»   » ಬಚ್ಚನ್ ಬಹುರಾಣಿಗೆ ಹೃದಯಸ್ಪರ್ಶಿ ಪತ್ರ ಬರೆದ ಹಿರಿಯ ನಟಿ ರೇಖಾ

ಬಚ್ಚನ್ ಬಹುರಾಣಿಗೆ ಹೃದಯಸ್ಪರ್ಶಿ ಪತ್ರ ಬರೆದ ಹಿರಿಯ ನಟಿ ರೇಖಾ

Posted By:
Subscribe to Filmibeat Kannada

ಮಾಜಿ ವಿಶ್ವ ಸುಂದರಿ, ಬಚ್ಚನ್ ಬಹುರಾಣಿ ಐಶ್ವರ್ಯ ರೈ ಬಚ್ಚನ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಎರಡು ದಶಕಗಳು ಉರುಳಿವೆ. ಈ ಸುಸಂದರ್ಭದಲ್ಲಿ ನಟಿ ಐಶ್ವರ್ಯ ರೈ ಬಚ್ಚನ್ ಅವರಿಗೆ ಹಿರಿಯ ನಟಿ ರೇಖಾ ಒಂದು ಪತ್ರ ಬರೆದಿದ್ದಾರೆ. ಆ ಪತ್ರವನ್ನ ಓದಿದರೆ, ಐಶ್ವರ್ಯ ಬಗ್ಗೆ ನೀವು ಹೆಮ್ಮೆ ಪಡುವುದು ಖಂಡಿತ.

ಎರಡು ಜಡೆ ಸೇರಿದರೆ ಜಗಳ ಗ್ಯಾರೆಂಟಿ ಎಂಬ ಮಾತಿದೆ. ಚಿತ್ರರಂಗದಲ್ಲಿ ಕೋಳಿ ಜಗಳಗಳು ಕೂಡ ಅಷ್ಟೇ ಸಾಮಾನ್ಯ. ಆದ್ರೆ, ಇಲ್ಲಿ ನೋಡಿ... ವಯಸ್ಸು ಹಾಗೂ ಅನುಭವದಲ್ಲಿ ತಮಗಿಂತ ಕಿರಿಯಳಾದ ನಟಿ ಐಶ್ವರ್ಯ ರೈ ಬಚ್ಚನ್ ಬಗ್ಗೆ ಹಿರಿಯ ನಟಿ ರೇಖಾ ಹೊಗಳಿ ಬರೆದಿರುವ ಪತ್ರ ನಿಜಕ್ಕೂ ಹೃದಯಸ್ಪರ್ಶಿ ಆಗಿದೆ.

ಐಶ್ವರ್ಯ ರೈ ಮಾವ ಅಮಿತಾಬ್ ಬಚ್ಚನ್ ಜೊತೆಗೆ ಹಲವು ಸಿನಿಮಾಗಳಲ್ಲಿ ಜೋಡಿಯಾಗಿ ಅಭಿನಯಿಸಿದ್ದ ರೇಖಾ, ಐಶ್ವರ್ಯ ರೈ ಗೆ ಬರೆದಿರುವ ಪತ್ರವನ್ನ ಮ್ಯಾಗಝೀನ್ ವೊಂದು ಪ್ರಕಟ ಮಾಡಿದೆ. ಅದರ ಅನುವಾದ ಇಲ್ಲಿದೆ ಓದಿರಿ...

ಹರಿಯುವ ನದಿಯಂತೆ

''ನನ್ನ ಐಶ್,

ಸಾಮರಸ್ಯದಿಂದ ಬದುಕುವ ನಿನ್ನಂಥ ಉತ್ಸಾಹಭರಿತ ಮಹಿಳೆ ಹರಿಯುವ ನದಿಯಂತೆ. ಯಾವತ್ತಿಗೂ ನಿಂತ ನೀರಲ್ಲ. ತೋರಿಕೆ ಇಲ್ಲದೆ ತನಗೆ ಬೇಕಾದ ಕಡೆಗೆ ಹೋಗುವ, ಗುರಿ ತಲುಪುವ, ಎಂದಿಗೂ ತನ್ನತನ ಬಿಟ್ಟುಕೊಡದ ಗಟ್ಟಿಗಿತ್ತಿ''

ಇದೇನಿದು.!? ತಲೆ ಬೋಳಿಸಿಕೊಂಡ್ರಾ ನಟಿ ಐಶ್ವರ್ಯ ರೈ.?

