»   » ರೇಖಾ-ಬಿಗ್ ಬಿ ರೋಮ್ಯಾನ್ಸ್ ನೋಡಿ ಕಣ್ಣೀರು ಹಾಕಿದ್ದ ಜಯಾ ಬಚ್ಚನ್

ರೇಖಾ-ಬಿಗ್ ಬಿ ರೋಮ್ಯಾನ್ಸ್ ನೋಡಿ ಕಣ್ಣೀರು ಹಾಕಿದ್ದ ಜಯಾ ಬಚ್ಚನ್

Posted By: ಸೋನು ಗೌಡ
Subscribe to Filmibeat Kannada

ಯಾವುದೇ ಭಾಷೆಯ ಚಿತ್ರರಂಗದ ನಟ ಅಥವಾ ನಟಿಯರ ಜೀವನಾಧರಿತ ಪುಸ್ತಕ ಅಥವಾ ಸಿನಿಮಾ ಬಂದರೆ, ಅವರ ಬಗ್ಗೆ ಗೊತ್ತಿಲ್ಲದ ರಹಸ್ಯ ಕಥೆಗಳು ಎಲ್ಲರ ಎದುರು ಬಟಾ-ಬಯಲಾಗುತ್ತದೆ.

ಬರೀ ಸಿನಿಮಾ ತಾರೆಯರು ಮಾತ್ರವಲ್ಲದೇ, ಇನ್ನಿತರೇ ಸೆಲೆಬ್ರಿಟಿಗಳ ಜೀವನಾಧರಿತ ಕಥೆಗಳು ಈಗಾಗಲೇ ಸಿನಿಮಾ ಆಗಿ ತೆರೆಯ ಮೇಲೆ ರಾರಾಜಿಸಿವೆ. ಇದೀಗ ಬಾಲಿವುಡ್ ನ ಎವರ್ ಗ್ರೀನ್ ನಟಿ ರೇಖಾ ಅವರ ಕುರಿತಾದ ಪುಸ್ತಕ ಬಿಡುಗಡೆ ಆಗಿದ್ದು, ಭಾರಿ ಸುದ್ದಿಗೆ ಗ್ರಾಸವಾಗಿದೆ.[ಜಯಾ ಬಚ್ಚನ್ 'ಬೆಂಗಳೂರು ಆಗಲ್ಲ' ಅಂದಿದ್ದಕ್ಕೆ ರೆಬೆಲ್ ಸ್ಟಾರ್ ಏನಂದ್ರು]

ಲೇಖಕ ಯಾಸಿರ್ ಉಸ್ಮಾನ್ ಬರೆದಿರುವ 'ರೇಖಾ: ದ ಅನ್ ಟೋಲ್ಡ್ ಸ್ಟೋರಿ' ಪುಸ್ತಕದಲ್ಲಿ, ನಟಿ ರೇಖಾ ಅವರ ಬಗ್ಗೆ ಹಲವಾರು ರಹಸ್ಯಗಳು ಬಯಲಿಗೆ ಬಂದಿವೆ. ಒಂದು ಕಾಲದಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ನಟಿ ರೇಖಾ ಅವರ ಜೋಡಿ ಇಡೀ ಬಾಲಿವುಡ್ ಚಿತ್ರರಂಗದಲ್ಲಿ ಹಿಟ್ ಎನಿಸಿಕೊಂಡಿತ್ತು.

ಬರೀ ತೆರೆಯ ಮೇಲೆ ಮಾತ್ರವಲ್ಲದೇ, ತೆರೆಯ ಹಿಂದೆ ಕೂಡ ಈ ಜೋಡಿಗೆ ವಿಶೇಷವಾದ ಸಂಬಂಧ ಇತ್ತು ಅಂತಾರೆ. ಮುಂದೆ ಓದಿ....

