For Quick Alerts
  ALLOW NOTIFICATIONS  
  For Daily Alerts

  ಮೊದಲ ದಿನಕ್ಕಿಂತ 2ನೇ ದಿನ ಹೆಚ್ಚು ಗಳಿಕೆ ಮಾಡಿದ ಕಾಂತಾರ ಹಿಂದಿ ವರ್ಷನ್; 2 ದಿನದ ಒಟ್ಟು ಕಲೆಕ್ಷನ್ ಎಷ್ಟು?

  |

  ಸೆಪ್ಟೆಂಬರ್ 30ರಂದು ವಿಶ್ವದಾದ್ಯಂತ ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ಕಾಂತಾರ ಚಿತ್ರ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಗೊಂಡಿತ್ತು. ಕಾಂತಾರ ಕನ್ನಡ ಅವತರಣಿಕೆ ವೀಕ್ಷಿಸಿದ ಪರರಾಜ್ಯದ ಸಿನಿಪ್ರೇಕ್ಷಕರು ಚಿತ್ರವನ್ನು ತಮ್ಮ ಭಾಷೆಗಳಿಗೂ ಸಹ ಡಬ್ ಮಾಡಿ ಪ್ಯಾನ್ ಇಂಡಿಯಾ ಬಿಡುಗಡೆ ಮಾಡಿ ಎಂದು ಕಾಂತಾರ ಚಿತ್ರತಂಡಕ್ಕೆ ಸಂದೇಶ ರವಾನಿಸಿದ್ದರು.

  ಹೀಗೆ ಸಿನಿ ಪ್ರೇಕ್ಷಕರಿಂದ ದೊಡ್ಡ ಮಟ್ಟದಲ್ಲಿ ಡಬ್ಬಿಂಗ್ ಕೂಗು ಕೇಳಿಬಂದ ಕಾರಣ ಹೊಂಬಾಳೆ ಫಿಲ್ಮ್ಸ್ ಕಾಂತಾರ ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿಯೂ ಬಿಡುಗಡೆ ಮಾಡುತ್ತಿದೆ. ಮೊದಲಿಗೆ ಅಕ್ಟೋಬರ್ 14ರ ಶುಕ್ರವಾರದಂದು ಕಾಂತಾರ ಹಿಂದಿ ಅವತರಣಿಕೆ ಬಿಡುಗಡೆಗೊಂಡಿತು ಹಾಗೂ ನಿನ್ನೆ, ಅಕ್ಟೋಬರ್ 15ರ ಶನಿವಾರ ಕಾಂತಾರ ತೆಲುಗು ಹಾಗೂ ತಮಿಳು ಅವತರಣಿಕೆ ಬಿಡುಗಡೆಗೊಂಡಿದೆ.

  ಕಾಂತಾರ ತೆಲುಗು ಬುಕಿಂಗ್‍ಗೆ ದಂಗಾದ ಟಾಲಿವುಡ್; ರಾತ್ರಿ 11 ಗಂಟೆ ನಂತರವೂ ಪ್ರದರ್ಶನ, ಭರ್ಜರಿ ಲಾಭ ಖಚಿತ!ಕಾಂತಾರ ತೆಲುಗು ಬುಕಿಂಗ್‍ಗೆ ದಂಗಾದ ಟಾಲಿವುಡ್; ರಾತ್ರಿ 11 ಗಂಟೆ ನಂತರವೂ ಪ್ರದರ್ಶನ, ಭರ್ಜರಿ ಲಾಭ ಖಚಿತ!

  ಈ ಮೂಲಕ ಕಾಂತಾರ ಪ್ಯಾನ್ ಇಂಡಿಯಾ ಚಿತ್ರವಾಗಿ ಬದಲಾಗಿದ್ದು, ಹಿಂದಿಯಲ್ಲಿಯೂ ಸಹ ಒಳ್ಳೆಯ ವಿಮರ್ಶೆ ಪಡೆದುಕೊಳ್ಳುವುದರ ಮೂಲಕ ಉತ್ತಮ ಓಪನಿಂಗ್ ಪಡೆದುಕೊಂಡಿತ್ತು. ಮೊದಲನೇ ದಿನ 1.27 ಕೋಟಿ ಕಲೆಕ್ಷನ್ ಮಾಡಿದ್ದ ಕಾಂತಾರ ಹಿಂದಿ ವರ್ಷನ್ ಎರಡನೇ ದಿನ ಎಷ್ಟು ಕಲೆಕ್ಷನ್ ಮಾಡಿದೆ ಎಂಬ ಕುತೂಹಲವಿತ್ತು. ಆ ಕುತೂಹಲಕ್ಕೀಗ ಬಾಕ್ಸ್ ಆಫೀಸ್ ಪಂಡಿತರು ಫುಲ್‌ಸ್ಟಾಪ್ ಇಟ್ಟಿದ್ದು, ಕಾಂತಾರ ಹಿಂದಿ ಚಿತ್ರದ ಎರಡನೇ ದಿನದ ಕಲೆಕ್ಷನ್ ಬಹಿರಂಗವಾಗಿದೆ.

