For Quick Alerts
  ALLOW NOTIFICATIONS  
  For Daily Alerts

  ಈ ಬಾರಿ 'ಬಿಗ್ ಬಾಸ್'ನಲ್ಲಿ ಸದ್ದು ಮಾಡ್ತಾರಾ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ

  By ಫಿಲ್ಮಿಬೀಟ್ ಡೆಸ್ಕ್
  |

  ಹಿಂದಿ ಬಿಗ್ ಬಾಸ್ 15 ಪ್ರಾರಂಭವಾಗುತ್ತಿದೆ. ಈಗಾಗಲೇ ಎಲ್ಲಾ ತಯಾರಿ ನಡೆದಿದ್ದು, ಸ್ಪರ್ಧಿಗಳು ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ. ಈಗಾಗಲೇ ಅನೇಕರ ಹೆಸರು ವೈರಲ್ ಆಗಿದೆ. ಸಂಭಾವ್ಯ ಪಟ್ಟಿಯಲ್ಲಿ ಕಳೆದ ವರ್ಷ ನಿಧನ ಹೊಂದಿದ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಪ್ರೇಯಸಿ ರಿಯಾ ಚಕ್ರವರ್ತಿ ಹೆಸರು ಕೇಳಿಬರುತ್ತಿದೆ.

  ಕಳೆದ ವರ್ಷ ಸುಶಾಂತ್ ಸಿಂಗ್ ನಿಧನ ಹೊಂದಿದ ಬಳಿಕ ರಿಯಾ ಚಕ್ರವರ್ತಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಸುಶಾಂತ್ ಸಾವಿನ ಬಳಿಕ ರಿಯಾ ತೀರ ಸಂಕಷ್ಟದಲ್ಲಿ ಸಿಲುಕಿದ್ದರು. ಡ್ರಗ್ಸ್ ಪ್ರಕರಣ ಸಂಬಂಧ ಜೈಲು ಸೇರಿದ್ದ ರಿಯಾ ಬಳಿಕ ಜಾಮೀನಿನ ಮೇಲೆ ಹೊರಬಂದರು. ಸದ್ಯ ಚೇತರಿಸಿಕೊಂಡಿರುವ ರಿಯಾ ಇದೀಗ ಬಿಗ್ ಬಾಸ್ ಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

  ರಿಯಾ ಬಿಗ್ ಬಾಸ್ ಎಂಟ್ರಿ ತಿಂಗಳಿಂದನೇ ಸದ್ದು ಮಾಡುತ್ತಿದೆ. ಇದೀಗ ವೈರಲ್ ಆಗಲು ಕಾರಣ ಇತ್ತೀಚಿಗಷ್ಟೆ ರಿಯಾ ಚಕ್ರವರ್ತಿ ಮುಂಬೈ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದರು. ಇದು ರಿಯಾ ಬಿಗ್ ಬಾಸ್ ಎಂಟ್ರಿಯ ಬಗ್ಗೆ ಸುಳಿವು ನೀಡಿದೆ. ಬಿಗ್ ಬಾಸ್ ನ ಅನೇಕ ಸ್ಪರ್ಧಿಗಳು ಮುಂಬೈನ ಸ್ಟುಡಿಯೋದಲ್ಲಿ ಹಾಜರಿದ್ದರು. ಹಾಗಾಗಿ ರಿಯಾ ಬಿಗ್ ಬಾಸ್ 15ರ ಭಾಗವಾಗಲಿದ್ದಾರೆ ಎನ್ನಲಾಗುತ್ತಿದೆ.

  ಮೂಲಗಳ ಪ್ರಕಾರ ರಿಯಾ ಬಿಗ್ ಬಾಸ್ ಗೆ ಸ್ಪರ್ಧಿಯಾಗಿ ಎಂಟ್ರಿಕೊಡದಿದ್ದರೂ ಬಿಗ್ ಬಾಸ್ ವೇದಿಕೆಯಲ್ಲಿ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ ರಿಯಾ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದರು ಎನ್ನುವ ಸುದ್ದಿ ಕೇಳಿಬರುತ್ತಿದೆ. ಈ ಬಗ್ಗೆ ರಿಯಾ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಅಂದಹಾಗೆ ಬಿಗ್ ಬಾಸ್ ನಡೆಸಿಕೊಡಲು ನಟ ಸಲ್ಮಾನ್ ಖಾನ್ ಈಗಾಗಲೇ ವಿದೇಶದಿಂದ ಮುಂಬೈಗೆ ವಾಪಸ್ ಆಗಿದ್ದಾರೆ.

