For Quick Alerts
  ALLOW NOTIFICATIONS  
  For Daily Alerts

  ರಿಯಾ ಚಕ್ರವರ್ತಿ ಸಹೋದರನ ಜಾಮೀನು ಅರ್ಜಿ ತಿರಸ್ಕೃತ

  |

  ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಚಕ್ರವರ್ತಿಯ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.

  ಸುಶಾಂತ್ ಸಾವಿನ ತನಿಖೆ ವೇಳೆ ಬಾಲಿವುಡ್‌ನ ಡ್ರಗ್ಸ್ ಕರ್ಮಕಾಂಡ ಹೊರಗೆ ಬಂದಿದ್ದು, ಡ್ರಗ್ಸ್ ಕೋನದ ತನಿಖೆ ನಡೆಸುತ್ತಿರುವ ಎನ್‌ಸಿಬಿಯು ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿಯ ಸಹೋದರ ಶೋವಿಕ್ ಚಕ್ರವರ್ತಿಯನ್ನು ಸೆಪ್ಟೆಂಬರ್ 4ನೇ ತಾರೀಖಿನಂದು ಎನ್‌ಸಿಬಿ ಬಂಧಿಸಿತು.

  ರಿಯಾ ಚಕ್ರವರ್ತಿ ಬೆಂಬಲಕ್ಕೆ ನಿಂತ ನಟ ರಿತೇಶ್ ದೇಶ್ ಮುಖ್

  ಸುಶಾಂತ್ ಗಾಗಿ ಹಾಗೂ ರಿಯಾ ಚಕ್ರವರ್ತಿಗಾಗಿ ಡ್ರಗ್ಸ್ ಖರೀದಿಸುತ್ತಿದ್ದ ಎಂದು ಶೋವಿಕ್‌ನನ್ನು ಬಂಧಿಸಲಾಗಿತ್ತು. ಕೆಲವು ಡ್ರಗ್ಸ್ ಪೆಡ್ಲರ್‌ಗಳ ಜೊತೆಗೆ ಸಹ ಶೋವಿಕ್‌ಗೆ ಸಂಪರ್ಕವಿತ್ತು ಎನ್ನಲಾಗಿದೆ.

  ನವೆಂಬರ್ 3 ರವರೆಗೆ ಜೈಲೇ ಗತಿ

  ನವೆಂಬರ್ 3 ರವರೆಗೆ ಜೈಲೇ ಗತಿ

  ಪ್ರಕರಣದಲ್ಲಿ ತಮಗೆ ಜಾಮೀನು ನೀಡಬೇಕು ಎಂದು ಶೋವಿಕ್ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಹಾಕಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಜಾಮೀನು ಮನವಿಯನ್ನು ತಿರಸ್ಕರಿಸಿದೆ. ಹಾಗಾಗಿ ಶೋವಿಕ್ ನವೆಂಬರ್ 3 ರವರೆಗೆ ನ್ಯಾಯಾಂಗ ಬಂಧನದಲ್ಲಿಯೇ ಇರಬೇಕಾಗಿದೆ.

  ಸೆಪ್ಟೆಂಬರ್ 9 ರಂದು ರಿಯಾ ಚಕ್ರವರ್ತಿ ಬಂಧನ

  ಸೆಪ್ಟೆಂಬರ್ 9 ರಂದು ರಿಯಾ ಚಕ್ರವರ್ತಿ ಬಂಧನ

  ಶೋವಿಕ್ ಚಕ್ರವರ್ತಿ ಸಹೋದರಿ ರಿಯಾ ಚಕ್ರವರ್ತಿಯನ್ನು ಎನ್‌ಸಿಬಿ ಅಧಿಕಾರಿಗಳು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 9 ರಂದು ಬಂಧಿಸಿದ್ದರು. 28 ದಿನ ನ್ಯಾಯಾಂಗ ಬಂಧನದಲ್ಲಿದ್ದ ರಿಯಾ ಗೆ ನಂತರ ಜಾಮೀನು ದೊರಕಿತು.

  ಸ್ಟಾರ್ ನಟಿಯರ ವಿಚಾರಣೆ

  ಸ್ಟಾರ್ ನಟಿಯರ ವಿಚಾರಣೆ

  ಸುಶಾಂತ್ ಸಾವು ಪ್ರಕರಣವು ಬಾಲಿವುಡ್‌ನ ಡ್ರಗ್ಸ್ ಜಗತ್ತನ್ನು ಅನಾವರಣ ಮಾಡಿದ್ದು, ಡ್ರಗ್ಸ್ ಪ್ರಕರಣದಲ್ಲಿ ಹಲವು ಸ್ಟಾರ್ ನಟಿಯರನ್ನು ವಿಚಾರಣೆ ಮಾಡಲಾಗಿದೆ. ದೀಪಿಕಾ ಪಡುಕೋಣೆ, ರಾಕುಲ್ ಪ್ರೀತ್ ಸಿಂಗ್, ಶ್ರದ್ಧಾ ಕಪೂರ್, ಸಾರಾ ಅಲಿ ಖಾನ್ ಅವರುಗಳನ್ನು ವಿಚಾರಣೆ ಮಾಡಲಾಗಿದೆ.

  D Boss ಫಾಲೋ ಮಾಡಲು ಹೋಗಿ ತಗಲಾಕೊಂಡ Dhanveer Gowda | Illegal Safari Video | Filmibeat Kannada
  ತನಿಖೆ ನಡೆಸುತ್ತಿರುವ ಸಿಬಿಐ

  ತನಿಖೆ ನಡೆಸುತ್ತಿರುವ ಸಿಬಿಐ

  ಇನ್ನು ಸುಶಾಂತ್ ಸಾವು ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದು, ಸುಶಾಂತ್ ಅದ್ದು ಕೊಲೆಯಲ್ಲ ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಬಂದಂತಿದೆ. ಏಮ್ಸ್ ಆಸ್ಪತ್ರೆ ವೈದ್ಯರು, ಸುಶಾಂತ್‌ ನದ್ದು ಕೊಲೆಯಲ್ಲ ಎಂದೇ ಅಭಿಪ್ರಾಯವನ್ನು ಸಿಬಿಐ ಗೆ ನೀಡಿದ್ದಾರೆ.ಸ

  English summary
  Actress Rhea Chakraborty's brother Showik Chakraborty's bail application rejected. He need to be in Jail till November 03.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X