twitter
    For Quick Alerts
    ALLOW NOTIFICATIONS  
    For Daily Alerts

    ಗಾಂಧಿ ಪರಿವಾರದ ವಿರುದ್ಧ ಸಿಡಿದೆದ್ದ ಬಾಲಿವುಡ್ ನಟ ರಿಷಿ ಕಪೂರ್

    By ಸೋನು ಗೌಡ
    |

    ದೆಹಲಿಯ ಸುಮಾರು 64 ಸ್ಥಳಗಳಿಗೆ ನೆಹರು, ಗಾಂಧಿ ಅಂತ ಹೆಸರುಗಳನ್ನು ಇರಿಸಲಾಗಿದ್ದು, ಅವರ ಹೆಸರು ಇಡುವಂತೆ ಅವರು ಕೊಟ್ಟಿರುವ ಉನ್ನತ ಕೊಡುಗೆಗಳಾದರೂ ಏನು? ಅಂತ ಬಾಲಿವುಡ್ ನಟ ರಿಷಿ ಕಪೂರ್ ಅವರು ಟ್ವಿಟ್ಟರ್ ನಲ್ಲಿ ಗುಡುಗಿದ್ದಾರೆ.

    ಇಂದಿರಾ ಗಾಂಧಿ ಮತ್ತು ನೆಹರು ಅವರ ನಿಧನದ ನಂತರ ಬರೀ ದೆಹಲಿ ಒಂದರಲ್ಲೇ ಸುಮಾರು 64ಕ್ಕೂ ಹೆಚ್ಚು ಪ್ರಮುಖ ಸ್ಥಳಗಳಿಗೆ ಅವರ ಹೆಸರು ನಾಮಕರಣಗೊಂಡಿದೆ. ಎಂದು ಟ್ವಿಟ್ಟರ್ ನಲ್ಲಿ ಪ್ರಶ್ನೆ ಮಾಡಿದ್ದಾರೆ.[ನಾನು ಗೋಮಾಂಸ ತಿನ್ನುವ ಹಿಂದೂ: ರಿಷಿ ಕಪೂರ್]

    Rishi Kapoor asks 'Why Name India’s Assets Only After Gandhis

    'ದೇಶದ ಪ್ರತಿಷ್ಠಿತ ರಸ್ತೆ, ರೈಲು-ಬಸ್ಸು ಹಾಗೂ ವಿಮಾನ ನಿಲ್ದಾಣಗಳಿಗೆ ಗಾಂಧಿ ಕುಟುಂಬದವರ ಹೆಸರೇ ಯಾಕೆ ಇಡಬೇಕು'?. ಎಂದು ಸಾಲು ಸಾಲು ಟ್ವೀಟ್ ಮಾಡಿ ಸುದ್ದಿಯಾಗಿದ್ದಾರೆ.[ಸಲಿಂಗಕಾಮಿಯಾದ ಬಾಲಿವುಡ್ ನಟ ರಿಷಿಕಪೂರ್]

    ಪ್ರಮುಖ ಸ್ಥಳಗಳಿಗೆ ನಾಮಕರಣ ಮಾಡುವ ಬಗ್ಗೆ ಮಾತನಾಡಿರುವ ರಿಷಿ 'ಕಪೂರ್, ಬಾಂದ್ರಾ-ವರ್ಲಿ ಸಮುದ್ರಗಳಿಗೆ ಸಂಪರ್ಕ ಮಾರ್ಗಕ್ಕೆ ಖ್ಯಾತರಾದ ಲತಾ ಮಂಗೇಷ್ಕರ್, ಜೆ.ಆರ್.ಡಿ ಟಾಟಾ ಅವರನ್ನು ಹೆಸರನ್ನು ಇಡಬಹುದಲ್ಲವೇ? ಯೋಚಿಸಿ ಗೆಳೆಯರೇ' ಎಂದು ರಿಷಿ ಕಪೂರ್ ಟ್ವೀಟ್ ಮಾಡಿದ್ದಾರೆ.

    'ಫಿಲ್ಮ್ ಸಿಟಿಗೆ ಹಿರಿಯ ನಟ ದಿಲೀಪ್ ಕುಮಾರ್, ದೇವ್ ಆನಂದ್, ಅಶೋಕ್ ಕುಮಾರ್ ಅಥವಾ ಅಮಿತಾಭ್ ಬಚ್ಚನ್ ಅವರ ಹೆಸರನ್ನು ಇಡಬಹುದು. ಅದರ ಬದಲು ರಾಜೀವ್ ಗಾಂಧಿ ಹೆಸರಲ್ಲೇನಿದೆ'? ಎಂದು ಮತ್ತೊಮ್ಮೆ ಟ್ವೀಟ್ ಮಾಡಿದ್ದಾರೆ.[ಮತ್ತೆ ಬರಲಿದ್ದಾರೆ ಅಮರ್ ಅಕ್ಬರ್ ಅಂಥೋನಿ]

    "ಇನ್ನು ಒಂದು ಹೆಜ್ಜೆ ಮುಂದೆ ಹೋಗುವುದಾದರೆ, ಮಹಮ್ಮದ್ ರಫಿ, ಮುಖೇಶ್, ಮನ್ನಾದೇ, ಕಿಶೋರ್ ಕುಮಾರ್ ಮುಂತಾದವರು ಇದ್ದಾರಲ್ವೇ?. (ಸುಮ್ಮನೆ ಸಲಹೆಗೆ ಅಷ್ಟೇ) ಅವರ ಹೆಸರುಗಳನ್ನು ಇಡುವ ನಿಟ್ಟಿನಲ್ಲಿ ಯಾಕೆ ಚಿಂತನೆಗಳು ನಡೆಯುವುದಿಲ್ಲ". ಎಂದು ರಿಷಿ ಕಪೂರ್ ಸರಣಿ ಟ್ವೀಟ್ ಮಾಡಿದ್ದಾರೆ.



    ಒಟ್ನಲ್ಲಿ ಏಕ್ ಧಮ್ ಗಾಂಧಿ ಪ್ಯಾಮಿಲಿ ವಿರುದ್ಧ ತಿರುಗಿ ನಿಂತಿರುವ ಬಾಲಿವುಡ್ ಹಿರಿಯ ನಟ ಕಮ್ ನಿರ್ಮಾಪಕ ರಿಷಿ ಕಪೂರ್ ಅವರು ಎಲ್ಲರ ತಲೆಗೆ ಹುಳ ಬಿಟ್ಟು ಈ ವಿಚಾರದ ಬಗ್ಗೆ ಯೋಚನೆ ಮಾಡುವಂತೆ ಮಾಡಿದ್ದಾರೆ.

    English summary
    Veteran Bollywood actor Rishi Kapoor has deprecated the fact that previous Congress governments have named important assets of the country after the Gandhi family.
    Friday, May 20, 2016, 18:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X