  ಸುಶಾಂತ್ ಸಾವಿನ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ಹೆಸರು ಬಲವಾಗಿ ಕೇಳಿಬಂದಿತ್ತು. ಸುಶಾಂತ್ ಸಾವಿಗೆ ಕಾರಣರಾದವರಲ್ಲಿ ರಿಯಾ ಚಕ್ರವರ್ತಿ ಕೂಡ ಒಬ್ಬರು ಎನ್ನುವ ಸುದ್ದಿ ವೈರಲ್ ಆಗಿತ್ತು. ಬಳಿಕ ಜೈಲುವಾಸವನ್ನು ಅನುಭವಿಸಿ ಬಂದಿರುವ ರಿಯಾ ಇದೀಗ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಇತ್ತೀಚಿಗಷ್ಟೆ ರಿಯಾ ಹಾಲಿವುಡ್ ಕಡೆ ಮುಖ ಮಾಡಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು. ಆದರೆ ಈ ಬಗ್ಗೆಯೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  ರಿಯಾ ಕೊನೆಯದಾಗಿ ಚಹ್ರೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಮತ್ತು ಇಮ್ರಾನ್ ಹಶ್ಮಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಳಿಕ ರಿಯಾ ಬಿಗ್ ಬಾಸ್ ಮೂಲಕ ಪ್ರೇಕ್ಷಕರ ಮುಂದೆ ಬರ್ತಾರಾ ಅಥವಾ ಹೊಸ ಸಿನಿಮಾ ಅನೌನ್ಸ್ ಮಾಡುತ್ತಾರಾ ಎಂದು ಕಾದುನೋಡಬೇಕಿದೆ.

  ಇನ್ನು ನಟ ಸಲ್ಮಾನ್ ಖಾನ್ ಈಗಾಗಲೇ ಬಿಗ್ ಬಾಸ್ ನಿರೂಪಣೆಗೆ ಸಜ್ಜಾಗಿದ್ದಾರೆ. ಟೈಗರ್-3 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಸಲ್ಮಾನ್ ಭಾರತಕ್ಕೆ ಮರಳಿದ್ದಾರೆ. ಇತ್ತೀಚಿಗಷ್ಟೆ ಸಲ್ಮಾನ್ ಮುಂಬೈ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಏರ್ ಪೋರ್ಟ್ ನಿಂದ ಹೊರಬರುವಾಗ ಉಲ್ಟಾ ಮಾಸ್ಕ್ ಧರಿಸಿದ್ದ ಸಲ್ಮಾನ್ ಖಾನ್ ಅವರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದರು.

  ಸಲ್ಮಾನ್ ಖಾನ್ ಸುಮಾರು 10 ವರ್ಷಗಳಿಂದ ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. ಇದೀಗ ಬಿಗ್ ಬಾಸ್ 15ನೇ ಶೋ ನಡೆಸಿಕೊಡಲು ತಯಾರಾಗಿದ್ದಾರೆ. ಸಲ್ಮಾನ್ ಖಾನ್ ನಿರೂಪಣೆ ಶೈಲಿಗೆ ಅಭಿಮಾನಿಗಳು ಮನಸೋತಿದ್ದಾರೆ. ಬಿಗ್ ಬಾಸ್ ನಿರೂಪಣೆ ವೇದಿಕೆಯಲ್ಲಿ ಸಲ್ಮಾನ್ ಬಿಟ್ಟು ಬೇರೆಯವರನ್ನು ನೋಡಲು ಅಭಿಮಾನಿಗಳು ಇಷ್ಟ ಪಡುವುದಿಲ್ಲ. ಹಾಗಾಗಿ ಸಲ್ಮಾನ್ ಖಾನ್ ನನ್ನು ಬಿಗ್ ಬಾಸ್ ವೇದಿಕೆಯಲ್ಲಿ ನೋಡಲು ಕಾತರರಾಗಿದ್ದಾರೆ.

  ಅಕ್ಟೋಬರ್ 2ರಂದು ಪ್ರಾರಂಭವಾಗುವ ಶೋನಲ್ಲಿ ಯಾರೆಲ್ಲ ಸೆಲೆಬ್ರಿಟಿಗಳು ಭಾಗಿಯಾಗಲಿದ್ದಾರೆ ಎನ್ನುವ ಕುತೂಹಲ ತೆರೆಬೀಳಲಿದೆ. ಬಾರಿಯ ಬಿಗ್ ಬಾಸ್ ನಲ್ಲಿ ರಿಯಾ ಚಕ್ರವರ್ತಿ ಇರ್ತಾರಾ? ಎನ್ನುವುದನ್ನು ಕಾದು ನೋಡಬೇಕು.

  English summary
  Actress Rhea Chakraborty To Be A Part Of Bigg Boss 15.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X