For Quick Alerts
  ALLOW NOTIFICATIONS  
  For Daily Alerts

  ರಣಬೀರ್ ಮೇಲೆ ಸೇಡಿನ ಜ್ವಾಲೆ, ಸಲ್ಲು ಜೊತೆ ಸೇರಿಕೊಂಡ ಕ್ಯಾಟ್

  By ಸೋನು ಗೌಡ
  |

  ಕ್ಯೂಟ್ ಬಾಯ್ ರಣಬೀರ್ ಕಪೂರ್ ಜೊತೆ ತಮ್ಮ ಪ್ರೇಮ ಸಂಬಂಧ ಮುರಿದುಕೊಂಡಿರುವ ನಟಿ ಕತ್ರಿನಾ ಕೈಫ್ ಅವರು ಇದೀಗ ಹಳೇ ಗಂಡನ ಪಾದವೇ ಗತಿ ಅಂತ ಮತ್ತೆ ಭಾಯ್ ಜಾನ್ ಸಲ್ಮಾನ್ ಖಾನ್ ಕಡೆ ಮುಖ ಮಾಡಿದ್ದಾರೆ.

  ರಣಬೀರ್ ಜೊತೆ ಲವ್ ಬ್ರೇಕ್ ಅಪ್ ಮಾಡಿಕೊಂಡ ಮೇಲೆ ಕತ್ರಿನಾ ಅವರು ತುಂಬಾ ಬಿಂದಾಸ್ ಆಗಿ ಪಾರ್ಟಿ, 'ಪಿತೂರ್' ಸಿನಿಮಾದ ಪ್ರೊಮೋಷನ್ ಅಂತ ಹೊರಗಡೆ ಹೆಚ್ಚಾಗಿ ಕ್ಯಾಮರಾ ಕಣ್ಣಿಗೆ ಕಾಣಿಸುತ್ತಿದ್ದಾರೆ.[ಅಬ್ಬಾ! ಲವ್ ಬ್ರೇಕ್ ಅಪ್ ಆದ್ರೂ ಕ್ಯಾಟ್ ಹ್ಯಾಪಿ, ಹೇಗೆ]

  ಇದೀಗ ಹೊಸ ವಿಷ್ಯಾ ಮತ್ತು ರಣಬೀರ್ ಕಪೂರ್ ಗೆ ಶಾಕಿಂಗ್ ನ್ಯೂಸ್ ಏನಪ್ಪಾ ಅಂದ್ರೆ, ರಣಬೀರ್ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದಿಕ್ಕೆ, ಕತ್ರಿನಾ ಅವರು ಮುಯ್ಯಿಗೆ ಮುಯ್ಯಿ ಅಂತ ರಣಬೀರ್ ಮೇಲೆ ಸೇಡು ತೀರಿಸಲು ಹೊರಟಿದ್ದಾರೆ.

  ಅದು ಯಾರ ಮೂಲಕ, ಹೇಗೆ ಅಂತ ಗೊತ್ತಾ? ಹೌದು ಬಿಟೌನ್ ನ ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಜೋಡಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ರಣಬೀರ್ ಮೇಲೆ ಸೇಡು ತೀರಿಸಿಕೊಳ್ಳಲು ಕ್ಯಾಟ್ ಮುಂದಾಗಿದ್ದಾರೆ.[ಅಷ್ಟಕ್ಕೂ ಡಿಪ್ಪಿ ಮೇಲೆ ಕತ್ರಿನಾ ಕಿಡಿ ಕಾರುತ್ತಿರುವುದೇಕೆ?]

  ಮಾತ್ರವಲ್ಲದೇ, ಕತ್ರಿನಾ ಅವರು ಮೊನ್ನೆ ಬಿಗ್ ಬಾಸ್ ಫೈನಲ್ ಕಾರ್ಯಕ್ರಮಕ್ಕೆ ಆಗಮಿಸಿದ್ದಾಗ ಸಲ್ಮಾನ್ ಅವರು ಕೂಡ ಬಹಳ ಚೆನ್ನಾಗಿ ಟ್ರೀಟ್ ಮಾಡಿದ್ದನ್ನು ಪ್ರೇಕ್ಷಕರು ಕಣ್ಣಾರೆ ಕಂಡಿದ್ದಾರೆ. ಇನ್ನು ಒಳ್ಳೆ ಸ್ಕ್ರಿಪ್ಟ್ ಸಿಕ್ಕರೆ ಸಲ್ಮಾನ್ ಖಾನ್ ಅವರ ಜೊತೆ ಕೆಲಸ ಮಾಡಲು ರೆಡಿ ಇದ್ದೇನೆ ಎಂದು ಕ್ಯಾಟ್ ಅವರೇ ತಿಳಿಸಿದ್ದಾರೆ. ಮುಂದೆ ಓದಿ...

  ರಣಬೀರ್-ಕ್ಯಾಟ್

  ರಣಬೀರ್-ಕ್ಯಾಟ್

  ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಪ್ರಣಯ ಹಕ್ಕಿಗಳಾದ ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಅವರ ಬ್ರೇಕ್ ಅಪ್ ಆದಾಗ ಇಡೀ ಬಾಲಿವುಡ್ ಮಂದಿ ಮತ್ತು ಬಿಟೌನ್ ಒಮ್ಮೆಗೆ ಶಾಕ್ ಆಗಿತ್ತು. ಇವರಿಬ್ಬರ ಬ್ರೇಕ್ ಅಪ್ ಗೆ ಸರಿಯಾದ ಕಾರಣ ಯಾರಿಗೂ ಗೊತ್ತಿಲ್ಲ. ಎಲ್ಲಾ ಕಡೆ ಅಂತೆ-ಕಂತೆಗಳ ಸುದ್ದಿ ಹರಿದಾಡುತ್ತಿದೆ.