'Muqaddar Ka Sikandar' ಚಿತ್ರದ ಟ್ರಯಲ್ ಶೋ

ಒಂದು ಬಾರಿ 'ಮುಕ್ಕದಾರ್ ಕಾ ಸಿಕಂದರ್' ('Muqaddar Ka Sikandar') ಚಿತ್ರದ ಟ್ರಯಲ್ ಶೋಗೆ ಅಮಿತಾಭ್ ಬಚ್ಚನ್ ಅವರು ಕುಟುಂಬ ಸಮೇತ ಬಂದಿದ್ದರು. ಆವಾಗ ರೇಖಾ ಅವರು ಪ್ರೊಜೆಕ್ಷನ್ ರೂಮ್ ನಲ್ಲಿ ಕುಳಿತಿದ್ದರಂತೆ. ರೇಖಾ ಅವರಿಗೆ ಎಲ್ಲರೂ ಕಾಣುತ್ತಿದ್ದರು, ಆದರೆ ಅವರು ಯಾರಿಗೂ ಕಾಣಿಸುತ್ತಿರಲಿಲ್ಲ.[ಲಂಡನ್ ನಲ್ಲಿ ಖುಲ್ಲಂ ಖುಲ್ಲಾ ಒಂದಾದ ಅತ್ತೆ-ಸೊಸೆ]

ಕಣ್ಣೀರು ಸುರಿಸಿದ್ದ ಜಯಾ ಬಚ್ಚನ್

'Muqaddar Ka Sikandar' ಚಿತ್ರದಲ್ಲೊಂದು ರೋಮ್ಯಾಂಟಿಕ್ ದೃಶ್ಯವಿತ್ತು. ಅದನ್ನು ನೋಡಿ ಜಯ ಬಚ್ಚನ್ ಅವರ ಕಣ್ಣಲ್ಲಿ ನೀರು ಬಂದಿತ್ತಂತೆ. ಅದನ್ನು ರೇಖಾ ಅವರು ಸ್ಪಷ್ಟವಾಗಿ ನೋಡಿದ್ದರಂತೆ. ತಮ್ಮ ಪತಿ ರೇಖಾ ಅವರ ಜೊತೆ ರೋಮ್ಯಾಂಟಿಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದನ್ನು ಕಂಡು ಜಯಾ ಬಚ್ಚನ್ ಅವರು ಬಹಳ ಬೇಸರ ಮಾಡಿಕೊಂಡು ಅತ್ತಿದ್ದರಂತೆ.[ಅಮಿತಾಬ್ ಬಚ್ಚನ್ ಕುಟುಂಬದಲ್ಲಿ ಅತ್ತೆ ಸೊಸೆ ಜಗಳ]

ವಾರ್ನ್ ಮಾಡಿದ ಜಯಾ ಬಚ್ಚನ್

ಇನ್ನು ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ನಟಿ ರೇಖಾ ಅವರು 'Muqaddar Ka Sikandar' ಚಿತ್ರದ ನಂತರ, ಶಾಶ್ವತವಾಗಿ ತೆರೆಯ ಮೇಲೆ ಕಾಣಿಸಿಕೊಳ್ಳದೇ ಇರಲು ಪ್ರಮುಖ ಕಾರಣ ಜಯಾ ಬಚ್ಚನ್ ಅವರಂತೆ. ಪತ್ನಿ ಜಯಾ ಬಚ್ಚನ್ ಅವರ ಆದೇಶದ ಮೇರೆಗೆ ಮದುವೆ ನಂತರ ರೇಖಾ ಅವರ ಜೊತೆ ತೆರೆ ಹಂಚಿಕೊಳ್ಳದಿರಲು ನಿರ್ಧರಿಸಿದರಂತೆ.

