಕ ನಾವು ಜನರಿಂದ ದೂರ ಹೋಗುತ್ತಿದ್ದೇವೆ ಎಂದು'' ಎಂದಿದ್ದಾರೆ ರವೀನಾ ಟಂಡನ್.

    ''ಕೆಜಿಎಫ್' ಸಿನಿಮಾಗಳಲ್ಲಿ ಭಾವುಕತೆ ಪ್ರಧಾನ ಪಾತ್ರ ವಹಿಸಿದೆ''

    ''ಕೆಜಿಎಫ್' ಸಿನಿಮಾಗಳಲ್ಲಿ ಭಾವುಕತೆ ಪ್ರಧಾನ ಪಾತ್ರ ವಹಿಸಿದೆ''

    'ಕೆಜಿಎಫ್' ಸರಣಿಯ ಸಿನಿಮಾಗಳ ಬಗ್ಗೆ ಮಾತನಾಡಿರುವ ರವೀನಾ ಟಂಡನ್, ''ಕೆಜಿಎಫ್ 1' ಹಾಗೂ 'ಕೆಜಿಎಫ್ 2' ಸಿನಿಮಾಗಳನ್ನು ಆಕ್ಷನ್ ಸಿನಿಮಾಗಳೆಂದು ಪ್ರೆಸೆಂಟ್ ಮಾಡಲಾಗಿದೆ. ಆದರೆ ಆ ಸಿನಿಮಾಗಳಲ್ಲಿ ಭಾವನಾತ್ಮಕ ಅಂಶಗಳು ಸಾಕಷ್ಟಿದೆ. ಅದೇ ಕಾರಣಕ್ಕೆ ಆ ಸಿನಿಮಾಗಳು ಹಿಟ್ ಆಗಿವೆ. ಮಾಸ್ ಅಂಶ ಮನರಂಜನೆಗಾದರೆ, ಪ್ರೇಕ್ಷಕನ ಹೃದಯ ತಟ್ಟಲು ಭಾವನಾತ್ಮಕ ಅಂಶಗಳು ಇರಲೇ ಬೇಕಾಗುತ್ತದೆ. ಅದು 'ಕೆಜಿಎಫ್' ಸರಣಿಯ ಸಿನಿಮಾಗಳೆರಡರಲ್ಲೂ ಹೇರಳವಾಗಿ ಇದೆ'' ಎಂದಿದ್ದಾರೆ ರವೀನಾ ಟಂಡನ್. 'ಕೆಜಿಎಫ್ 2' ಸಿನಿಮಾದಲ್ಲಿ ರವೀನಾ ಟಂಡನ್ ರಮಿಕಾ ಸೇನ್ ಪಾತ್ರದಲ್ಲಿ ನಟಿಸಿದ್ದಾರೆ.

    English summary
    Actress Raveena Tandon praised South Indian movies. She said Bollywood lost its audience due to its western love.
    Thursday, April 21, 2022, 9:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X