twitter
    For Quick Alerts
    ALLOW NOTIFICATIONS  
    For Daily Alerts

    18 ಆಕ್ಸಿಜನ್ ಘಟಕ ಸ್ಥಾಪಿಸಲು ಮುಂದಾದ ರಿಯಲ್ ಹೀರೋ ಸೋನು ಸೂದ್

    |

    ರಿಯಲ್ ಹೀರೋ ಸೋನು ಸೂದ್ ಮತ್ತೊಂದು ಮಹತ್ತರ ಕೆಲಸಕ್ಕೆ ಮುಂದಾಗಿದ್ದಾರೆ. ದೇಶದ ವಿವಿದ ಭಾಗಗಳಲ್ಲಿ 18 ಆಮ್ಲಜನಕ ಉತ್ಪಾದನ ಘಟಕ ಸ್ಥಾಪಿಸುವುದಾಗಿ ಹೇಳಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಸೋಂಕಿತರ ನೆರವಿಗೆ ನಿಂತಿರುವ ಸೋನು ಸೂದ್ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ.

    ಆಸ್ಪತ್ರೆ, ಬೆಡ್, ಚಿಕಿತ್ಸೆ, ಆಕ್ಸಿಜನ್ ಸಹಾಯ ಮಾಡುತ್ತಿರುವ ಸೋನು ಸೂದ್ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದು, 18 ಆಮ್ಲಜನಕ ಘಟಕ ಸ್ಥಾಪಿಸಲು ಮುಂದಾಗಿದ್ದಾರೆ. ಕಳೆದ ವರ್ಷ ಕೊರೊನಾ ಲಾಕ್‌ಡೌನ್‌ನಿಂದ ಪ್ರಾರಂಭವಾದ ಸೋನು ಸೂದ್ ಮಾನವೀಯ ಕೆಲಸ ಮುಂದುವರೆದಿದ್ದು, ಇಂದು ದೊಡ್ಡ ಮಟ್ಟದಲ್ಲಿ ದೇಶದ ಮೂಲೆ ಮೂಲೆ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಮುಂದೆ ಓದಿ..

    ರಾಜಕೀಯಕ್ಕೆ ಸೋನು ಸೂದ್? ಭವಿಷ್ಯದ ಬಗ್ಗೆ ರಿಯಲ್ ಹೀರೋ ಮಾತುರಾಜಕೀಯಕ್ಕೆ ಸೋನು ಸೂದ್? ಭವಿಷ್ಯದ ಬಗ್ಗೆ ರಿಯಲ್ ಹೀರೋ ಮಾತು

    ದೇಶದ ವಿವಿಧ ಕಡೆ ಆಕ್ಸಿಜನ್ ಘಟಕ ಸ್ಥಾಪನೆ

    ದೇಶದ ವಿವಿಧ ಕಡೆ ಆಕ್ಸಿಜನ್ ಘಟಕ ಸ್ಥಾಪನೆ

    ಕೊರೊನಾ ಎರಡನೇ ಅಲೆ ಹೆಚ್ಚಾದ ಸಮಯದಲ್ಲಿ ಉಂಟಾದ ಆಕ್ಸಿಜನ್ ಸಮಸ್ಯೆ ಹೋಗಲಾಡಿಸಲು ಸೋನು ಸೂದ್ ಹರಸಾಹಸ ಪಡುತ್ತಿದ್ದಾರೆ. ದೇಶಕ್ಕೆ ಆಕ್ಸಿಜನ್ ಅವಶ್ಯಕತೆ ತುಂಬಾ ಇದೆ ಎಂದು ತಿಳಿದಿರುವ ರಿಯಲ್ ಹೀರೋ ಇದೀಗ ದೇಶದ ವಿವಿಧ ಕಡೆಗಳಲ್ಲಿ ಆಕ್ಸಿಜನ್ ಘಟಕ ಸ್ಥಾಪಿಸಲು ಮುಂದಾಗಿದ್ದಾರೆ.

    18 ಆಕ್ಸಿಜನ್ ಸ್ಥಾವರ ಸ್ಥಾಪನೆ ಸಿದ್ಧತೆ

    18 ಆಕ್ಸಿಜನ್ ಸ್ಥಾವರ ಸ್ಥಾಪನೆ ಸಿದ್ಧತೆ

    ದೇಶದ ವಿವಿಧ ರಾಜ್ಯಗಳಲ್ಲಿ 18 ಆಕ್ಸಿಜನ್ ಸ್ಥಾವರಗಳನ್ನು ಸ್ಥಾಪಿಸುತ್ತಿದ್ದಾರೆ. ಈಗಾಗಲೇ ಆಂಧ್ರ ಪ್ರದೇಶದ ಕರ್ನೂಲ್ ಮತ್ತು ನಲ್ಲೂರು ಹಾಗೂ ಕರ್ನಾಟಕದ ಮಂಗಳೂರಿನಲ್ಲಿ ಈಗಾಗಲೇ ಆಕ್ಸಿಜಕ್ ಘಟಕ ಕಾರ್ಯ ಪ್ರಾರಂಭವಾಗಿದೆ. ಶೀಘ್ರದಲ್ಲೇ ಉಳಿದ ಕಡೆ, ತಮಿಳುನಾಡು, ಕರ್ನಾಟಕ, ಪಂಜಾಬ್, ರಾಜಸ್ಥಾನ, ತೆಲಂಗಾಣ, ಬಿಹಾರ್, ಮಹಾರಾಷ್ಟ್ರ ಉತ್ತರ ಪ್ರದೇಶ ಸೇರಿದಂತೆ ಇನ್ನೂ ಅನೇಕ ಕಡೆ ಸ್ಥಾಪಿಸಲು ಸಿದ್ಧತೆ ನಡೆಯುತ್ತಿದೆ.

