For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಸಹೋದರಿ ಕುಡಿದು ರಾತ್ರಿ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದರು: ರಿಯಾ ಗಂಭೀರ ಆರೋಪ

  |

  ನಟ ಸುಶಾಂತ್ ಸಿಂಗ್ ಚಕ್ರವರ್ತಿ ಆತ್ಮಹತ್ಯೆ ಪ್ರಕರಣದ ತನಿಖೆ ಇನ್ನೂ ಮುಗಿದಿಲ್ಲ. ಸುಶಾಂತ್ ಸಿಂಗ್ ಕುಟುಂಬದವರು ಇದುವರೆಗೂ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ ಆರೋಪ ಮಾಡುತ್ತಿದ್ದರು. ಇದೀಗ ರಿಯಾ ಸುಶಾಂತ್ ಕುಟಂಬದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

  Upendra ಅಭಿನಯದ ಬ್ರಹ್ಮ ಚಿತ್ರ ತಯಾರಾದ ಕ್ಷಣಗಳು | FILMIBEAT KANNADA

  ಸುಶಾಂತ್ ಸಿಂಗ್ ಕುಟುಂಬ ಮತ್ತು ಸುಶಾಂತ್ ಸಹೋದರಿಯ ಬಗ್ಗೆ ಪ್ರೇಯಸಿ ರಿಯಾ ಚಕ್ರವರ್ತಿ ಹೇಳಿರುವ ನಾಲ್ಕು ಪುಟಗಳ ಹೇಳಿಕೆಯನ್ನು ರಿಯಾ ಪರ ವಕೀಲ ಸತೀಶ್ ಮನೆಶಿಂದೆ ಬಹಿರಂಗ ಪಡಿಸಿದ್ದಾರೆ. ಈ ನಾಲ್ಕು ಪುಟಗಳ ಹೇಳಿಕೆಯಲ್ಲಿ ರಿಯಾ ಸುಶಾಂತ್ ಸಹೋದರಿ ಪ್ರಿಯಾಂಕ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಸುಶಾಂತ್ ಸಿಂಗ್ ಕುಟುಂಬದ ಜೊತೆ ಸಂಬಂಧ ಸರಿ ಇರಲಿಲ್ಲ ಎಂದು ಹೇಳಿದ್ದಾರೆ. ಮುಂದೆ ಓದಿ...

  ಸುಶಾಂತ್ ಸಿಂಗ್ ಅನ್ನು ಬಿಟ್ಟು ಹೋಗಿದ್ದೇಕೆ ಪ್ರೇಯಸಿ ರಿಯಾ

  ಸುಶಾಂತ್ ಕುಟುಂಬ ಎಲ್ಲಾ ಆರೋಪಗಳನ್ನು ರೂಪಿಸುತ್ತಿದ್ದಾರೆ

  ಸುಶಾಂತ್ ಕುಟುಂಬ ಎಲ್ಲಾ ಆರೋಪಗಳನ್ನು ರೂಪಿಸುತ್ತಿದ್ದಾರೆ

  "ಸುಶಾಂತ್ ಸಿಂಗ್ ಕುಟುಂಬದವರು ರಿಯಾ ವಿರುದ್ಧ ಮಾಡುತ್ತಿರುವ ಆರೋಪಗಳು ಆಧಾರ ರಹಿತವಾಗಿದೆ. ಸುಶಾಂತ್ ನಿಧನದ ನಂತರ ಜುಲೈ 27ರ ವರೆಗೂ ಸುಶಾಂತ್ ಕುಟುಂಬ ಯಾವುದೆ ಆರೋಪ ಮಾಡಿರಲಿಲ್ಲ. ಪೊಲೀಸ್ ಮುಂದೆಯೂ ಏನು ಹೇಳಲಿಲ್ಲ. ಅವರದ್ದು ವಿದ್ಯಾವಂತ ಕುಟುಂಬ. ಐಪಿಎಸ್ ಅಧಿಕಾರಿ ಒಪಿ ಸಿಂಗ್ ಇದ್ದಾರೆ. ಈ ಎಲ್ಲಾ ಆರೋಪಗಳನ್ನು ಕುಟುಂಬದವರೆ ರೂಪಿಸಿದ್ದಾರೆ. ಹಣ ವರ್ಗಾವಣೆಯ ದಾಖಲೆಗಳನ್ನು ರಿಯಾ ಇಡಿ ಅಧಿಕಾರಿಗಳಿಗೆ ನೀಡಿದ್ದಾರೆ"

