For Quick Alerts
  ALLOW NOTIFICATIONS  
  For Daily Alerts

  ಅಚ್ಚರಿ ಮೂಡಿಸಿದ 'ಅಮಿತಾಬ್-ರಿಷಿ ಕಪೂರ್' ಜೋಡಿಯ ಹೊಸ ಚಿತ್ರ

  By Bharath Kumar
  |

  ಕಳೆದ ಕೆಲ ದಿನಗಳ ಹಿಂದೆಯಷ್ಟೇ ಬಾಲಿವುಡ್ ಸ್ಟಾರ್ ನಟ ರಿಷಿ ಕಪೂರ್, ''ತುಂಬಾ ವರ್ಷದ ನಂತರ ಅಮಿತಾಬ್ ಬಚ್ಚನ್ ಜೊತೆ ಅಭಿನಯಿಸುತ್ತಿದ್ದೀನಿ. ಸದ್ಯ ಸ್ಕ್ರಿಪ್ಟ್ ಸಿದ್ದವಾಗುತ್ತಿದೆ. ಆದಷ್ಟೂ ಬೇಗ ಚಿತ್ರೀಕರಣ ಶುರುವಾಗಲಿದೆ'' ಎಂದು ಟ್ವಿಟ್ಟರ್ ನಲ್ಲಿ ಸಂತಸ ಹಂಚಿಕೊಂಡಿದ್ದರು.

  ಅಷ್ಟರಲ್ಲಾಗಲೇ ಈ ಚಿತ್ರದ ಫೋಟೋಶೂಟ್ ಮುಗಿಸಿದ್ದು, ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಪೋಸ್ಟರ್ ನಲ್ಲಿ ಅಮಿತಾಬ್ ಬಚ್ಚನ್ ಹಾಗೂ ರಿಷಿ ಕಪೂರ್ ಇಬ್ಬರ ಗೆಟಪ್ ಗಳು ಬಾಲಿವುಡ್ ಮಾಯನಗರಿಯಲ್ಲಿ ಎಲ್ಲಿಲ್ಲದ ಕುತೂಹಲ ಹುಟ್ಟಿಸಿದೆ.[26 ವರ್ಷದ ನಂತರ ಬಾಲಿವುಡ್ ನಲ್ಲೊಂದು ಅಪೂರ್ವ ಸಂಗಮ]

  ಅಷ್ಟಕ್ಕೂ, ಇಬ್ಬರು ಲೆಜೆಂಡ್ ನಟರು ಸುಮಾರು 26 ವರ್ಷದ ನಂತರ ಒಟ್ಟಾಗಿ ಅಭಿನಯಿಸುತ್ತಿರುವ ಈ ಚಿತ್ರ ಯಾವುದು? ಅವರ ಪಾತ್ರಗಳೇನು ಎಂದು ಮುಂದೆ ಓದಿ....

  '102 ನಾಟ್ ಔಟ್' ಫಸ್ಟ್ ಲುಕ್ ರಿಲೀಸ್

  '102 ನಾಟ್ ಔಟ್' ಫಸ್ಟ್ ಲುಕ್ ರಿಲೀಸ್

  ಅಮಿತಾಬ್ ಬಚ್ಚನ್ ಹಾಗೂ ರಿಷಿ ಕಪೂರ್ ಅಭಿನಯಿಸುತ್ತಿರುವ ಚಿತ್ರ '102 ನಾಟ್ ಔಟ್'. ಈ ಚಿತ್ರದ ಫಸ್ಟ್ ಲುಕ್ ಈಗ ಬಿಡುಗಡೆಯಾಗಿದ್ದು, ಚಿತ್ರ ಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿದೆ. ಯಾಕಂದ್ರೆ, '102 ನಾಟ್ ಔಟ್' ಚಿತ್ರದಲ್ಲಿ ಈ ಇಬ್ಬರ ಗೆಟಪ್ ಗಳು ಅಷ್ಟರ ಮಟ್ಟಿಗೆ ನಿರೀಕ್ಷೆ ಹೆಚ್ಚಿಸಿದೆ.

