For Quick Alerts
  ALLOW NOTIFICATIONS  
  For Daily Alerts

  'ಸಂಜು': ಪುತ್ರ ರಣ್ಬೀರ್ ನಟನೆ ಕಂಡು ಹೆಮ್ಮೆ ಪಟ್ಟ ತಂದೆ ರಿಶಿ ಕಪೂರ್

  By Harshitha
  |

  'ಶಿಷ್ಯ ಗುರುವನ್ನು ಮೀರಿಸಬೇಕು... ಪುತ್ರ ತಂದೆಯನ್ನ ಮೀರಿಸಬೇಕು... ಆಗಲೇ ಗುರು ಮತ್ತು ತಂದೆಗೆ ಹೆಮ್ಮೆ' ಎಂಬ ಮಾತಿನಂತೆ ಮಗನ ಪ್ರತಿಭೆ ಕಂಡು ಹಿರಿಯ ನಟ ರಿಶಿ ಕಪೂರ್ ಸಂತಸಗೊಂಡಿದ್ದಾರೆ.

  ರಣ್ಬೀರ್ ಕಪೂರ್ ಬಾಲಿವುಡ್ ಗೆ ಪದಾರ್ಪಣೆ ಮಾಡಿದಾಗಲೂ, ರಿಶಿ ಕಪೂರ್ ಇಷ್ಟೊಂದು ಖುಷಿ ಪಟ್ಟಿರಲಿಲ್ಲ. ರಣ್ಬೀರ್ ನಟನೆಯನ್ನ ತೆರೆಮೇಲೆ ನೋಡಿ ಇಲ್ಲಿಯವರೆಗೂ ಭೇಷ್ ಎನ್ನದ ರಿಶಿ ಕಪೂರ್ ಇದೀಗ ಪುತ್ರನನ್ನ ಬಾಚಿ ತಬ್ಬಿಕೊಂಡಿದ್ದಾರೆ.

  ಬಾಲಿವುಡ್ ನಟ ಸಂಜಯ್ ದತ್ ಪಾತ್ರಕ್ಕೆ ತೆರೆಮೇಲೆ ರಣ್ಬೀರ್ ಜೀವ ತುಂಬಿರುವ ರೀತಿ ನೋಡಿ ರಿಶಿ ಕಪೂರ್ ಹೆಮ್ಮೆ ಪಟ್ಟಿದ್ದಾರೆ. 'ಸಂಜು' ಸಿನಿಮಾ ನೋಡಿದ್ಮೇಲೆ, ರಿಶಿ ಕಪೂರ್ ಮಾಡಿರುವ ಟ್ವೀಟ್ ಇಲ್ಲಿದೆ ನೋಡಿ...

  ಆಗಸದಲ್ಲಿ ಹಾರುತ್ತಿರುವ ರಿಶಿ ಕಪೂರ್

  ''ಚಿಯರ್ಸ್ ರಣ್ಬೀರ್.! ನಿನ್ನ ತಂದೆ-ತಾಯಿ ಎಷ್ಟು ಹೆಮ್ಮೆ ಪಡುತ್ತಿದ್ದಾರೆ ಅನ್ನೋದು ನಿನಗಿನ್ನೂ ಗೊತ್ತಿಲ್ಲ. ದೇವರ ಆಶೀರ್ವಾದ ನಿನ್ನ ಮೇಲಿರಲಿ. ಇನ್ನೂ ಒಳ್ಳೊಳ್ಳೆಯ ಕೆಲಸಗಳನ್ನು ಮಾಡು'' ಎಂದು ರಿಶಿ ಕಪೂರ್ 'ಸಂಜು' ಸಿನಿಮಾ ನೋಡಿದ್ಮೇಲೆ ಟ್ವೀಟ್ ಮಾಡಿದ್ದಾರೆ.