  ಬ್ರೇಕ್ ಅಪ್

  ಬ್ರೇಕ್ ಅಪ್

  ನಟಿ ಕತ್ರಿನಾ ಕೈಫ್ ಅವರು ತಮ್ಮ ಮಗ ರಣಬೀರ್ ಕಪೂರ್ ಗೆ ಸರಿಯಾದ ಜೋಡಿ ಅಲ್ಲ, ಜೊತೆಗೆ ಕತ್ರಿನಾ ಅಂದರೆ ನಮಗೂ ಇಷ್ಟ ಇಲ್ಲ ಎಂದು ಎಂದು ರಣಬೀರ್ ಕಪೂರ್ ಅವರ ತಂದೆ-ತಾಯಿ ರಿಷಿ ಕಪೂರ್ ಮತ್ತು ನೀತು ಕಪೂರ್ ಅವರು ತಿಳಿಸಿದ್ದಾರೆ.

  ರಣಬೀರ್ ಮತ್ತು ದೀಪಿಕಾ

  ರಣಬೀರ್ ಮತ್ತು ದೀಪಿಕಾ

  ಇನ್ನು ನಟಿ ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ ಅವರ ಬ್ರೇಕ್ ಅಪ್ ಗೆ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಕಾರಣ ಎಂದು ಬಿಟೌನ್ ನಲ್ಲಿ ಕೆಲವರು ಮಾತಾಡಿಕೊಳ್ಳುತ್ತಿದ್ದಾರೆ. (ಚಿತ್ರದಲ್ಲಿ ಕತ್ರಿನಾ ಮತ್ತು ರಣಬೀರ್ ಅವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಒಂದಾಗಿ ಕಾಣಿಸಿಕೊಂಡಿದ್ದು ಹೀಗೆ.)

  ಬ್ರೇಕ್ ಅಪ್ ಬಗ್ಗೆ ಗಾಸಿಪ್

  ಬ್ರೇಕ್ ಅಪ್ ಬಗ್ಗೆ ಗಾಸಿಪ್

  ಇನ್ನೊಂದು ಮೂಲಗಳು ಹೇಳುವ ಪ್ರಕಾರ ರಣಬೀರ್ ಮತ್ತು ಕತ್ರಿನಾ ಅವರ ಪ್ರೇಮ ಪುರಾಣ ಮುರಿದು ಬೀಳಲು ಕಾರಣ ಮುದ್ದು ಬೆಡಗಿ ಅಲಿಯಾ ಭಟ್ ಅಂತೆ, ಅಂತ ಅಂತೆ-ಕಂತೆಗಳ ಪುರಾಣ ಇಡೀ ಬಿಟೌನ್ ನಲ್ಲಿ ಹರಿದಾಡುತ್ತಿದೆ.

  ಕ್ಯಾಟ್-ಸಲ್ಮಾನ್

  ಕ್ಯಾಟ್-ಸಲ್ಮಾನ್

  ಅಂದಹಾಗೆ ರಣಬೀರ್ ಕಪೂರ್ ಅವರ ಜೊತೆ ಬ್ರೇಕ್ ಅಪ್ ಮಾಡಿಕೊಳ್ಳುವ ಮುನ್ನ ಈ ವಿಷಯದ ಬಗ್ಗೆ ಚರ್ಚೆ ಮಾಡಲು ಕತ್ರಿನಾ ಅವರು ಬಾಲಿವುಡ್ ಭಾಯ್ ಜಾನ್, ಸಲ್ಮಾನ್ ಅವರನ್ನು ಭೇಟಿಯಾಗಿದ್ದರಂತೆ.

  'ಎಕ್ ಥಾ ಟೈಗರ್' ನಲ್ಲಿ ಒಂದಾಗಿದ್ದ ಸಲ್ಲು-ಕ್ಯಾಟ್

  'ಎಕ್ ಥಾ ಟೈಗರ್' ನಲ್ಲಿ ಒಂದಾಗಿದ್ದ ಸಲ್ಲು-ಕ್ಯಾಟ್

  ನಿರ್ದೇಶಕ ಕಬೀರ್ ಖಾನ್ ಅವರು ನಿರ್ದೇಶನ ಮಾಡಿದ್ದ 'ಎಕ್ ಥಾ ಟೈಗರ್' ಸಿನಿಮಾದಲ್ಲಿ ನಾನು ಸಲ್ಮಾನ್ ಖಾನ್ ಅವರು ಒಂದಾಗಿದ್ವಿ. ಆ ಸಿನಿಮಾದಲ್ಲಿ ನಮ್ಮಿಬ್ಬರ ಕೆಮಿಸ್ಟ್ರಿ ಕೂಡ ತುಂಬಾ ಚೆನ್ನಾಗಿ ವರ್ಕೌಟ್ ಆಗಿತ್ತು. ಅದನ್ನು ಪ್ರೇಕ್ಷಕರು ಕೂಡ ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ ಎಂದು ಕತ್ರಿನಾ ನುಡಿದಿದ್ದಾರೆ.

  English summary
  When Katrina Kaif promoted her upcoming film Fitoor on Salman Khan's Bigg Boss 9, the whole nation went crazy after seeing their amazing chemistry. Katrina recently revealed that she is ready to work with Salman if the script is good.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X