ರೇಖಾಗೆ ಬಿಗ್ ಬಿ ಅವರಿಂದ ಸಿಕ್ಕ ಉತ್ತರ

'Muqaddar Ka Sikandar' ಚಿತ್ರದ ನಂತರ ಬಿಗ್ ಬಿ ಅವರು ರೇಖಾ ಅವರನ್ನು ನನ್ನ ಜೊತೆ ನಟಿಸಲು ಕೇಳಬೇಡಿ ಎಂದು ಎಲ್ಲಾ ಸಿನಿಮಾ ನಿರ್ಮಾಪಕರಿಗೂ ಹೇಳಿದರಂತೆ. ಆದ್ದರಿಂದ ಎಲ್ಲರೂ ರೇಖಾ ಅವರನ್ನು ಪ್ರಶ್ನೆ ಮಾಡಲು ಆರಂಭಿಸಿದರು. ಹಾಗಾಗಿ ಸಹಜವಾಗಿ ರೇಖಾ ಅವರು ಬಿಗ್ ಬಿ ಅವರನ್ನು ಪ್ರಶ್ನೆ ಮಾಡಿದಾಗ, 'ನಾನು ಆ ವಿಚಾರದ ಬಗ್ಗೆ ಏನೂ ಹೇಳಲು ಬಯಸುವುದಿಲ್ಲ, ಅದರ ಬಗ್ಗೆ ನೀನು ಏನೂ ಕೇಳಬೇಡ' ಅಂತ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಬಿಗ್ ಬಿ ಉತ್ತರ ಕೊಟ್ಟಿದ್ದರಂತೆ.

ರಿಷಿ-ನೀತು ಕಪೂರ್ ಮದುವೆಯಲ್ಲಿ ಕಣ್ಣೀರಾದ ಜಯಾ

ಇನ್ನು ನಟ ರಿಷಿ ಕಪೂರ್ ಮತ್ತು ನೀತು ಕಪೂರ್ ಅವರ ಮದುವೆ ಸಂದರ್ಭದಲ್ಲಿ ಕೂಡ ಜಯಾ ಬಚ್ಚನ್ ಅವರ ಕಣ್ಣಲ್ಲಿ ರೇಖಾ ಅವರು ನೀರು ಬರಿಸಿದ್ದರಂತೆ. ರೇಖಾ ಅವರು ಬಿಗ್ ಬಿ ಅವರ ಜೊತೆ ತುಂಬಾ ಕ್ಲೋಸ್ ಆಗಿ ಇದ್ದದ್ದನ್ನು ಕಂದು ಜಯಾ ಅತ್ತಿದ್ದರಂತೆ.

'ದೋ ಅಂಜಾನೇ' ಚಿತ್ರದ ನಂತರ ಲವ್ ಶುರು

ನಟಿ ರೇಖಾ ಮತ್ತು ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಲವ್ ಸ್ಟೋರಿ ಶುರುವಾಗಿದ್ದು, 'ದೋ ಅಂಜಾನೇ' ಚಿತ್ರದ ನಂತರ. ತದನಂತರ ಅಮಿತಾಭ್ ಮತ್ತು ರೇಖಾ ಅವರು 'ಖೂನ್ ಪಸೀನಾ', 'ಗಂಗಾ ಕೀ ಸೌಗಂಧ್', 'ಸುಹಾಗ್', ' ಮುಕ್ಕಾಧರ್ ಕಾ ಸಿಕಂದರ್', 'ರಾಮ್ ಬಲರಾಮ್', 'ಮಿಸ್ಟರ್ ನಟವರ್ ಲಾಲ್', 'ಸಿಲ್ ಸಿಲಾ' ಮುಂತಾದ ಸಿನಿಮಾಗಳಲ್ಲಿ ರೋಮ್ಯಾನ್ಸ್ ಮಾಡಿದ್ದಾರೆ.

English summary
The estranged relationship of Rekha and Amitabh Bachchan is often in the headlines. The last movie they did together was 'Muqaddar Ka Sikandar'. But did you know why the duo didn't work together after that movie? Well of course, owing to the ultimatum given by Jaya Bachchan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada