»   » 'ಜಗ್ಗಾ ಜಾಸೂಸ್' ನಿರ್ದೇಶಕ ಅನುರಾಗ್ ಬಸು ಬೇಜವಾಬ್ದಾರಿ ಮನುಷ್ಯ: ರಿಷಿ ಕಪೂರ್

'ಜಗ್ಗಾ ಜಾಸೂಸ್' ನಿರ್ದೇಶಕ ಅನುರಾಗ್ ಬಸು ಬೇಜವಾಬ್ದಾರಿ ಮನುಷ್ಯ: ರಿಷಿ ಕಪೂರ್

Posted By:
Subscribe to Filmibeat Kannada

ಇತ್ತೀಚೆಗಷ್ಟೆ ಬಿಡುಗಡೆ ಆದ ಬಾಲಿವುಡ್ ನ ಬಹು ನಿರೀಕ್ಷಿತ ಸಿನಿಮಾ 'ಜಗ್ಗಾ ಜಾಸೂಸ್' 7 ದಿನಗಳ ಅಂತ್ಯಕ್ಕೆ ಕೇವಲ 46 ಕೋಟಿ ಗಳಿಸಿದೆ. ಬಾಲಿವುಡ್ ಸಿನಿಮಾಗಳ ರೇಂಜ್‌ ಗೆ ಈ ಕಲೆಕ್ಷನ್ ಅತಿ ಕಡಿಮೆಯೇ ಆಗಿದ್ದು ಸಿನಿಮಾ ಸಾಧಾರಣ ಯಶಸ್ಸನ್ನು ಕಂಡಿಲ್ಲ.

ವಿಮರ್ಶೆ: ಸಂಗೀತ ಸಾಹಸಮಯ 'ಜಗ್ಗಾ ಜಾಸೂಸ್'ನಲ್ಲಿ ಮ್ಯಾಜಿಕ್ ಮಾಡಿದ ರಣ್ಬೀರ್

'ಜಗ್ಗಾ ಜಾಸೂಸ್' ಸಿನಿಮಾದಲ್ಲಿ ರಣಬೀರ್ ಮತ್ತು ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಸೋಲಿನ ಹಿನ್ನೆಲೆಯಲ್ಲಿ ರಣಬೀರ್ ಕಪೂರ್ ತಂದೆ ರಿಷಿ ಕಪೂರ್ ರವರು ಚಿತ್ರದ ನಿರ್ದೇಶಕ ಅನುರಾಗ್ ಬಸು ರವರನ್ನು ಬೇಜವಾಬ್ದಾರಿ ಮನುಷ್ಯ ಎಂದು ಸಂದರ್ಶನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದು, ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿರಿ..

ಅನುರಾಗ್ ಬಸು 'ಬೇಜವಾಬ್ದಾರಿ ಮನುಷ್ಯ'

ರಣಬೀರ್ ಸಹ 'ಜಗ್ಗಾ ಜಾಸೂಸ್' ಚಿತ್ರಕ್ಕೆ ನಿರ್ಮಾಪಕರಾಗಿ ವರ್ಕ್ ಮಾಡಿದ್ದು, ಸಿನಿಮಾ ಸಾಧಾರಣ ಯಶಸ್ಸನ್ನು ಕಂಡಿಲ್ಲ. ಈ ಹಿನ್ನೆಲೆಯಲ್ಲಿ ರಣಬೀರ್ ತಂದೆ ರಿಷಿ ಕಪೂರ್ ಕೊಂಚ ಗರಂ ಆಗಿದ್ದು ಸಂದರ್ಶನ ಕಾರ್ಯಕ್ರಮದಲ್ಲಿ ಚಿತ್ರ ನಿರ್ದೇಶಕ ಅನುರಾಗ್ ಬಸು ರವರನ್ನು 'ಒಬ್ಬ ಇರ್ರೆಸ್ಪಾನ್ಸಿಬಲ್ ಮನುಷ್ಯ. ಚಿತ್ರ ಬಿಡುಗಡೆ ಆಗುವುದಕ್ಕಿಂತ ಒಂದು ದಿನ ಮುಂಚೆ ರಣಬೀರ್ ಗೂ ಸಹ ಚಿತ್ರ ತೋರಿಸಿಲ್ಲ' ಅಲ್ಲದೇ ಆನ್‌ ಟೈಮ್‌ಗೆ ಚಿತ್ರವನ್ನು ಕಂಪ್ಲೀಟ್ ಸಹ ಮಾಡಿಕೊಟ್ಟಿಲ್ಲ' ಎಂದಿದ್ದಾರೆ.

