For Quick Alerts
  ALLOW NOTIFICATIONS  
  For Daily Alerts

  ಅಮಿತಾಬ್ ಬಚ್ಚನ್ ನೋಡಿ 'ಡೇಂಜರ್' ಎಂದ ರೇಖಾ: ವಿಡಿಯೋ ವೈರಲ್

  |

  ಬಾಲಿವುಡ್ ನ ಹಿರಿಯ ಮತ್ತು ಎವರ್ ಗ್ರೀನ್ ನಟಿ ರೇಖಾ ಆಗಾಗ ಸುದ್ದಿಯಲ್ಲಿರುತ್ತಾರೆ. 65 ವರ್ಷದ ನಟಿ ರೇಖಾ ಸದ್ಯ ಯಾವುದೆ ಸಿನಿಮಾಗಳಲ್ಲಿ ಅಭಿನಯಿಸುತ್ತಿಲ್ಲ. ಆದರೆ ಸಾರ್ವಜನಿಕ ಕಾರ್ಯಕ್ರಮಗಳು, ಅವಾರ್ಡ್ ಸಮಾರಂಭ ಸೇರಿದಂತೆ ಅನೇಕ ಕಾರ್ಯಕ್ರಮಗಳ ಮೂಲಕ ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಿರುತ್ತಾರೆ.

  ಅಂದ್ಹಾಗೆ ರೇಖಾ ಇತ್ತೀಚಿಗೆ ಕ್ಯಾಲೆಂಡರ್ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಖ್ಯಾತ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಸೆರೆಹಿಡಿದಿರುವ 2020 ಸೆಲೆಬ್ರಿಟಿ ಕ್ಯಾಲೆಂಡರ್ ರಿಲೀಸ್ ಸಮಾರಂಭದಲ್ಲಿ ರೇಖಾ, ಅಮಿತಾಬ್ ಬಗ್ಗೆ ಹೇಳಿರುವ ಮಾತು ಅಚ್ಚರಿಯುಂಟು ಮಾಡಿದೆ. ಮುಂದೆ ಓದಿ..

  ಬಚ್ಚನ್ ಬಗ್ಗೆ ತಾಪ್ಸಿ ಪನ್ನು ಹೇಳಿಕೆ: ಪರ ವಿರೋಧ ಚರ್ಚೆ ಶುರುಬಚ್ಚನ್ ಬಗ್ಗೆ ತಾಪ್ಸಿ ಪನ್ನು ಹೇಳಿಕೆ: ಪರ ವಿರೋಧ ಚರ್ಚೆ ಶುರು

  ಅಮಿತಾಬ್ ನೋಡಿ ಡೇಂಜರ್ ಜೋನ್ ಎಂದ ರೇಖಾ

  ಅಮಿತಾಬ್ ನೋಡಿ ಡೇಂಜರ್ ಜೋನ್ ಎಂದ ರೇಖಾ

  ರ್ಯಾಂಪ್ ವಾಕ್ ಮಾಡುತ್ತಿದ್ದ ರೇಖಾ ಅಮಿತಾಬ್ ಬಚ್ಚನ್ ಫೋಟೋ ಇರುವ ಕಡೆ ಹೋಗುತ್ತಾರೆ. ಫೋಟೋ ಬಳಿ ಹೋಗುತ್ತಿದ್ದಂತೆ ಇದು ಡೇಂಜರ್ ಜೋನ್ ಎನ್ನುತ್ತಾ ವೇಗವಾಗಿ ವಾಪಸ್ ಬರುತ್ತಾರೆ. ರೇಖಾ ಅವರ ತಮಾಷೆಯ ಮಾತು ಕೇಳಿ ಅಲ್ಲಿ ಇರುವವರೆಲ್ಲ ಜೋರಾಗಿ ನಗುತ್ತಾರೆ.