  'ಸಂಜು' ವಿಮರ್ಶೆ: ರಣ್ಬೀರ್-ರಾಜಕುಮಾರ್ ಹಿರಾನಿಯ 'ಮಾಸ್ಟರ್ ಪೀಸ್'!'ಸಂಜು' ವಿಮರ್ಶೆ: ರಣ್ಬೀರ್-ರಾಜಕುಮಾರ್ ಹಿರಾನಿಯ 'ಮಾಸ್ಟರ್ ಪೀಸ್'!

  ರಣ್ಬೀರ್ ಕಪೂರ್ ಗೆ ಖುಷಿಯೋ ಖುಷಿ.!

  ರಣ್ಬೀರ್ ಕಪೂರ್ ಗೆ ಖುಷಿಯೋ ಖುಷಿ.!

  ''ನನ್ನ ತಂದೆ ನನ್ನನ್ನ ಹೊಗಳುವುದಿಲ್ಲ'' ಎಂದು ಅನೇಕ ಸಂದರ್ಶನಗಳಲ್ಲಿ ಹೇಳಿಕೊಂಡಿರುವ ರಣ್ಬೀರ್ ಕಪೂರ್, ತಮ್ಮ ತಂದೆ ಮಾಡಿರುವ ಈ ಟ್ವೀಟ್ ನೋಡಿದ್ರೆ ಖಂಡಿತ ಖುಷಿ ಪಡದೇ ಇರಲ್ಲ.

  'ಸಂಜು' ಚಿತ್ರಕ್ಕೆ ವಿಮರ್ಶಕರು ಕೊಟ್ಟಿದ್ದು ಮಿಶ್ರ ಪ್ರತಿಕ್ರಿಯೆ.!'ಸಂಜು' ಚಿತ್ರಕ್ಕೆ ವಿಮರ್ಶಕರು ಕೊಟ್ಟಿದ್ದು ಮಿಶ್ರ ಪ್ರತಿಕ್ರಿಯೆ.!

  ಭಾವುಕರಾಗಿದ್ದ ರಿಶಿ ಕಪೂರ್

  ಭಾವುಕರಾಗಿದ್ದ ರಿಶಿ ಕಪೂರ್

  'ಸಂಜು' ಸಿನಿಮಾದ ಟ್ರೈಲರ್ ನೋಡಿದ್ಮೇಲೆ, ''ರಣ್ಬೀರ್ ಮೇಲೆ ನನಗೆ ಹೆಮ್ಮೆ ಆಗುತ್ತಿದೆ. ನೀತು ಹಾಗೂ ರಣ್ಬೀರ್ ಮೇಲಾಣೆ... ನನಗದು ರಣ್ಬೀರ್ ಅಂತ ಅನಿಸಲೇ ಇಲ್ಲ. ಸಂಜಯ್ ದತ್ ಎಂದುಕೊಂಡಿದ್ದೆ'' ಎಂದು ಭಾವುಕರಾಗಿ ಮಾತನಾಡಿದ್ದರು ರಿಶಿ ಕಪೂರ್.

  ದಾಖಲೆ ಬರೆಯುತ್ತಿರುವ 'ಸಂಜು'

  ದಾಖಲೆ ಬರೆಯುತ್ತಿರುವ 'ಸಂಜು'

  ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ 'ಸಂಜು' ಸಿನಿಮಾ ಕಲೆಕ್ಷನ್ ನಲ್ಲಿ ದಾಖಲೆ ಬರೆಯುತ್ತಿದೆ. 'ಸಂಜು' ಮುನ್ನುಗ್ಗುತ್ತಿರುವ ರೀತಿ ನೋಡಿದ್ರೆ, ಹಿಂದಿನ ಎಲ್ಲ ರೆಕಾರ್ಡ್ ಗಳನ್ನು ಧೂಳಿಪಟ ಮಾಡುವಂತಿದೆ.

  English summary
  Bollywood Actor Rishi Kapoor praises Ranbir Kapoor for his acting in 'Sanju'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X