  ಮೊದಲ ದಿನಕ್ಕಿಂತ ಎರಡನೇ ದಿನ ಹೆಚ್ಚು ಕಲೆಕ್ಷನ್

  ಮೊದಲ ದಿನಕ್ಕಿಂತ ಎರಡನೇ ದಿನ ಹೆಚ್ಚು ಕಲೆಕ್ಷನ್

  ಮೊದಲನೇ ದಿನ 1.27 ಕೋಟಿ ಗಳಿಕೆ ಮಾಡಿದ್ದ ಕಾಂತಾರ ಹಿಂದಿ ಚಿತ್ರ ಎರಡನೇ ದಿನ 2.35 ಕೋಟಿ ಗಳಿಕೆ ಮಾಡಿದೆ ಎಂದು ಬಾಲಿವುಡ್ ಬಾಕ್ಸ್ ಆಫೀಸ್ ಪರಿಣಿತರು ತಿಳಿಸಿದ್ದಾರೆ. ಈ ಮೂಲಕ ಕಾಂತಾರ ಹಿಂದಿ ವರ್ಷನ್ ಮೊದಲನೇ ದಿನಕ್ಕಿಂತ ಎರಡನೇ ದಿನ ಹೆಚ್ಚು ಕಲೆಕ್ಷನ್ ಮಾಡಿದ್ದು, ಮೊದಲೆರಡು ದಿನಗಳಲ್ಲಿ 3.62 ಕೋಟಿ ಕಲೆಕ್ಷನ್ ಮಾಡಿದೆ.

  ರಾಕೆಟ್ರಿ, ವಿಕ್ರಮ್ ಮತ್ತು ಗಾಡ್ ಫಾದರ್ ಚಿತ್ರಗಳನ್ನೇ ಹಿಂದಿಕ್ಕಿದೆ ಕಾಂತಾರ

  ರಾಕೆಟ್ರಿ, ವಿಕ್ರಮ್ ಮತ್ತು ಗಾಡ್ ಫಾದರ್ ಚಿತ್ರಗಳನ್ನೇ ಹಿಂದಿಕ್ಕಿದೆ ಕಾಂತಾರ

  ಇನ್ನು ಹಿಂದಿಗೆ ಡಬ್ ಆದ ದಕ್ಷಿಣ ಭಾರತದ ಚಿತ್ರಗಳಾದ ಕಮಲ್ ಹಾಸನ್ ಅಭಿನಯದ ವಿಕ್ರಂ, ಮಾಧವನ್ ಅಭಿನಯದ ರಾಕೆಟ್ರಿ ಹಾಗೂ ಚಿರಂಜೀವಿ ಮತ್ತು ಸಲ್ಮಾನ್ ಖಾನ್ ನಟನೆಯ ಗಾಡ್ ಫಾದರ್ ಚಿತ್ರಗಳಿಗಿಂತ ಕಾಂತಾರ ಚಿತ್ರ ಮೊದಲೆರಡು ದಿನ ಹಿಂದಿಯಲ್ಲಿ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಮೂಲಕ ಒಂದೊಳ್ಳೆ ಕಂಟೆಂಟ್ ಇರುವಂತಹ ಚಿತ್ರ ಸ್ಟಾರ್‌ಗಳ ಚಿತ್ರವನ್ನೇ ಬಗ್ಗುಬಡಿಯಲಿದೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.

  ಭಾನುವಾರ 3 ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆ

  ಭಾನುವಾರ 3 ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆ

  ಇನ್ನು ಕಾಂತಾರ ಹಿಂದಿ ಚಿತ್ರ ತನ್ನ ಮೂರನೇ ದಿನದಂದು ( ಅಕ್ಟೋಬರ್ 16ರ ಭಾನುವಾರ ) 3 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಈ ಮೂಲಕ ಕಾಂತಾರ ಚಿತ್ರ ಮೊದಲ 3 ದಿನಗಳಲ್ಲಿ 7 ಕೋಟಿ ಹಣ ಸಂಪಾದಿಸುವ ಸಾಧ್ಯತೆ ಹೆಚ್ಚಿದೆ.

  ಭಾನುವಾರದ ಬುಕ್ಕಿಂಗ್ ಹೇಗಿದೆ?

  ಭಾನುವಾರದ ಬುಕ್ಕಿಂಗ್ ಹೇಗಿದೆ?

  ಮೊದಲೆರೆಡು ದಿನಗಳಿಗೆ ಹೋಲಿಸಿದರೆ ಕಾಂತಾರ ಹಿಂದಿ ಚಿತ್ರದ ಭಾನುವಾರದ ಬುಕ್ಕಿಂಗ್ಸ್ ತುಸು ಹೆಚ್ಚಾಗಿಯೇ ಇದೆ. ಮುಂಬೈ ಹಾಗೂ ಡೆಲ್ಲಿ ನಗರಗಳ ಪ್ರಮುಖ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಹಾಗೂ ಕೆಲವೊಂದಷ್ಟು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಪ್ರದರ್ಶನಗಳು ವೇಗವಾಗಿ ತುಂಬುತ್ತಿವೆ. ಅತ್ತ ಭುವನೇಶ್ವರ್ ನಗರದಲ್ಲಿ ಕಾಂತಾರ ಹಿಂದಿ ಚಿತ್ರದ ಬುಕ್ಕಿಂಗ್ ಸಹ ಭರ್ಜರಿಯಾಗಿ ಸಾಗುತ್ತಿದೆ. ವಿಶೇಷವೆಂದರೆ ಕಾಂತಾರ ಹಿಂದಿ ಅವತರಣಿಕೆ ಬೆಂಗಳೂರು ಹಾಗೂ ಹೈದರಾಬಾದ್ ನಗರಗಳಲ್ಲಿಯೂ ಅತ್ಯದ್ಭುತ ಬುಕ್ಕಿಂಗ್ ಪಡೆದುಕೊಳ್ಳುತ್ತಿದೆ.

  English summary
  Rishab Shetty starrer Kantara Hindi Box office report: Day 2 collection is bigger than Day 1
  Sunday, October 16, 2022, 8:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X