  ಬಾಲಿವುಡ್ ಐಕಾನಿಕ್ ಜೋಡಿ

  ಬಾಲಿವುಡ್ ಐಕಾನಿಕ್ ಜೋಡಿ

  ರೇಖಾ ಜೊತೆ ನಟಿ ಡಬ್ಬೂ ರತ್ನಾನಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟಿ ರೇಖಾ ಮತ್ತು ಅಮಿತಾಬ್ ಬಚ್ಚನ್ ಬಾಲಿವುಡ್ ನ ಐಕಾನಿಕ್ ಜೋಡಿ. ತೆರೆಮೇಲೆ ಈ ಜೋಡಿ ನೋಡಿ ಇಷ್ಟಪಡದವರೆ ಇಲ್ಲ. ಇಬ್ಬರು ಸಿಲ್ಸಿಲಾ, ದೋ ಅಂಜಾನೆ, ಶ್ರೀ ನಟವರ್ಲಾಲ್, ನಮಕ್ ಹರಾಮ್, ಮುಕ್ಕದ್ದಾರ್ ಕಾ ಸಿಕಂದರ್ ಸೇರಿದಂತೆ ಸಾಕಷ್ಟು ಎವರ್ ಗ್ರೀನ್ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.

  ಛೇ.. ಸುಧಾ ಮೂರ್ತಿಗೆ ಕೈಕೊಟ್ಟ 'ಈ' ಪ್ರಶ್ನೆ.! ಮನೆಯಲ್ಲಿ ನಂಗೆ ಏಟು ಬೀಳೋದು ಗ್ಯಾರೆಂಟಿ ಎಂದ ಅಮಿತಾಬ್.!ಛೇ.. ಸುಧಾ ಮೂರ್ತಿಗೆ ಕೈಕೊಟ್ಟ 'ಈ' ಪ್ರಶ್ನೆ.! ಮನೆಯಲ್ಲಿ ನಂಗೆ ಏಟು ಬೀಳೋದು ಗ್ಯಾರೆಂಟಿ ಎಂದ ಅಮಿತಾಬ್.!

  ಅಮಿತಾಬ್-ರೇಖಾ ಲಿಂಕ್ ಅಪ್

  ಸಿನಿಮಾಗಳ ಜೊತೆಗೆ ಇವರಿಬ್ಬರ ಲಿಂಕ್ ಅಪ್ ಬಗ್ಗೆಯು ಸಾಕಷ್ಟು ಸುದ್ದಿಗಳು ಹರಿದಾಡುತ್ತಿರುತ್ತವೆ. ಒಂದುಕಾಲದಲ್ಲಿ ಅಮಿತಾಬ್ ಮತ್ತು ರೇಖಾ ಭಗ್ನ ಪ್ರೇಮಿಗಳಾಗಿದ್ದರಂತೆ ಎನ್ನುವ ಸುದ್ದಿ ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅಮಿತಾಬ್, ಜಯಾ ಬಚ್ಚನ್ ಅವರನ್ನು ಮದುವೆ ಆಗುತ್ತಾರೆ. ರೇಖಾ ಮಾತ್ರ ಅಮಿತಾಬ್ ನೆನಪಿನಲ್ಲಿ ಜೀವಿಸುತ್ತಿದ್ದಾರೆ. ಇನ್ನು ಮದುವೆ ಆಗದೆ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ.

  ಇದುವರೆಗೂ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿಲ್ಲ

  ಇದುವರೆಗೂ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿಲ್ಲ

  ಅಮಿತಾಬ್ ಮತ್ತು ರೇಖಾ ಮುಖಾಮುಖಿಯಾದ ಸಂದರ್ಭಗಳೆ ಇಲ್ಲ. ಇದುವೆಗೂ ಇಬ್ಬರು ಬಾಲಿವುಡ್ ಈ ಐಕಾನಿಕ್ ಜೋಡಿ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಅಲ್ಲದೆ ಅಮಿತಾಬ್ ಆಗಲೆ ಅಥವಾ ರೇಖಾ ಆಗಲಿ ಇಬ್ಬರು ಎಲ್ಲಿಯೂ ಒಬ್ಬರ ಬಗ್ಗೆ ಮತ್ತೊಬ್ಬರು ಮಾತನಾಡಿಲ್ಲ. ಆದರೆ ಮೊದಲ ಬಾರಿಗೆ ಅಮಿತಾಬ್ ಫೋಟೋ ನೋಡಿ ರೇಖಾ ಪ್ರತಿಕ್ರಿಯೆ ನೀಡಿರುವುದು ಅಚ್ಚರಿ ಮೂಡಿಸಿದೆ.

  English summary
  Bollywood Actress Rekha said Danger Zone after seeing Amitabh Bachchan photo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X