For Quick Alerts
  ALLOW NOTIFICATIONS  
  For Daily Alerts

  ರಾತ್ರೋರಾತ್ರಿ ಗಂಟುಮೂಟೆ ಕಟ್ಟಿಕೊಂಡು ಪರಾರಿಯಾದ ರಿಯಾ!

  |

  ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸುಶಾಂತ್ ಅವರನ್ನು ಬಲ್ಲವರು ಮಾಧ್ಯಮಗಳ ಮುಂದೆ ನೀಡುತ್ತಿರುವ ಹೇಳಿಕೆಗಳು ಇದು ಅತ್ಮಹತ್ಯೆಯಲ್ಲ, ಕೊಲೆ ಎಂಬ ಅನುಮಾನಗಳನ್ನು ದಟ್ಟವಾಗಿಸುತ್ತಿದೆ. ಇದಕ್ಕೆ ಪೂರಕವಾಗಿ ಮುಂಬೈ ಪೊಲೀಸರ ನಡೆಯೂ ಮತ್ತಷ್ಟು ಪುಷ್ಟಿ ನೀಡುತ್ತಿದೆ. ಮುಂಬೈ ಪೊಲೀಸರು ತಮಗೆ ಯಾವುದೇ ಸಹಕಾರ ನೀಡುತ್ತಿಲ್ಲ ಎಂದು ಬಿಹಾರ ಪೊಲೀಸರು ಆರೋಪಿಸಿದ್ದಾರೆ.

  ಇತ್ತ ರಿಯಾ ಚಕ್ರವರ್ತಿ ಎಲ್ಲಿದ್ದಾರೆ ಎನ್ನುವುದು ಯಾರಿಗೂ ತಿಳಿದಿಲ್ಲ. ಬಿಹಾರ ಪೊಲೀಸರು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಮುಂಬೈಗೆ ಬರುತ್ತಿದ್ದಂತೆಯೇ ರಿಯಾ ನಾಪತ್ತೆಯಾಗಿದ್ದಾರೆ. ಅಜ್ಞಾತ ಸ್ಥಳದಿಂದ ವಿಡಿಯೋವೊಂದನ್ನು ಮಾಡಿದ್ದ ಅವರನ್ನು ರಕ್ಷಿಸಲು ಮುಂಬೈ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ರಿಯಾ ಮತ್ತು ಅವರ ಕುಟುಂಬದವರು ರಾತ್ರೋರಾತ್ರಿ ಮನೆ ಖಾಲಿಮಾಡಿದ್ದರು ಎಂದು ಕಟ್ಟಡದ ಮಾಲೀಕ ತಿಳಿಸಿದ್ದಾರೆ. ಮುಂದೆ ಓದಿ..

  ಸುಶಾಂತ್‌ಗೆ ಬೈಪೊಲಾರ್ ಡಿಸಾರ್ಡರ್ ಇತ್ತು, ರಿಯಾ ಅಮ್ಮನಂತೆ ನೋಡಿಕೊಳ್ಳುತ್ತಿದ್ದರು ಎಂದ ವೈದ್ಯೆಸುಶಾಂತ್‌ಗೆ ಬೈಪೊಲಾರ್ ಡಿಸಾರ್ಡರ್ ಇತ್ತು, ರಿಯಾ ಅಮ್ಮನಂತೆ ನೋಡಿಕೊಳ್ಳುತ್ತಿದ್ದರು ಎಂದ ವೈದ್ಯೆ

  ಮಧ್ಯರಾತ್ರಿ ಮನೆ ಖಾಲಿ

  ಮಧ್ಯರಾತ್ರಿ ಮನೆ ಖಾಲಿ

  ಸುಶಾಂತ್ ಸಾಯುವ ಕೆಲವು ದಿನಗಳ ಮುನ್ನ ಅವರ ಮನೆಯಿಂದ ಹೊರಬಂದಿದ್ದ ರಿಯಾ, ಮುಂಬೈನಲ್ಲಿ ತಮ್ಮ ಪೋಷಕರು ನೆಲೆಸಿರುವ ಮನೆ ಸೇರಿಕೊಂಡಿದ್ದರು. ಬಿಹಾರ ಪೊಲೀಸರು ಮುಂಬೈ ಬರುತ್ತಿರುವುದನ್ನು ತಿಳಿದಿದ್ದ ಅವರು ಪೋಷಕರು ಹಾಗೂ ಸಹೋದರನೊಂದಿಗೆ ಮಧ್ಯರಾತ್ರಿಯೇ ಮನೆ ತೊರೆದಿದ್ದಾರೆ.

  ದೊಡ್ಡ ದೊಡ್ಡ ಸೂಟ್ ಕೇಸ್

  ದೊಡ್ಡ ದೊಡ್ಡ ಸೂಟ್ ಕೇಸ್

  ನೀಲಿ ಬಣ್ಣದ ಕಾರ್‌ನಲ್ಲಿ ರಿಯಾ ಹಾಗೂ ಕುಟುಂಬ ಮನೆಯಿಂದ ತೆರಳಿದೆ. ಹೋಗುವಾಗ ದೊಡ್ಡ ದೊಡ್ಡ ಸೂಟ್‌ ಕೇಸ್‌ಗಳನ್ನು ತಮ್ಮೊಂದಿಗೆ ಕೊಂಡೊಯ್ದಿದ್ದಾರೆ. ಬಹಳ ಕಾಲದಿಂದ ಸುಶಾಂತ್ ಈ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

  ಯಾರು ಈ ರಿಯಾ ಚಕ್ರವರ್ತಿ? ಬೆಂಗಳೂರಿಗೆ ಇರುವ ನಂಟು ಏನು ಗೊತ್ತೇ?ಯಾರು ಈ ರಿಯಾ ಚಕ್ರವರ್ತಿ? ಬೆಂಗಳೂರಿಗೆ ಇರುವ ನಂಟು ಏನು ಗೊತ್ತೇ?

  ಲುಕ್ ಔಟ್ ನೋಟಿಸ್ ಸಾಧ್ಯತೆ

  ಲುಕ್ ಔಟ್ ನೋಟಿಸ್ ಸಾಧ್ಯತೆ

  ರಿಯಾ ಚಕ್ರವರ್ತಿ ಪತ್ತೆಯಾಗದೆ ಹೋದರೆ ಅವರ ವಿರುದ್ಧ ಬಿಹಾರ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸುವ ಸಾಧ್ಯತೆ ಇದೆ. ರಿಯಾ ಅವರನ್ನು ಪತ್ತೆ ಮಾಡುವುದು ಬಹಳ ಕಷ್ಟಕರವಾಗಿದೆ. ಯಾವುದೇ ಮಾಹಿತಿ ಇಲ್ಲದೆ ಅವರು ತಲೆಮರೆಸಿಕೊಂಡಿದ್ದಾರೆ. ಅವರು ನಮ್ಮ ಪೊಲೀಸ್ ತಂಡದ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಬಿಹಾರದ ಡಿಜಿಪಿ ಗುಪ್ತೇಶ್ವರ ಪಾಂಡೆ ತಿಳಿಸಿದ್ದಾರೆ.

  ಇ.ಡಿ. ಪ್ರಕರಣ

  ಇ.ಡಿ. ಪ್ರಕರಣ

  ಸುಶಾಂತ್ ಸಿಂಗ್ ಅವರ ಬ್ಯಾಂಕ್ ಖಾತೆಗಳಲ್ಲಿದ್ದ ಹಣವನ್ನು ರಿಯಾ ಚಕ್ರವರ್ತಿ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಅವರ ಕ್ರೆಡಿಟ್ ಕಾರ್ಡ್ ಬಳಸಿ ಬೇಕಾದಂತೆ ಹಣ ಬಳಸಿಕೊಂಡಿದ್ದಾರೆ. ಈ ಸಂಬಂಧ ಶುಕ್ರವಾರ ರಿಯಾ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿತ್ತು. ಈ ವಾರದಲ್ಲಿ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಇ.ಡಿ ಸಮನ್ಸ್ ಜಾರಿ ಮಾಡುವ ಸಾಧ್ಯತೆ ಇದೆ.

  ಸುಶಾಂತ್ ವಿರುದ್ಧ ಮಾಟ ಮಂತ್ರ

  ಸುಶಾಂತ್ ವಿರುದ್ಧ ಮಾಟ ಮಂತ್ರ

  ಸುಶಾಂತ್ ಅವರಿಗೆ ರಿಯಾ ಮಾಟ ಮಾಡಿಸಿದ್ದಾರೆ ಎಂದೂ ಕುಟುಂಬದವರು ಆರೋಪಿಸಿದ್ದಾರೆ. ಸುಶಾಂತ್ ತಮ್ಮ ವಾಸಸ್ಥಾನವನ್ನು ಬದಲಿಸಿದ್ದಾಗ ಆ ಮನೆಯಲ್ಲಿ ಯಾವುದೇ ಪೂಜಾ ಕಾರ್ಯ ನಡೆಸಿರಲಿಲ್ಲ. ಆದರೆ ಪೂಜೆ ಮಾಡುವ ಹೆಸರಿನಲ್ಲಿ ಸುಶಾಂತ್ ಖಾತೆಯಿಂದ ಎರಡು ತಿಂಗಳಿಂದ ಲಕ್ಷಗಟ್ಟಲೆ ಹಣವನ್ನು ಡ್ರಾ ಮಾಡಲಾಗಿದೆ. ಇದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

  ದಿಶಾ ಸಾವಿಗೂ ಸುಶಾಂತ್ ಸಾವಿಗೂ ಸಂಬಂಧವಿದೆಯೇ?: ಕರಾವಳಿ ಯುವತಿಯ ಅಮ್ಮ ಹೇಳಿದ್ದೇನು?ದಿಶಾ ಸಾವಿಗೂ ಸುಶಾಂತ್ ಸಾವಿಗೂ ಸಂಬಂಧವಿದೆಯೇ?: ಕರಾವಳಿ ಯುವತಿಯ ಅಮ್ಮ ಹೇಳಿದ್ದೇನು?

  English summary
  Rhea Chakraborty and her family left Mumbai's apartment in midnight with big suitcases, building supervisor said.
  Monday, August 3, 2020, 9:40
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X