For Quick Alerts
  ALLOW NOTIFICATIONS  
  For Daily Alerts

  2 ಬ್ಯಾಗ್ ಗಾಂಜಾಗೆ 17 ಸಾವಿರ: ರಿಯಾ ಚಕ್ರವರ್ತಿ ವಾಟ್ಸಪ್ ಸಂದೇಶ ಬಹಿರಂಗ

  |

  ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಹೊರಬರುತ್ತಿವೆ. ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ ಬಲವಾದ ಅನುಮಾನ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ರಿಯಾ ಡ್ರಗ್ಸ್ ಜಾಲದಲ್ಲೂ ತೊಡಗಿಕೊಂಡಿದ್ದರು ಎನ್ನುವ ಸುಳಿವು ಸಿಕ್ಕಿದೆ.

  Ayogya ಸಿನಿಮಾದಲ್ಲಿ Satish Neenasam ಕೆಂಡದ ಮೇಲೆ ಓಡಿದ್ದು ಹೇಗೆ ನೋಡಿ|Ayogya song Making| Oneindia Kannada

  ಸುಶಾಂತ್ ಸಿಂಗ್ ಖಾತೆಯಿಂದ ಆಕ್ರಮವಾಗಿ ಹಣ ವರ್ಗಾವಣೆಯಾಗಿದೆ ಎನ್ನುವ ಆರೋಪದ ಮೇರೆಗೆ ರಿಯಾ ಚಕ್ರವರ್ತಿ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ರಿಯಾ ಮೊಬೈಲ್ ಸಂದೇಶ ನೋಡಿದ ಅಧಿಕಾರಿಗಳಿಗೆ ಶಾಕಿಂಗ್ ಮಾಹಿತಿ ಸಿಕ್ಕಿದೆ. ಡ್ರಗ್ಸ್ ಡೀಲರ್ ಗಳ ಜೊತೆ ರಿಯಾ ನಡೆಸಿರುವ ಸಂಭಾಷಣೆ ಬಹಿರಂಗವಾಗಿದೆ. ಈ ಮಾಹಿತಿಯನ್ನು 'ಮಾದಕ ವಸ್ತು ನಿಯಂತ್ರಣ ಇಲಾಖೆ'ಗೆ ವರ್ಗಾವಣೆ ಮಾಡಲಾಗಿದೆ. ಮುಂದೆ ಓದಿ..

  ಸುಶಾಂತ್‌ಗೆ ಚಹಾದಲ್ಲಿ 4 ಹನಿ ಡ್ರಗ್ ಹಾಕಿ ಕೊಡುತ್ತಿದ್ದ ರಿಯಾ: ವಾಟ್ಸಪ್ ಚಾಟ್ ಬಹಿರಂಗ

   ಸುಶಾಂತ್ ಮನೆಯ ವ್ಯವಸ್ಥಾಪಕನ ಜೊತೆ ರಿಯಾ ಚಾಟ್

  ಸುಶಾಂತ್ ಮನೆಯ ವ್ಯವಸ್ಥಾಪಕನ ಜೊತೆ ರಿಯಾ ಚಾಟ್

  ಡ್ರಗ್ಸ್ ವಿಚಾರವಾಗಿ ರಿಯಾ ಅನೇಕರ ಜೊತೆ ಚಾಟ್ ಮಾಡಿದ್ದಾರೆ. ಇದೀಗ ರಿಯಾ ಅವರ ವಾಟ್ಸಪ್ ಚಾಟ್ ನಿಂದ ಮತ್ತೊಂದು ಮಾಹಿತಿ ಬಹಿರಂಗವಾಗಿದೆ. ರಿಯಾ ಮತ್ತು ಸುಶಾಂತ್ ಸಿಂಗ್ ಮನೆಯ ವ್ಯವಸ್ಥಾಪಕ ಸ್ಯಾಮ್ಯುಯೆಲ್ ಮಿರಾಂಡಾ ನಡುವಿನ ವಾಟ್ಸಪ್ ಚಾಟ್ ಎಲ್ಲರಿಗೂ ಶಾಕ್ ನೀಡಿದೆ.

   2 ಬ್ಯಾಗ್ ಗಾಂಜಾಗೆ 17 ಸಾವಿರ?

  2 ಬ್ಯಾಗ್ ಗಾಂಜಾಗೆ 17 ಸಾವಿರ?

  ಖಾಸಗಿ ವಾಹಿಯೊಂದು ವರದಿ ಮಾಡಿರುವ ಪ್ರಕಾರ ರಿಯಾ ಚಕ್ರವರ್ತಿ, ಸುಶಾಂತ್ ಸಿಂಗ್ ಸೇವಕ ದೀಪೇಶ್ ಸಾವಂತ್ ಗೆ ಎರಡು ಬ್ಯಾಗ್ ಗಾಂಜಾಗೆ 17 ಸಾವಿರ ನೀಡಿರುವ ಮಾಹಿತಿ ವಾಟ್ಸಪ್ ಚಾಟ್ ನಿಂದ ಬಹಿರಂಗವಾಗಿದೆ. ಸುಶಾಂತ್ ಸಿಂಗ್ ಮನೆಯ ವ್ಯವಸ್ಥಾಪಕ ಸ್ಯಾಮ್ಯುಯೆಲ್ ಮಿರಾಂಡಾ, ರಿಯಾ ಚಕ್ರವರ್ತಿಗೆ ಡ್ರಗ್ಸ್ ಕಳುಹಿಸಿಕೊಡವಂತೆ ಕೇಳಿಕೊಂಡಿದ್ದಾರೆ. ಈ ಚಾಟ್ ನಲ್ಲಿ 17 ಸಾವಿರ ನೀಡಿರುವುದು ತಿಳಿದಿದೆ.

   NCB ಅಧಿಕಾರಿಗಳ ತನಿಖೆ

  NCB ಅಧಿಕಾರಿಗಳ ತನಿಖೆ

  ಸುಶಾಂತ್ ಸಾವಿನ ಪ್ರಕರಣದ ತನಿಖೆಯಿಂದ ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರಬರುತ್ತಿದೆ. ಇದೀಗ NCB (ಮಾದಕ ವಸ್ತು ನಿಯಂತ್ರಣ ಇಲಾಖೆ) ಅಧಿಕಾರಿಗಳು ರಿಯಾ ವಿರುದ್ಧ ಹೊಸ ಪ್ರಕರಣ ದಾಖಲಿಸಿಕೊಂಡಿದ್ದು, ಡ್ರಗ್ಸ್ ಜಾಲದ ಸುತ್ತ ತನಿಖೆ ಪ್ರಾರಂಭಿಸಿದ್ದಾರೆ. ಇದಕ್ಕಾಗಿ ವಿಶೇಷ ತಂಡ ರಚನೆ ಮಾಡಲಾಗಿದ್ದು, ಡ್ರಗ್ಸ್ ಎಲ್ಲಿಂದ ಬರುತ್ತಿತ್ತು, ಯಾರಿಗೆಲ್ಲ ಸಪ್ಲೈ ಆಗುತ್ತಿತ್ತು ಎನ್ನುವ ಬಗ್ಗೆ ಸಂಪೂರ್ಣ ತನಿಖೆ ಪ್ರಾರಂಭಿಸಿದ್ದಾರೆ.

  English summary
  Rhea Chakraborty paid 17,000 to Sushant Singh's servant for 2 bags of weed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X