»   » ಪತ್ನಿ ಜೊತೆ ತೆರೆ ಹಂಚಿಕೊಳ್ಳಲು ತುದಿಗಾಲಲ್ಲಿ ನಿಂತಿರುವ ರಿತೇಶ್

ಪತ್ನಿ ಜೊತೆ ತೆರೆ ಹಂಚಿಕೊಳ್ಳಲು ತುದಿಗಾಲಲ್ಲಿ ನಿಂತಿರುವ ರಿತೇಶ್

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನ ಕ್ಯೂಟ್ ಕಪಲ್ ಅಂತಾನೇ ಖ್ಯಾತಿ ಗಳಿಸಿರುವ ನಟ ರಿತೇಶ್ ದೇಶ್ ಮುಖ್ ಮತ್ತು ನಟಿ ಜೆನಿಲಿಯಾ ಡಿಸೋಜಾ ದಂಪತಿ ತಮ್ಮ ಅಭಿಮಾನಿಗಳಿಗೆ ಇದೀಗ ಸಿಹಿ ಸುದ್ದಿ ಹೊತ್ತು ತಂದಿದ್ದಾರೆ.

ರಿತೇಶ್ ದೇಶ್ ಮುಖ್ ಅವರು ತಮ್ಮ ಫೇವರಿಟಿ ಕೋ ಸ್ಟಾರ್ ಅಂತ ಹೇಳಿಕೊಂಡು ಜೆನಿಲಿಯಾ ಜೊತೆ ತೆರೆ ಹಂಚಿಕೊಂಡು ನಿಜ ಜೀವನದಲ್ಲೂ ಕಪಲ್ ಆಗುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದ ಈ ಮುದ್ದಾದ ಜೋಡಿ ಮತ್ತೆ ತೆರೆಯ ಮೇಲೆ ಮೋಡಿ ಮಾಡುತ್ತಾರೆ ಅಂತ ಎಲ್ಲರೂ ಅಂದುಕೊಂಡಿದ್ದೇ ಬಂತು.[ಜೆನಿಲಿಯಾಗೆ ಮತ್ತೆ ಮಗು ಆಯ್ತು, ತಾಯಿ ಮಗು ಆರೋಗ್ಯ]

Riteish Deshmukh wants to do a Marathi film with his wife Genelia D'Souza

ಆದರೆ ಜೆನಿಲಿಯಾ ಅವರು ಮದುವೆ ಆದ ಮೇಲೆ 'ನಮ್ಮ ಸಂಸಾರ ಆನಂದ ಸಾಗರ' ಅಂತ ಒಂದು ಗಂಡು ಮಗುವಿಗೆ ಜನ್ಮ ನೀಡಿದರೆ ವಿನಃ ತೆರೆ ಮೇಲೆ ಮಿಂಚಲಿಲ್ಲ. ಇದೀಗ ಮತ್ತೆ ಮೊನ್ನೆ ಮೊನ್ನೆ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿದರು. ಅಲ್ಲಿಗೆ ಕಥೆ ಮುಗಿಯಿತು ಅಂತ ಅಭಿಮಾನಿಗಳು ಕೂಡ ಸುಮ್ಮನಾದ್ರು.[ರಿತೇಶ್-ಜೆನಿಲಿಯಾ ಪ್ರೀತಿಯ ಸಂಕೇತ ರಿಯಾನ್]

Riteish Deshmukh wants to do a Marathi film with his wife Genelia D'Souza

ಆದರೆ ಇದೀಗ ಹೊಸದಾಗಿ ರಿತೇಶ್ ದೇಶ್ ಮುಖ್ ಅವರು ಸಿಹಿ ಸುದ್ದಿ ಹೊತ್ತು ತಂದಿದ್ದಾರೆ. 'ನಾನು ನನ್ನ ಪತ್ನಿಯೊಂದಿಗೆ ಮರಾಠಿ ಸಿನಿಮಾ ಒಂದನ್ನು ಮಾಡಬೇಕು ಅನ್ನೋದು ನನ್ನ ಆಸೆ. ಹಲವಾರು ಸಿನಿಮಾಗಳನ್ನು ಅವರ ಜೊತೆ ಮಾಡಿದ್ದೇನೆ, ಅವರು ನನ್ನ ಇಷ್ಟದ ಕೋ ಸ್ಟಾರ್' ಎಂದು ರಿತೇಶ್ ಅವರು ಬಾಯಿ ಬಿಟ್ಟಿದ್ದಾರೆ.

'ನಾನು ಜೆನಿಲಿಯಾ ಅವರ ಜೊತೆ ತುಂಬಾ ಎಂಜಾಯ್ ಮಾಡುತ್ತಾ ಕೆಲಸ ಮಾಡುತ್ತೇನೆ. ಆಕೆ ಈಗಾಗಲೇ ಹಲವು ಭಾಷೆಗಳ ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಮರಾಠಿ ಭಾಷೆಯಲ್ಲೂ ನಟಿಸಬೇಕು ಅನ್ನೋದು ನನ್ನ ಆಸೆ'.[ಲವ್ಲಿ ತಾರೆ ಜೆನಿಲಿಯಾ ಡಿಸೋಜಾ ಸೆಕೆಂಡ್ ಇನ್ನಿಂಗ್ಸ್]

Riteish Deshmukh wants to do a Marathi film with his wife Genelia D'Souza

'ಸದ್ಯಕ್ಕೆ ನನ್ನ ಕೈಯಲ್ಲಿ 3 ಮರಾಠಿ ಪ್ರಾಜೆಕ್ಟ್ ಇದೆ. ಅದರಲ್ಲಿ ಒಂದನ್ನು ನಾನೇ ನಿರ್ಮಾಣ ಮಾಡುತ್ತೇನೆ' ಎಂದು ನಟ ರಿತೇಶ್ ದೇಶ್ ಮುಖ್ ಅವರು ಮಾಧ್ಯಮವೊಂದರ ಸಂದರ್ಶನದಲ್ಲಿ ತಮ್ಮ ಮನದಾಳವನ್ನು ಹೊರಹಾಕಿದ್ದಾರೆ.

ಒಟ್ನಲ್ಲಿ ಮುದ್ದಿನ ಗಂಡನಿಗೋಸ್ಕರ ಅಂತ ಕ್ಯೂಟ್ ಬೆಡಗಿ ಜೆನಿಲಿಯಾ ಅವರು ಮತ್ತೆ ತೆರೆ ಮೇಲೆ ದಿಢೀರ್ ಅಂತ ಪ್ರತ್ಯಕ್ಷ ಆದ್ರೂ ಅಚ್ಚರಿ ಇಲ್ಲ. ಅಷ್ಟಕ್ಕೂ ಈ ಸುದ್ದಿ ಹಣ್ಣೋ, ಕಾಯೋ ಅಂತ ಯಾವುದಕ್ಕೂ ಕೆಲದಿನ ಕಾದು ನೋಡೋಣ.

English summary
Actor Riteish Deshmukh, who has earlier shared the screen space with his “favourite co-star” and wife Genelia D'Souza, says it’s his dream to work with her in a Marathi film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada