For Quick Alerts
  ALLOW NOTIFICATIONS  
  For Daily Alerts

  ಹಿಂದು ಕಾರ್ಯಕರ್ತ ಹರ್ಷ ಪರ ದನಿ ಎತ್ತಿದ ಬಾಲಿವುಡ್ ಬೆಡಗಿ

  |

  ಶಿವಮೊಗ್ಗದ ಹಿಂದು ಸಂಘಟನೆ ಕಾರ್ಯಕರ್ತ ಹರ್ಷ ಬರ್ಭರ ಕೊಲೆಯ ವಿಚಾರ ದೇಶದಾದ್ಯಂತ ಸದ್ದಾಗುತ್ತಿದೆ. ಕೋಮು ದ್ವೇಷದ ಈ ಕೊಲೆಯನ್ನು ಹಲವರು ಖಂಡಿಸಿದ್ದಾರೆ.

  ಕೆಲವು ಬಾಲಿವುಡ್ ನಟ-ನಟಿಯರು ಸಹ ಕರ್ನಾಟಕದಲ್ಲಿ ನಡೆದ ಈ ಹೇಯ ಕೃತ್ಯವನ್ನು ಖಂಡಿಸಿದ್ದಾರೆ. ಜನಪ್ರಿಯ ನಟಿ ರವೀನಾ ಟಂಡನ್ ಸಹ ಹರ್ಷ ಕೊಲೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಹರ್ಷಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿದ್ದಾರೆ.

  'ಕೆಜಿಎಫ್ 2' ಸಿನಿಮಾದಲ್ಲಿಯೂ ನಟಿಸಿರುವ ರವೀನಾ ಟಂಡನ್ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯರಾಗಿದ್ದು, ಹರ್ಷ ಕೊಲೆಯ ಬಗ್ಗೆ 'ಜಸ್ಟಿಸ್ ಟು ಹರ್ಷ' (ಹರ್ಷಗೆ ನ್ಯಾಯ ದೊರಕಲಿ) ಎಂದು ಸರಳವಾಗಿ ಬರೆದುಕೊಂಡಿದ್ದಾರೆ.

  ಬಾಲಿವುಡ್ ನಿರ್ಮಾಪಕ ಮನಿಶ್ ಮುಂದ್ರಾ ಸಹ ಶಿವಮೊಗ್ಗದಲ್ಲಿ ನಡೆದಿರುವ ಈ ಅಮಾನುಷ ಘಟನೆಯನ್ನು ಖಂಡಿಸಿದ್ದಾರೆ. ''ಮತ್ತೊಂದು ಗುಂಪು ಹತ್ಯೆ ನಡೆದಿದೆ. ನಾವು 'ಜಸ್ಟಿಸ್ ಫಾರ್ ಹರ್ಷ' ಎಂದು ಟ್ರೆಂಡ್ ಮಾಡಿ ಮಲಗಿ ಬಿಡುತ್ತೇವೆ. ಮತ್ತೊಂದು ಗುಂಪು ಹತ್ಯೆ ನಡೆದಾಗ ಮತ್ತೆ ಎಚ್ಚರವಾಗಿ ಮತ್ತೊಂದು ಪೋಸ್ಟ್ ಹಾಕುತ್ತೇವೆ ಅಷ್ಟೆ. ಎಚ್ಚರಗೊಳ್ಳುವ ಸಮಯ ಬಂದಿದೆ'' ಎಂದು ಹೇಳಿದ್ದಾರೆ.

  28 ವರ್ಷ ವಯಸ್ಸಿನ ಹರ್ಷ, ಭಜರಂಗದಳ ಕಾರ್ಯಕರ್ತನಾಗಿದ್ದು ಆತನನ್ನು ಫೆಬ್ರವರಿ 20 ರಂದು ರಾತ್ರಿ ಶಿವಮೊಗ್ಗದ ದೊಡ್ಡಪೇಟೆ ಠಾಣಾ ವ್ಯಾಪ್ತಿಯ ಎನ್.ಟಿ ರಸ್ತೆ ಕಾಮತ್‌ ಪೆಟ್ರೋಲ್‌ ಬಂಕ್ ಎದುರು ಭಾರತೀ ಕಾಲೋನಿ ಕ್ರಾಸ್‌ ನ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

  ಹರ್ಷ ಕೊಲೆ ಶಿವಮೊಗ್ಗದಲ್ಲಿ ಉದ್ರೇಕದ ವಾತಾವರಣ ನಿರ್ಮಾಣ ಮಾಡಿದ್ದು ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಿನ್ನೆ ಹರ್ಷ ಪಾರ್ಥಿವ ಶರೀರ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಖಾಸಿಫ್‌, 30 ವರ್ಷ, ಬುದ್ಧಾನಗರ, ಶಿವಮೊಗ್ಗ ಟೌನ್‌ ಮತ್ತುಸೈಯ್ಯದ್‌ ನಧೀಂ, 20 ವರ್ಷ, ಜೆಪಿ ನಗರ, ಶಿವಮೊಗ್ಗ ಟೌನ್‌ ಇವರುಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

  English summary
  Raveena Tandon seeks justice for Harsha, A 28 year old young man who killed in Shimogga on February 20.
  Tuesday, February 22, 2022, 9:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X