Just In
Don't Miss!
- News
ರಾಜೀವ್ ಹಂತಕರ ಬಿಡುಗಡೆ: 3-4 ದಿನದಲ್ಲಿ ತಮಿಳುನಾಡು ರಾಜ್ಯಪಾಲರ ನಿರ್ಧಾರ
- Automobiles
ದೇಶಾದ್ಯಂತ ಹತ್ತು ಹೊಸ ಶೋರೂಂಗಳನ್ನು ತೆರೆಯಲಿದೆ ಸಿಟ್ರನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 21ರ ಚಿನ್ನ, ಬೆಳ್ಳಿ ದರ
- Lifestyle
ವಾಸ್ತು ಪ್ರಕಾರ ನಿಮ್ಮ ಮನೆಯ ಬಣ್ಣ ಈ ರೀತಿ ಇದ್ದರೆ ಒಳ್ಳೆಯದು
- Sports
ಥೈಲ್ಯಾಂಡ್ ಓಪನ್: ಸಮೀರ್, ಸಾತ್ವಿಕ್-ಪೊನ್ನಪ್ಪ ಕ್ವಾರ್ಟರ್ ಫೈನಲ್ಗೆ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಲ್ಮಾನ್ ಖಾನ್ ಅನ್ನು ದೇವಮಾನವ ಎಂದ ರೆಮೊ ಡಿಸೋಜಾ ಪತ್ನಿ: ಕಾರಣ?
ನೃತ್ಯ ನಿರ್ದೇಶಕ, ಸಿನಿಮಾ ನಿರ್ದೇಶಕ ರೆಮೊ ಡಿಸೋಜಾ ಇತ್ತೀಚೆಗಷ್ಟೆ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಐಸಿಯುವಿನಲ್ಲಿಟ್ಟು ಚಿಕಿತ್ಸೆ ನೀಡಲಾಗಿತ್ತು.
ಕೆಲವು ದಿನಗಳ ನಂತರ ಗುಣಮುಖರಾಗಿ ಮನೆಗೆ ಮರಳಿದರು ರೆಮೊ ಡಿಸೋಜಾ. ಪತ್ನಿಯೊಂದಿಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತಾವು ಆರಾಮವಾಗಿರುವುದಾಗಿ ಹೇಳಿದ್ದರು.
ರೆಮೊ ಡಿಸೋಜಾ ಗೆ ಹೃದಯಾಘಾತವಾದ ಸಂದರ್ಭದಲ್ಲಿ ಬೆಂಬಲಕ್ಕೆ ನಿಂತ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ ರೆಮೊ ಪತ್ನಿ ಲಿಜೆಲ್ಲಾ. ವಿಶೇಷವಾಗಿ ಸಲ್ಮಾನ್ ಖಾನ್ ಸಹಾಯವನ್ನು ನೆನಪಿಸಿಕೊಂಡಿರುವ ಲೆಜಿಲ್ಲಾ, ಸಲ್ಮಾನ್ ಅನ್ನು 'ಏಂಜೆಲ್' ಗೆ ಹೋಲಿಸಿದ್ದಾರೆ.

ಭಾವನಾತ್ಮಕ ಬೆಂಬಲ ನೀಡಿದ ಸಲ್ಮಾನ್ ಖಾನ್
ನನ್ನ ಹೃದಯಾಂತರಾಳದಿಂದ ಸಲ್ಮಾನ್ ಖಾನ್ ಗೆ ಧನ್ಯವಾದಗಳು ಹೇಳುತ್ತೇನೆ. ನಮಗೆ ಭಾವನಾತ್ಮಕವಾಗಿ ಬಹಳ ದೊಡ್ಡ ಆಸರೆಯಾಗಿ ಸಲ್ಮಾನ್ ಖಾನ್ ನಿಂತರು, ನೀವೊಬ್ಬ ದೇವಮಾನವ ನಿಮಗೆ ಧನ್ಯವಾದಗಳು ಭಾಯ್, ಸದಾ ನಮ್ಮೊಂದಿಗೆ ಇದ್ದಿದ್ದಕ್ಕೆ' ಎಂದಿದ್ದಾರೆ ಲೆಜಿಯಾ.

ಕುಟುಂಬ ಮತ್ತು ಗೆಳೆಯರಿಗೆ ಧನ್ಯವಾದ
'ನಮ್ಮ ಕುಟುಂಬ ಮತ್ತು ಗೆಳೆಯರೆಲ್ಲರಿಗೂ ಧನ್ಯವಾದಗಳು, ನೀವು ಕೊಟ್ಟ ಬೆಂಬಲವೇ ನಮ್ಮನ್ನು ಧೈರ್ಯದಿಂದ ಇರುವಂತೆ ಮಾಡಿದೆ. ನಿಮ್ಮ ಹಾರೈಕೆಗಳಿಗೆ ನಾನು ಸದಾ ಚಿರರುಣಿ. ನಿಮ್ಮನ್ನೆಲ್ಲಾ ನಾನು ಅಪರಿಮಿತವಾಗಿ ಪ್ರೀತಿಸುತ್ತೇನೆ, ಎಲ್ಲರಿಗೂ ಕ್ರಿಸ್‌ಮಸ್ ಹಬ್ಬದ ಶುಭಾಶಯ' ಎಂದಿದ್ದಾರೆ.

ರೆಮೊ ಡಿಸೋಜಾ ಗೆ ಹೃದಯಾಘಾತ
ರೆಮೊ ಡಿಸೋಜಾ ಗೆ ಹೃದಯಾಘಾತವಾದಾಗ ತಮಗಾದ ಅನುಭವದ ಬಗ್ಗೆಯೂ ಬರೆದಿರುವ ಲೆಜಿಲ್ಲಾ, 'ನಿನಗೆ ನಾನು ಸೂಪರ್ ವುಮನ್, ಆದರೆ ಆ ದಿನ ನಾನು ಕಳೆದು ಹೋದ ಮಗುವಂತಾಗಿಬಿಟ್ಟಿದ್ದೆ. ಏನು ಮಾಡಬೇಕು ಎಂದು ನನಗೆ ತೋಚಲೇ ಇಲ್ಲ, ಬಹಳ ಭಯಪಟ್ಟಿದ್ದೆ' ಎಂದು ಆ ದಿನವನ್ನು ನೆನಪಿಸಿಕೊಂಡಿದ್ದಾರೆ ಲೆಜಿಲ್ಲಾ.

ನಿನ್ನ ಮಾತು ನಂಬಿ ನಾನು ಕಾಯುತ್ತಿದ್ದೆ: ಲೆಜಿಲ್ಲಾ
'ದಿಕ್ಕೇ ತೋಚದಂತಾಗಿದ್ದ ನನಗೆ ಒಂದೇ ಧೈರ್ಯ ತುಂಬಿದ್ದು, ನೀನೆ ಗೊಟ್ಟಿದ್ದ ಮಾತು, 'ನಾನು ಹೋರಾಡಿ ವಾಪಸ್ ಬರುತ್ತೇನೆ ಎಂದು ಹೇಳಿದ್ದ ನಿನ್ನ ಮಾತಿನ ನಂಬಿಕೆ ಇಟ್ಟು ನಾನು ಧೈರ್ಯವಾಗಿ ಎದುರುನೋಡುತ್ತಿದ್ದೆ' ಎಂದು ಬರೆದುಕೊಂಡಿದ್ದಾರೆ ಲೆಜಿಲ್ಲಾ.