For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಾವಿನ ನಂತರ ರಿಯಾ ಚಕ್ರವರ್ತಿ ಮೊದಲ ಸಿನಿಮಾ ತೆರೆಗೆ

  |

  ಸುಶಾಂತ್ ಸಿಂಗ್ ಸಾವಿನ ಬಳಿಕ ನೆಗೆಟಿವ್ ವಿಚಾರಗಳಿಂದಲೇ ಸುದ್ದಿಯಾಗಿದ್ದ ನಟಿ ರಿಯಾ ಚಕ್ರವರ್ತಿ ಈಗ ದೊಡ್ಡ ಪರದೆ ಮೇಲೆ ಬರ್ತಿದ್ದಾರೆ. ಸುಮಾರು ಮೂರು ವರ್ಷದ ಬಳಿಕ ಬಿಗ್‌ ಸ್ಕ್ರೀನ್ ಮೇಲೆ ಸುಶಾಂತ್ ಪ್ರೇಯಸಿ ಕಾಣಿಸಿಕೊಳ್ಳುತ್ತಿದ್ದಾರೆ. ರಿಯಾ ಚಕ್ರವರ್ತಿ ಅಭಿನಯದಲ್ಲಿ ತಯಾರಾಗಿರುವ 'ಚೆಹ್ರೆ' ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆ.

  ಅಮಿತಾಭ್ ಬಚ್ಚನ್, ಇಮ್ರಾನ್ ಹಶ್ಮಿ ಹಾಗೂ ರಿಯಾ ಚಕ್ರವರ್ತಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಚೆಹ್ರೆ' ಸಿನಿಮಾ ಆಗಸ್ಟ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂಬ ವಿಚಾರ ಅಧಿಕೃತವಾಗಿದೆ. ಈ ಕುರಿತು ಬಾಲಿವುಡ್ ಖ್ಯಾತ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಜೊತೆಗೆ ರಿಯಾ ಚಕ್ರವರ್ತಿ ಸಹ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಚೆಹ್ರೆ ಸಿನಿಮಾ ರಿಲೀಸ್ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.

  ಸುಶಾಂತ್ ಸಿಂಗ್ ಕೇಸ್: ಸ್ನೇಹಿತ ಸಿದ್ಧಾರ್ಥ್ ಜಾಮೀನು ಅರ್ಜಿ ತಿರಸ್ಕಾರಸುಶಾಂತ್ ಸಿಂಗ್ ಕೇಸ್: ಸ್ನೇಹಿತ ಸಿದ್ಧಾರ್ಥ್ ಜಾಮೀನು ಅರ್ಜಿ ತಿರಸ್ಕಾರ

  ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ಏಪ್ರಿಲ್ ತಿಂಗಳಲ್ಲೇ ಚೆಹ್ರೆ ಸಿನಿಮಾ ತೆರೆಗೆ ಬರಬೇಕಿತ್ತು. ಆದ್ರೆ, ಕೊರೊನಾ ಸಾಂಕ್ರಾಮಿಕ ರೋಗದ ಭೀತಿಯಿಂದ ಸಾಧ್ಯವಾಗಲಿಲ್ಲ. ಇದೀಗ, ಲಾಕ್‌ಡೌನ್ ತೆರವುಗೊಂಡಿದ್ದು, ಪ್ರೇಕ್ಷಕರೆದುರು ಬರಲು ದಿನಾಂಕ ನಿಗದಿ ಮಾಡಿದೆ.

  ರೂಮಿ ಜಾಫರಿ ನಿರ್ದೇಶನ ಮಾಡುತ್ತಿರುವ ಚೆಹ್ರೆ ಸಿನಿಮಾ ಮಿಸ್ಟರಿ ಥ್ರಿಲ್ಲರ್ ಕಥೆ ಹೊಂದಿದೆ. ಅಮಿತಾಬ್ ಬಚ್ಚನ್ ಮತ್ತು ಇಮ್ರಾನ್ ಹಶ್ಮಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಿಗ್ ಬಿ ವಕೀಲರ ಪಾತ್ರವನ್ನು ನಿರ್ವಹಿಸುತ್ತಿದ್ದರೆ, ಹಶ್ಮಿ ಈ ಚಿತ್ರದಲ್ಲಿ ಉದ್ಯಮಿ. ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಮತ್ತು ಸರಸ್ವತಿ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಕಪೂರ್, ಕ್ರಿಸ್ಟಲ್ ಡಿಸೋಜ, ಧೃತಿಮನ್ ಚಟರ್ಜಿ, ರಘುಬೀರ್ ಯಾದವ್, ಸಿದ್ಧಾಂತ್ ಕಪೂರ್ ಮತ್ತು ರಿಯಾ ಚಕ್ರವರ್ತಿ ನಟಿಸಿದ್ದಾರೆ.