ಜನರು ಮರೆಯಲು ಸಾಧ್ಯವಿಲ್ಲ

''ನೀನು ಏನು ಹೇಳಿದೆ, ಏನು ಮಾಡಿದೆ ಎಂಬುದನ್ನ ಜನ ಮರೆಯಬಹುದು. ಆದ್ರೆ, ನೀನು ಮೂಡಿಸಿರುವ ಭಾವನೆಯನ್ನ ಜನರು ಮರೆಯಲು ಸಾಧ್ಯವೇ ಇಲ್ಲ. ಎಲ್ಲ ಸದ್ಗುಣಗಳಿಗೆ ಧೈರ್ಯ ಮುಖ್ಯ ಎಂಬುದಕ್ಕೆ ಜೀವಂತ ಉದಾಹರಣೆ ನೀನು. ಯಾಕಂದ್ರೆ, ಧೈರ್ಯ ಇಲ್ಲದೆ ಇದ್ದರೆ ಯಾವುದೇ ಸದ್ಗುಣ ಪಾಲಿಸಲು ಸಾಧ್ಯವಿಲ್ಲ''

ದೇಹ ಕಾಂತಿ ಹೆಚ್ಚಿಸಲು ಐಶ್ವರ್ಯ ರೈ ಗುಟ್ಟಾಗಿ ಮಾಡುತ್ತಿರುವುದೇನು?

ನಿನಗೆ ನೀನೇ ಸರಿಸಾಟಿ

''ನಿನ್ನ ಅಗಾಧ ಸ್ಥೈರ್ಯ ಹಾಗೂ ನಿಷ್ಕಲ್ಮಷವಾದ ಶಕ್ತಿ ನೀನು ಮಾತನಾಡುವ ಮೊದಲೇ ನಿನ್ನನ್ನು ಪರಿಚಯ ಮಾಡಿಕೊಡುತ್ತದೆ. ನಿನಗೆ ಇಷ್ಟವಾದ್ದುದ್ದನ್ನು ನೀನು ಎಷ್ಟು ಚೆನ್ನಾಗಿ ಮಾಡಿದೆ ಅಂದರೆ, ಜನರೂ ಅದರಿಂದ ಆಕರ್ಷಿತರಾದರು. ನಿನಗೆ ನೀನೇ ಸರಿಸಾಟಿ. ಅದನ್ನ ಯಾರಿಗೂ ಸಾಬೀತು ಪಡಿಸುವ ಅವಶ್ಯಕತೆ ಇಲ್ಲ''

ಪದಗಳಲ್ಲಿ ವರ್ಣಿಸಲು ಅಸಾಧ್ಯ

''ಕಷ್ಟದ ಹಾದಿಯಲ್ಲಿ ಫೀನಿಕ್ಸ್ ನಂತೆ ಎದ್ದು ಬಹಳ ದೂರ ಸಾಗಿ ಬಂದಿದ್ದೀಯಾ ಬೇಬಿ.. ಚಂದ್ರಮುಖಿಯಂತಿರುವ ನಿನ್ನ ನಾ ನೋಡಿದ ಕ್ಷಣ, ಪಟ್ಟಿರುವ ಹೆಮ್ಮೆಯನ್ನ ಪದಗಳಲ್ಲಿ ವರ್ಣಿಸಲು ಅಸಾಧ್ಯ''

ಎರಡು ದಶಕಗಳು - ವಾವ್!

''ಯಾವುದೇ ಪಾತ್ರ ಕೊಟ್ಟರೂ, ನಿನ್ನ ಕೈಯಿಂದ ಸಾಧ್ಯವಾದಷ್ಟು ಅತ್ಯುತ್ತಮವಾಗಿಯೇ ನಿಭಾಯಿಸಿದ್ದೀಯಾ. ಆದ್ರೆ, ಅವೆಲ್ಲಕ್ಕಿಂತಲೂ ಅತ್ಯುತ್ತಮವಾದದ್ದು ಸದ್ಯ ಆರಾಧ್ಯಗಾಗಿ ನೀನು ನಿಭಾಯಿಸುತ್ತಿರುವ ಅಮ್ಮನ ಪಾತ್ರ. ಐಶ್ವರ್ಯ ರೈ ಬಚ್ಚನ್ ಗೆ ಎರಡು ದಶಕಗಳು - ವಾವ್! ಲವ್ ಯೂ...'' - ರೇಖಾ ಮಾ

English summary
Bollywood Actress Rekha pens down a heart touching letter to Aishwarya Rai Bachchan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X