  ಸುಶಾಂತ್ ಸಹೋದರಿ ಕುಡಿದು ತೂರಾಡುತ್ತಿದ್ದರು

  ಸುಶಾಂತ್ ಸಹೋದರಿ ಕುಡಿದು ತೂರಾಡುತ್ತಿದ್ದರು

  "ಸುಶಾಂತ್ ಮತ್ತು ರಿಯಾ ಡೇಟಿಂಗ್ ಮಾಡುತ್ತಿದ್ದ ಪ್ರಾರಂಭದಲ್ಲಿ, ರಿಯಾ ಸುಶಾಂತ್ ಮನೆಗೆ ತೆರಳಿದ್ದರು. ಆಗ ಸುಶಾಂತ್ ಸಹೋದರಿ ಪ್ರಿಯಾಂಕಾ ಮತ್ತು ಪತಿ ಸಿದ್ಧಾರ್ಥ್ ಕೂಡ ಜೊತೆಯಲ್ಲಿದ್ದರು. ಒಂದು ರಾತ್ರಿ ಏಪ್ರಿಲ್ ನಲ್ಲಿ ರಿಯಾ ಮತ್ತು ಪ್ರಿಯಾಂಕಾ ಇಬ್ಬರು ಪಾರ್ಟಿಗೆ ಹೊರಟಿದ್ದರು. ಪ್ರಿಯಾಂಕಾ ಪಾರ್ಟಿಯಲ್ಲಿ ಕುಡಿದು ತೂರಾಡುತ್ತಿದ್ದರು. ಪಾರ್ಟಿಯಲ್ಲಿ ಪುರುಷರು ಮತ್ತು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದರು."

  ಸುಶಾಂತ್ ಸಹೋದರಿ ಪ್ರಿಯಾಂಕಾ ಅಸಭ್ಯವಾಗಿ ಸ್ಪರ್ಶಿಸಿದ್ದಾರೆ

  ಸುಶಾಂತ್ ಸಹೋದರಿ ಪ್ರಿಯಾಂಕಾ ಅಸಭ್ಯವಾಗಿ ಸ್ಪರ್ಶಿಸಿದ್ದಾರೆ

  "ನಂತರ ಸುಶಾಂತ್ ಮನೆಗೆ ಮರಳಿದೆವು. ಮನೆಗೆ ಬಂದ ಬಳಿಕ ಸುಶಾಂತ್ ಜೊತೆ ಮತ್ತೆ ಕುಡಿಯಲು ಪ್ರಾರಂಭಿಸಿದರು. ಆದರೆ ಮರುದಿನ ಶೂಟಿಂಗ್ ಇದ್ದ ಪರಿಣಾಮ ರಿಯಾ ಬೇಗ ಮಲಗಳು ತೆರಳಿದರು. ಸುಶಾಂತ್ ಕೋಣೆಯಲ್ಲಿ ರಿಯಾ ಮಲಗಿದ್ದರು. ನಂತರ ಸುಶಾಂತ್ ಸಹೋದರಿ ಪ್ರಿಯಾಂಕ ಕೂಡ ಪಕ್ಕದಲ್ಲಿಯೇ ಬಂದು ಮಲಗಿದರು. ಅಸಭ್ಯವಾಗಿ ಸ್ಪರ್ಶಿಸುತ್ತಿದ್ದರು. ದಿಢೀರನೆ ಎಚ್ಚರಗೊಂಡ ರಿಯಾ ಗಾಬರಿಯಾಗಿ ರೂಮಿನಿಂದ ಹೊರ ಓಡಿ ಬಂದರು."

  ಸುಶಾಂತ್ ಕುಟುಂಬದ ಜೊತೆ ಸಂಬಂಧ ಸರಿಯಿಲ್ಲ

  ಸುಶಾಂತ್ ಕುಟುಂಬದ ಜೊತೆ ಸಂಬಂಧ ಸರಿಯಿಲ್ಲ

  "ಪ್ರಿಯಾಂಕಾ ಅಸಭ್ಯ ವರ್ತನೆ ಬಗ್ಗೆ ಸುಶಾಂತ್ ಬಳಿ ಹೇಳಿಕೊಂಡರು. ನಂತರ ಸುಶಾಂತ್ ಮತ್ತು ಪ್ರಿಯಾಂಕಾ ನಡುವೆ ವಾಗ್ವಾದ ನಡೆಯಿತು. ಈ ಘಟನೆಯ ಬಳಿಕ ಸುಶಾಂತ್ ಸಿಂಗ್ ಕುಟುಂಬದವರ ಜೊತೆ ರಿಯಾ ಚಕ್ರವರ್ತಿ ಹಾಳಾಯಿತು" ಎಂದು ನಾಲ್ಕು ಪುಟಗಳ ಹೇಳಿಕೆಯನ್ನು ರಿಯಾ ವಕೀಲರು ಬಹಿರಂಗಪಡಿಸಿದ್ದಾರೆ. ರಿಯಾ ಚಕ್ರವರ್ತಿಯ ಈ ಗಂಭೀರ ಹೇಳಿಕೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

  English summary
  Rhea Chakraborty Shocking Allegations on Sushant Singh family and his Sister. Rhea Chakraborty says Sushant Singh sister Priyanka got Drunk and Groped me.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X