  'ಅಪ್ಪ-ಮಗ'ನಾಗಿ ಸೂಪರ್ ಹಿಟ್ ಜೋಡಿ

  'ಅಪ್ಪ-ಮಗ'ನಾಗಿ ಸೂಪರ್ ಹಿಟ್ ಜೋಡಿ

  '102 ನಾಟ್ ಔಟ್' ಚಿತ್ರದಲ್ಲಿ ಅಮಿತಾಬ್ ಹಾಗೂ ರಿಷಿ ಕಪೂರ್ ಅಪ್ಪ-ಮಗನ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. 74 ವರ್ಷದ 'ಬಿಗ್-ಬಿ' ಚಿತ್ರದಲ್ಲಿ 102 ವರ್ಷದ ಮುದುಕನಾಗಿದ್ದರೇ, 65 ವರ್ಷದ ರಿಷಿ ಕಪೂರ್ ಚಿತ್ರದಲ್ಲಿ 75 ವರ್ಷದ ವ್ಯಕ್ತಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

  26 ವರ್ಷದ ನಂತರ ಒಂದಾದ ಲೆಜೆಂಡ್ ನಟರು

  26 ವರ್ಷದ ನಂತರ ಒಂದಾದ ಲೆಜೆಂಡ್ ನಟರು

  ಈ ಇಬ್ಬರು 'ಕಭಿ ಕಭಿ', 'ಅಮರ್ ಅಕ್ಬರ್ ಅಂಥೋನಿ','ನಸೀಬ್', ಕೂಲಿ, ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದರು. ಆದ್ರೆ, ಕಳೆದ 26 ವರ್ಷದಿಂದ ಮತ್ಯಾವ ಚಿತ್ರದಲ್ಲಿ ಇವರಿಬ್ಬರು ಒಂದೇ ತೆರೆಯಲ್ಲಿ ಕಾಣಿಸಲೇ ಇಲ್ಲ. ಕೊನೆಯದಾಗಿ 1991 ರಲ್ಲಿ ತೆರೆಕಂಡಿದ್ದ 'ಅಜೂಬಾ' ಚಿತ್ರದಲ್ಲಿ ತೆರೆಹಂಚಿಕೊಂಡಿದ್ದರು. ಈಗ ಮತ್ತೆ ಹೊಸ ಚಿತ್ರದ ಮೂಲಕ ಬಿಗ್ ಸ್ಕ್ರೀನ್ ನಲ್ಲಿ ಒಟ್ಟಾಗಿ ಬರ್ತಿದ್ದಾರೆ.

  ಗುಜರಾತಿ ನಾಟಕ ಆಧರಿತ ಚಿತ್ರ

  ಗುಜರಾತಿ ನಾಟಕ ಆಧರಿತ ಚಿತ್ರ

  ಅಂದ್ಹಾಗೆ, '102 ನಾಟ್ ಔಟ್' ಚಿತ್ರದ ಗುಜರಾತಿನ ಖ್ಯಾತ ಬರಹಗಾರ ಸೌಮ್ಯ ಜೋಶಿ ಅವರು '102 ನಾಟ್ ಔಟ್' ಹೆಸರಿನಲ್ಲೇ ಬರೆದಿರುವ ನಾಟಕ ಆಧಾರಿತ ಚಿತ್ರ.

  ಯಾರು ನಿರ್ದೇಶನ?

  ಯಾರು ನಿರ್ದೇಶನ?

  ಈ ಚಿತ್ರವನ್ನ ಉಮೇಶ್ ಶುಕ್ಲಾ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ 'ಓ ಮೈ ಗಾಡ್', 'ಆಲ್ ಈಸ್ ವೆಲ್' ಅಂತಹ ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ. ಎ.ಆರ್.ರೆಹಮಾನ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

  ಚಿತ್ರೀಕರಣ ಯಾವಾಗ?

  ಚಿತ್ರೀಕರಣ ಯಾವಾಗ?

  ಈಗಾಗಲೇ ಶೂಟಿಂಗ್ ಶುರು ಮಾಡಿರುವ ಚಿತ್ರತಂಡ ಈ ತಿಂಗಳ ಅಂತ್ಯದ ಅವರೆಗೂ ಮುಂಬೈನಲ್ಲಿ ಚಿತ್ರೀಕರಣ ಮಾಡಲಿದೆ. ನಂತರ ಮತ್ತೆ ಎರಡನೇ ಹಂತದ ಚಿತ್ರೀಕರಣವನ್ನ ಜುಲೈ ತಿಂಗಳಲ್ಲಿ ಮುಂದುವರೆಸಲಿದೆ.

  English summary
  Rishi Kapoor and Amitabh Bachchan will be reuniting on the big screen after 34 years for Umesh Shukla's 102 Not Out.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X