    ಸಾಧ್ಯವಾದಷ್ಟು ಕಡೆ ಆಕ್ಸಿಜನ್ ಘಟಕ ಸ್ಥಾಪಿಸುತ್ತಿದ್ದೇವೆ

    ಸಾಧ್ಯವಾದಷ್ಟು ಕಡೆ ಆಕ್ಸಿಜನ್ ಘಟಕ ಸ್ಥಾಪಿಸುತ್ತಿದ್ದೇವೆ

    ಈ ಬಗ್ಗೆ ಮಾತನಾಡಿರುವ ಸೋನು ಸೂದ್, 'ಕಳೆದ ಕೆಲವು ತಿಂಗಳುಗಳಲ್ಲಿ ನಾವೆಲ್ಲರೂ ಎದುರಿಸಿದ ದೊಡ್ಡ ಸಮಸ್ಯೆ ಆಮ್ಲಜನಕ ಮತ್ತು ಅದರ ಲಭ್ಯತೆ. ಆಮ್ಲಜನಕ ಸಮಸ್ಯೆ ನಿರ್ಮೂಲನೆ ಮಾಡಲು ಏನು ಮಾಡಬೇಕೆಂದು ನಮ್ಮ ತಂಡ ಈಗಾಗಲೇ ಪ್ಲಾನ್ ಮಾಡಿದ್ದು, ಸಾಧ್ಯವಾದಷ್ಟು ಕಡೆ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲು ನಿರ್ಧರಿಸಿದೆವು' ಎಂದಿದ್ದಾರೆ.

    ಆಮ್ಲಜನಕ ಕೊರತೆಯಿಂದ ಯಾರು ಸಾಯಬಾರದು

    ಆಮ್ಲಜನಕ ಕೊರತೆಯಿಂದ ಯಾರು ಸಾಯಬಾರದು

    'ವಿಶೇಷವಾಗಿ ಈ ಆಕ್ಸಿಜನ್ ಸ್ಥಾವರಗಳನ್ನು ಬಡ ಜನರಿಗೆ ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗುವುದು. ಆಮ್ಲಜನಕ ಸ್ಥಾವರ ಸ್ಥಾಪನೆ ಮಾಡುವ ಉದ್ದೇಶ ದೇಶದಲ್ಲಿ ಆಮ್ಲಜನಕದಂತ ಮೂಲಭೂತ ಅವಶ್ಯಕತೆಯ ಕೊರತೆಯಿಂದ ಒಬ್ಬ ವ್ಯಕ್ತಿಯ ಸಾಯಬಾರದು ಎನ್ನುವುದು' ಎಂದು ಸೋನು ಸೂದ್ ಹೇಳಿದ್ದಾರೆ.

    Recommended Video

    ದರ್ಶನ್ ಮನವಿಗೆ ಸ್ಪಂದಿಸಿದ ಉಪೇಂದ್ರ | Darshan | Filmibeat Kannada

    3ನೇ ಅಲೆ ಬಗ್ಗೆ ಹೇಳಿದ್ದೇನು?

    ಇನ್ನೂ 3ನೇ ಅಲೆ ಬಗ್ಗೆ ಮಾತನಾಡಿದ ಸೋನು ಸೂದ್, ಇದು ಆಮ್ಲಜನಕ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುತ್ತಿದೆ. ಈ ಆಕ್ಸಿಜನ್ ಘಟಕಗಳು ಅನೇಕ ವರ್ಷಗಳು ಆಕ್ಸಿಜನ್ ನೀಡುತ್ತದೆ. ಯಾಕೆ 3ನೇ ಮತ್ತು 4ನೇ ಅಲೆ ಕಾಯಬೇಕು. ಹಳ್ಳಿಗಳಿಗೂ ಆಕ್ಸಿಜನ್ ಒದಗಿಸುತ್ತದೆ' ಎಂದು ಸೋನು ಸೂದ್ ಹೇಳಿದ್ದಾರೆ. ಮುಂದಿನ ತಿಂಗಳಿಂದಲೇ ಈ ಸ್ಥಾವರಗಳು ಕಾರ್ಯನಿರ್ವಹಿಸಲಿವೆ ಎಂದು ಸೋನು ಸೂದ್ ಹೇಳಿದ್ದಾರೆ.

    English summary
    Real Hero Sonu Sood set up 18 Oxygen plants across India.
    Thursday, June 10, 2021, 16:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X