  ಚಿತ್ರೀಕರಣಕ್ಕೆ ಹಿಂತಿರುಗಿದ ಬಿಗ್-ಬಿ ಅಮಿತಾಭ್ ಬಚ್ಚನ್ಚಿತ್ರೀಕರಣಕ್ಕೆ ಹಿಂತಿರುಗಿದ ಬಿಗ್-ಬಿ ಅಮಿತಾಭ್ ಬಚ್ಚನ್

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ರಿಯಾ ಚಕ್ರವರ್ತಿ ಕಾಣಿಸಿಕೊಂಡಿರುವ ಮೊದಲ ಸಿನಿಮಾ ಇದಾಗಿದೆ ಎನ್ನುವುದು ವಿಶೇಷ. ಕೊನೆಯದಾಗಿ 2018ರಲ್ಲಿ 'ಜಲೇಬಿ' ಸಿನಿಮಾದಲ್ಲಿ ರಿಯಾ ನಟಿಸಿದ್ದರು. ಅದಾದ ಮೇಲೆ ಚೆಹ್ರೆ ಸಿನಿಮಾ ಆರಂಭಗೊಂಡಿತ್ತು. ಈ ಚಿತ್ರದಲ್ಲಿ ನಟಿಸುತ್ತಿರುವಾಗಲೇ ಸುಶಾಂತ್ ಸಿಂಗ್ ಸಾವನ್ನಪ್ಪಿದರು. ಈ ಕೇಸ್‌ನಲ್ಲಿ ರಿಯಾ ಚಕ್ರವರ್ತಿ ಹೆಸರು ತಳುಕುಹಾಕಿಕೊಂಡಿತು. ಡ್ರಗ್ಸ್ ಆರೋಪದಲ್ಲಿ ಎನ್‌ಸಿಬಿ ಪೊಲೀಸರು ನಟಿಯನ್ನು ಬಂಧಿಸಿದರು. ಸುಮಾರು ಒಂದು ತಿಂಗಳು ಜೈಲಿನಲ್ಲಿರಬೇಕಾಯಿತು. ನಂತರ ಜಾಮೀನು ಪಡೆದು ರಿಯಾ ಬಿಡುಗಡೆಯಾಗಿದ್ದರು.

  Rhea Chakraborty and Amitabh Bachchan starring Chehre Releasing on August 27

  ಜೈಲಿನಿಂದ ವಾಪಸ್ ಆದ ಬಳಿಕ ರಿಯಾ ಚಕ್ರವರ್ತಿ ತಿಂಗಳುಗಳ ಕಾಲ ಮನೆಯಲ್ಲಿ ಕೂತಿದ್ದರು. ನಂತರ ನಿಧಾನವಾಗಿ ಈ ಘಟನೆಗಳಿಂದ ಹೊರಬಂದು ಇತರೆ ಕೆಲಸಗಳನ್ನು ತೊಡಗಿಕೊಂಡರು. ರಿಯಾ ಚಕ್ರವರ್ತಿಯನ್ನು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿಸುವ ಉದ್ದೇಶದಿಂದ ಹಲವು ನಿರ್ದೇಶಕರು ಪ್ರಯತ್ನ ಪಡುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿಲ್ಲ.

  ಜೂನ್ 14, 2020ರಲ್ಲಿ ಮುಂಬೈನ ಫ್ಲ್ಯಾಟ್‌ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸುಶಾಂತ್ ಸಿಂಗ್ ಶವ ಪತ್ತೆಯಾಗಿತ್ತು. ಅನುಮಾನಾಸ್ಪದ ಸಾವು ಎಂಬ ಕಾರಣಕ್ಕೆ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ಸ್ನೇಹಿತರು, ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದರು. ಬಳಿಕ, ಈ ಕೇಸ್‌ ಸಿಬಿಐಗೆ ವರ್ಗಾವಣೆ ಆಯಿತು.

  ಸುಶಾಂತ್ ಸಿಂಗ್ ಸಾವು ಬೆನ್ನತ್ತಿ ಹೋದ ಪೊಲೀಸರಿಗೆ ಡ್ರಗ್ಸ್ ಜಾಲದ ಸುಳಿವು ಸಿಕ್ಕಿತು. ಈ ಹಿನ್ನೆಲೆ ಎನ್‌ಸಿಬಿ ಪೊಲೀಸರು ಬಾಲಿವುಡ್‌ ಮಂದಿಯನ್ನು ಟಾರ್ಗೆಟ್ ಮಾಡಿದರು. ಡ್ರಗ್ಸ್ ಅಯಾಮದ ತನಿಖೆಗೆ ಸ್ಟಾರ್ ನಟ-ನಟಿಯರನ್ನು ವಿಚಾರಣೆಗೆ ಒಳಪಡಿಸಿದರು. ರಿಯಾ ಚಕ್ರವರ್ತಿ ಸೇರಿದಂತೆ ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್, ದೀಪಿಕಾ ಪಡುಕೋಣೆ, ರಿಯಾ ಚಕ್ರವರ್ತಿ, ಅರ್ಜುನ್ ರಾಂಪಲ್ ಸೇರಿದಂತೆ ಅನೇಕರನ್ನು ವಿಚಾರಣೆ ಮಾಡಲಾಯಿತು.

  English summary
  Bollywood actor Amitabh Bachchan, Rhea Chakraborty and Emraan Hashmi starrer Chehre movie will be released on August 27.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X