ರಣಬೀರ್ ಬಗ್ಗೆ ಬೇಸರವಿಲ್ಲ

"ರಣಬೀರ್ 'ಜಗ್ಗಾ ಜಾಸೂಸ್' ಚಿತ್ರ ಮಾಡಲು ತೀರ್ಮಾನ ಮಾಡಿದ್ದಕ್ಕೆ ಅವನ ಮೇಲೆ ಬೇಸರವಿಲ್ಲ. ಅನುರಾಗ್ ಬಸು ಚಿತ್ರ ಬಿಡುಗಡೆ ಆಗುವ ಎರಡು ದಿನಕ್ಕೂ ಮುನ್ನಾ ದಿನ ಸಹ ಚಿತ್ರ ಮಿಕ್ಸಿಂಗ್ ಮಾಡುತ್ತಿದ್ದರು. ಇನ್ನೂ ಒಂದೇ ವೀಕ್‌ ನಲ್ಲಿ ಪ್ರೀತಮ್ ಸಂಗೀತ ನೀಡುತ್ತಾರೆ ಎಂಬುದನ್ನು ಅಲೋಚನೆ ಮಾಡಲು ಸಾಧ್ಯವೇ?. ಅನುರಾಗ್.. ಇತರರಿಂದ ಒಪಿನಿಯನ್ ಪಡೆಯಬೇಡಿ. ಇತ್ತೀಚಿನ ಫಿಲ್ಮ್‌ಮೇಕರ್‌ಗಳು ಎಲ್ಲರೊಂದಿಗೆ ಅಭಿಪ್ರಾಯ ಪಡೆಯುತ್ತಿದ್ದಾರೆ. ಚಿತ್ರ ಬಿಡುಗಡೆ ಆಗುವ ಮುನ್ನ ತೋರಿಸಿ ಅಭಿಪ್ರಾಯ ಪಡೆಯುವುದಿಲ್ಲ. ಒಂದೇ ಬಾರಿ ನ್ಯೂಕ್ಲಿಯರ್ ಬಾಂಬ್ ನಂತೆ ಎಸೆಯುತ್ತಾರೆ" ರಿಷಿ ಕಪೂರ್, ರಣಬೀರ್ ಕಪೂರ್ ತಂದೆ

ಚಿತ್ರದ ಬಗ್ಗೆ ಯಾವ ಅಭಿಪ್ರಾಯವು ಇಲ್ಲ

" 'ಜಗ್ಗಾ ಜಾಸೂಸ್' ಚಿತ್ರವನ್ನು ನಾನು ವಿರೋಧಿಸಿಲ್ಲ ಅಥವಾ ಪ್ರೀತಿಯು ಅದರ ಮೇಲಿಲ್ಲ. ಆದರೆ 20 ನಿಮಿಷಗಳ ಕಾಲ ಇದರ ಬಗ್ಗೆ ಸಂಕ್ಷಿಪ್ತ ವಿವರ ನೀಡಬೇಕು ಎಂದುಕೊಂಡೆ. ಆದರೆ ಚಿತ್ರದ ಬಗ್ಗೆ ಅಭಿಪ್ರಾಯ ನೀಡುವವರು ಮತ್ತು ಎಕ್ತಾ ಕಪೂರ್ ತಮ್ಮ ಚಿತ್ರದಿಂದ ಅನುರಾಗ್ ಬಸುರನ್ನು ಹೊರಗೆ ಕಳುಹಿಸಿದ ಬಗ್ಗೆ ಸಂಪೂರ್ಣ ಒಪ್ಪಿಗೆ ಇದೆ.' ಎಂದಿದ್ದಾರೆ ರಿಷಿ ಕಪೂರ್.

ರಾಕೇಶ್ ರೋಷನ್ ಗೂ ಅನುರಾಗ್ ರಿಂದ ಸಮಸ್ಯೆ

'2010 ರಲ್ಲಿ 'ಕೈಟ್ಸ್' ಸಿನಿಮಾ ಮಾಡಬೇಕಾದರೂ ನಿರ್ಮಾಪಕ ರಾಕೇಶ್ ರೋಷನ್ ಗೂ ಸಹ ಅನುರಾಗ್ ಬಸು ರಿಂದ ಸಮಸ್ಯೆ ಎದುರಾಗಿತ್ತು. ಈ ಬೇಜವಾಬ್ದಾರಿ ಮನುಷ್ಯ ಚಿತ್ರವನ್ನು ಪೂರ್ಣಗೊಳಿಸಲಿಲ್ಲ. ಇದು ಎರಡು ವರ್ಷಗಳಲ್ಲಿ ಮೂರು ಬಾರಿ ಬಿಡುಗಡೆ ಆಗಬೇಕಿತ್ತು. ಆದರೆ ತಡವಾಯಿತು' ಎಂದು ಅನುರಾಗ್ ಬಸು ಬೇಜವಾಬ್ದಾರಿ ಕುರಿತು ಸಂದರ್ಶನದಲ್ಲಿ ಹೀಗೆ ರಿಷಿ ಕಪೂರ್ ವಿವರಿಸಿದ್ದಾರೆ.

ಸಾಧಾರಣ ಯಶಸ್ಸು ಸಿಗದ 'ಜಗ್ಗಾ ಜಾಸೂಸ್'

'ಚಿತ್ರ ಬಿಡುಗಡೆ ತಡವಾಗಿದ್ದಕ್ಕೆ ನಿರ್ಮಾಪಕನಾಗಿ ರಣಬೀರ್ ಗೂ ಸಹ ತೊಂದರೆ ಆಗಿದೆ. ಪ್ರೊಡ್ಯುಸರ್ ಗೆ ಚಿತ್ರ ತೋರಿಸದೆ ಬಿಡುಗಡೆ ಮಾಡಲು ನೀನ್ಯಾರು? ಇದೊಂದು ಹಾಸ್ಯಸ್ಪದ ಸಂಗತಿ. ನೀನು ದೊಡ್ಡ ನಿರ್ದೇಶಕನೇ ಆದರೂ.. ಯಾರು ಸಹ ನಿನ್ನೊಂದಿಗೆ ವರ್ಕ್ ಮಾಡಲು ಬಯಸುವುದಿಲ್ಲ. ಇತರೆ ಬಾಲಿವುಡ್ ಚಿತ್ರಗಳಂತೆ ಗಲ್ಫ್ ಮತ್ತು ಪ್ರಮುಖ ಶ್ರೀಮಂತ ಮಾರುಕಟ್ಟೆಗಳಲ್ಲಿ ಬಿಡುಗಡೆ ಆಗಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ, 'ಇದಕ್ಕೆ ಕಾರಣವೇ ಇಲ್ಲ. ಯಾಕಂದ್ರೆ ಬೇಜವಾಬ್ದಾರಿತನ. ಬಿಡುಗಡೆಗೂ ಮುನ್ನ ಅದು ತಾಜ್ ಮಹಲ್ ಆಗಿದ್ದರೂ ಸಹ ಕೆಲವೊಂದು ಲೆಕ್ಕಾಚಾರ ಇರಬೇಕು. ಎಲ್ಲವೂ ಕ್ರಿಯೇಟಿವಿಟಿ ಮೇಲೆ ಆಧಾರವಾಗಿರುವುದಿಲ್ಲ' ಎಂದಿದ್ದಾರೆ ರಿಷಿ ಕಪೂರ್.

'ಜಗ್ಗಾ ಜಾಸೂಸ್' ಬಾಕ್ಸ್ ಆಫೀಸ್ ಕಲೆಕ್ಷನ್

ಕತ್ರಿನಾ ಕೈಫ್ ಮತ್ತು ರಣಬೀರ್ ಕಪೂರ್ ಕಾಂಬಿನೇಷನ್ ನ ಮೂರನೇ ಸಿನಿಮಾ 'ಜಗ್ಗಾ ಜಾಸೂಸ್' ಏಳು ದಿನಗಳ ಅಂತ್ಯಕ್ಕೆ ಕೇವಲ 46.29 ಕೋಟಿ ರೂ ಗಳಿಸಿ, ಸಾಧಾರಣ ಯಶಸ್ಸನ್ನು ಕಂಡಿಲ್ಲ.

English summary
Ranbir Kapoor father Rishi Kapoor slams 'Jagga Jasoos' director Anurag Basu as an irresponsible Person. Reason is here..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada