For Quick Alerts
  ALLOW NOTIFICATIONS  
  For Daily Alerts

  ರಿಯಾ ಚಕ್ರವರ್ತಿ ವಿರುದ್ಧ ಡ್ರಗ್ ಸೇವನೆಯ ಆರೋಪ: ರಕ್ತ ಪರೀಕ್ಷೆಗೆ ಸಿದ್ಧ ಎಂದ ನಟಿ

  |

  ಸುಶಾಂತ್ ಸಿಂಗ್ ಸಾವಿನ ಪ್ರಕರಣ ಹಲವು ತಿರುವುಗಳನ್ನು ತೆಗೆದುಕೊಳ್ಳುತ್ತಿದೆ. ಇದೀಗ ಸುಶಾಂತ್ ಸಾವಿಗೆ ಡ್ರಗ್ ಮಾಫಿಯಾದ ಸಂಪರ್ಕ ಸಹ ಕಾರಣವಿರಬಹುದು ಎನ್ನಲಾಗುತ್ತಿದೆ.

  Ayogya ಸಿನಿಮಾದಲ್ಲಿ Satish Neenasam ಕೆಂಡದ ಮೇಲೆ ಓಡಿದ್ದು ಹೇಗೆ ನೋಡಿ|Ayogya song Making| Oneindia Kannada

  ಮಾಜಿ ಕೇಂದ್ರ ಸಚಿವ ಸುಬ್ರಹ್ಮಣಿಯನ್ ಸ್ವಾಮಿ ಈ ಅನುಮಾನವೊಂದನ್ನು ಹೊರಹಾಕಿದ್ದು, 'ದುಬೈನ ಮಾದಕ ವಸ್ತು ಮಾರಾಟಗಾರ ಆಯುಷ್ ಖಾನ್ ಅನ್ನು ಸುಶಾಂತ್ ಸಿಂಗ್ ಭೇಟಿಯಾದ ದಿನವೇ ಸುಶಾಂತ್ ಸಾವಾಗಿದೆ. ಇದಕ್ಕೆ ಏನು ಕಾರಣ?' ಎಂದು ಪ್ರಶ್ನೆ ಮಾಡಿದ್ದಾರೆ.

  ಸುಶಾಂತ್ ಸಿಂಗ್ ಪ್ರೇಯಸಿ ರಿಯಾಗೆ ಮಾದಕ ವಸ್ತು ಮಾಫಿಯಾ ಜೊತೆಗೆ ಸಂಪರ್ಕವಿತ್ತು ಎನ್ನಲಾಗಿದೆ. ರಿಯಾ 'ಮಾದಕ ವಸ್ತು ಸೇವಿಸುತ್ತಿದ್ದರು ಹಾಗೂ ವ್ಯವಹಾರ ಮಾಡುತ್ತಿದ್ದರು' ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಈ ಅನುಮಾನ ಹೆಚ್ಚಾಗಲು ಕಾರಣ ರಿಯಾ ವಾಟ್ಸಪ್ ಚಾಟ್. ಜಾರಿ ನಿರ್ದೇಶನಾಲಯ ರಿಯಾ ವಾಟ್ಸಪ್ ಚಾಟ್‌ ಅನ್ನು ಪಡೆದು ತನಿಖೆ ನಡೆಸಿದೆ. ಸಿಬಿಐ ಹಾಗೂ ಮಾದಕ ವಸ್ತು ನಿಯಂತ್ರಣ ಇಲಾಖೆ ಜೊತೆಗೂ ಇದನ್ನು ಹಂಚಿಕೊಂಡಿದೆ.

  ಕೇವಲ ಅರ್ಧ ಸಂಭಾವನೆ ಪಡೆದು 'ದಿಲ್ ಬೆಚರಾ' ಚಿತ್ರ ಮಾಡಿದ್ದರು ಸುಶಾಂತ್ ಸಿಂಗ್, ಏಕೆ?

  ವಾಟ್ಸಪ್ ಚಾಟ್ ಗಳು ನಟಿ ಮಾದಕ ದ್ರವ್ಯ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಅಂಶವನ್ನು ಎತ್ತಿತೋರಿಸುತ್ತಿದೆ ಎಂದು ಹೇಳಲಾಗುತ್ತಿದೆ. ಡ್ರಗ್ಸ್ ವ್ಯಾಪಾರಿ ಗೌರವ್ ಎನ್ನುವವರ ಜೊತೆ ರಿಯಾ ಮಾತನಾಡಿರುವುದು ತಿಳಿದುಬಂದಿದೆ. ಹಾರ್ಡ್ ಡ್ರಗ್ಸ್ ಮತ್ತು ಎಂಡಿಎಂಎ ಬಗ್ಗೆ ಗೌರವ್ ಜೊತೆ ರಿಯಾ ಮಾತನಾಡಿದ್ದಾರೆ. ಈ ಡ್ರಗ್ಸ್ ಅನ್ನು ಸುಶಾಂತ್ ಸಿಂಗ್ ಗೆ ನೀಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

  ಈ ಆರೋಪಗಳ ಬಗ್ಗೆ ರಿಯಾ ಪರ ವಕೀಲ ಸತೀಶ್ ಮನೆಶಿಂದೆ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ರಿಯಾ ಚಕ್ರವರ್ತಿ ಯಾವತ್ತೂ ಡ್ರಗ್ಸ್ ಸೇವಿಸಿಲ್ಲ ಎಂದಿದ್ದಾರೆ. ಅಷ್ಟೆಯಲ್ಲ ಆಕೆ ರಕ್ತ ಪರೀಕ್ಷೆಗೆ ಸಿದ್ಧ ಎಂದು ವಕೀಲರು ಹೇಳಿದ್ದಾರೆ.

  ಈ ಪ್ರಕರಣದಲ್ಲಿ ಸಿಬಿಐ ತನ್ನ ತನಿಖೆಯನ್ನು ಮುಂದುವರೆಸಿದೆ. ಈಗಾಗಲೆ ಸಾಕಷ್ಟು ಮಂದಿಯ ವಿಚಾರಣೆಯನ್ನು ನಡೆಸಿದ್ದು ಸುಶಾಂತ್ ಸ್ನೇಹಿತರು, ಮನೆಗೆಲಸದವರು ಸೇರಿದಂತೆ ಅನೇಕರನ್ನು ಪ್ರಶ್ನಿಸಿದ್ದಾರೆ. ರಿಯಾ ಚಕ್ರವರ್ತಿ ಮತ್ತು ಸ್ನೇಹಿತ ಸಂದೀಪ್ ಅವರ ವಿಚಾರಣೆ ನಡೆಸಬೇಕಿದೆ.

  English summary
  Rhea Chakraborty Lawyer Satish Maneshinde responded to allegations of Drug angle. He says Rhea is ready to take blood test.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X