For Quick Alerts
  ALLOW NOTIFICATIONS  
  For Daily Alerts

  ಭಾರತಕ್ಕೆ ಅಭಿನಂದನೆಗಳು, ಮಧ್ಯಮ ವರ್ಗದ ಕುಟುಂಬವನ್ನು ಸರ್ವನಾಶ ಮಾಡಿದ್ರಿ: ರಿಯಾ ತಂದೆಯ ಆಕ್ರೋಶ

  |

  'ಅಭಿನಂದನೆಗಳು ಭಾರತ, ಮಗನನ್ನು ಬಂಧಿಸಿದ್ದೀರಿ' ಎಂದು ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ತಂದೆ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಇಂದ್ರಜಿತ್ ಚಕ್ರವರ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  25 ಸಲ ಹುಚ್ಚ ಸಿನಿಮಾನ ಥಿಯೇಟರ್ ನಲ್ಲಿ ನೋಡಿದ್ದೀನಿ | Kirik Keerthi | Filmibeat Kannada

  ಡ್ರಗ್ ಮಾಫಿಯಾ ಜಾಲಕ್ಕೆ ಸಂಬಂಧಿಸಿದಂತೆ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಬಂಧನದ ಬೆನ್ನಲ್ಲೇ ತಂದೆ ಇಂದ್ರಜಿತ್ ಚಕ್ರವರ್ತಿ "ಅಭಿನಂದನೆಗಳು ಭಾರತ, ಮಗನನ್ನು ಬಂಧಿಸಿದ್ದೀರಿ, ಮಗಳನ್ನು ಖಂಡಿತ ಅರೆಸ್ಟ್ ಮಾಡುತ್ತೀರಿ. ಮುಂದೆ ಯಾರು, ಏನಾಗುತ್ತೋ ಗೊತ್ತಿಲ್ಲ." ಎಂದು ಆಕ್ರೋಶ ಹೊರಹಾಕಿದ್ದಾರೆ.

  ಬಂಧನಕ್ಕೆ ರಿಯಾ ಸಿದ್ಧ, ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕುವುದಿಲ್ಲ: ವಕೀಲ

  'ನೀವು ಮಧ್ಯಮ ವರ್ಗದ ಕುಟುಂಬವನ್ನು ಪರಿಣಾಮಕಾರಿಯಾಗಿ ನಾಶ ಮಾಡಿದ್ದೀರಿ, ಆದರೆ ನ್ಯಾಯದ ಸಲುವಾಗಿ ಸಮರ್ಥನೀಯವಾಗಿದೆ. ಜೈ ಹಿಂದ್' ನೋವಿನ ಮಾತುಗಳನ್ನು ಆಡಿದ್ದಾರೆ.

  ಶೋವಿಕ್ ಮತ್ತು ಸುಶಾಂತ್ ಸಿಂಗ್ ಮನೆಯ ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡ ಅವರನ್ನು ಕಳೆದ ಶುಕ್ರವಾರ NCB ಬಂಧಿಸಿ ವಿಚಾರಣೆ ನಡೆಸುತ್ತಿದೆ. ಮುಂಬೈನ ಸಾಂತಾ ಕ್ರೂಜ್ ಪ್ರದೇಶದಲ್ಲಿರುವ ಶೋವಿಕ್ ನಿವಾಸ ಮತ್ತು ಅಂಧೇರಿಯ ಸ್ಯಾಮುಯೆಲ್ ಮಿರಾಂಡಾ ನಿವಾಸದ ಮೇಲೆ NCB ದಾಳಿ ಮಾಡಿ, ಶೋಧಕಾರ್ಯ ನಡೆಸಿದೆ. ಬಳಿಕ ಶೋವಿಕ್, ಮಿರಾಂಡಾ ಮತ್ತು ಸುಶಾಂತ್ ಸಿಂಗ್ ಸಹಾಯಕ ದೀಪೇಶ್ ಸಾವಂತ್ ಬಂಧಿಸಲಾಗಿದೆ.

  NCB ತನಿಖೆಯಲ್ಲಿ ಶೋವಿಕ್ ಚಕ್ರವರ್ತಿ, ಸಹೋದರಿ ರಿಯಾಗಾಗಿ ಡ್ರಗ್ಸ್ ಖರೀದಿಸುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ಸೆಪ್ಟಂಬರ್ 9ರವರೆಗೂ ಶೋವಿಕ್ ಸೇರಿದಂತೆ ಮೂವರನ್ನು ಕಸ್ಟಡಿಗೆ ಪಡೆಯಲಾಗಿದೆ. ಕಳೆದ ಎರಡು ದಿನಗಳಿಂದ ನಟಿ ರಿಯಾ ಚಕ್ರವರ್ತಿ NCB ಅಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸುತ್ತಿದ್ದಾರೆ.

  ವಿಚಾರಣೆ ವೇಳೆ ಸುಶಾಂತ್ ಸಿಂಗ್ ಗಾಗಿ ಡ್ರಗ್ಸ್ ಖರೀದಿಸುತ್ತಿರುವುದಾಗಿ ರಿಯಾ ಕೂಡ ಸತ್ಯ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ರಿಯಾ ಚಕ್ರವರ್ತಿಯನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಿಯಾ ಕುಟುಂಬ ಸಿಬಿಐ, ಇಡಿ ಮತ್ತು ಎನ್ ಸಿ ಬಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.

  English summary
  Rhea Chakraborty father Indrajit Chakraborty reaction after his son arrested. He says Congratulations India.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X