»   » ಜೆನಿಲಿಯಾ ಸ್ಕರ್ಟ್ ನಲ್ಲಿ ಪತಿ ರಿತೇಶ್ (ಫೋಟೋ)

ಜೆನಿಲಿಯಾ ಸ್ಕರ್ಟ್ ನಲ್ಲಿ ಪತಿ ರಿತೇಶ್ (ಫೋಟೋ)

Posted By:
Subscribe to Filmibeat Kannada

ಈ ಫೋಟೋ ನೋಡಿದರೆ ಇದೇನು ವಿಚಿತ್ರ ಸ್ವಾಮಿ ಎಂದುಕೊಳ್ಳುತ್ತೀರಿ. ಜೆನಿಲಿಯಾ ಡಿಸೋಜಾ ಪತಿ ರಿತೇಶ್ ದೇಶ್ ಮುಖ್ ಹೊಸ ಅವತಾರ ನೋಡಿದರೆ ಯಾರಿಗೇ ಆಗಲಿ ಅಚ್ಚರಿಯಾಗದೆ ಇರದು. ರಿತೇಶ್ ದೇಶ್ ಮುಖ್ ಅಭಿನಯಿಸುತ್ತಿರುವ ತಾಜಾ ಚಿತ್ರ 'ಹಮ್ ಷಕಲ್ಸ್' ಚಿತ್ರದಲ್ಲಿ ಅವರು ಈ ಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಒಂದು ಸನ್ನಿವೇಶದಲ್ಲಿ ಅವರು ಉಳಿದ ತಾರೆಗಳ ಜೊತೆ ಹುಡುಗಿಯರ ಬಟ್ಟೆ ತೊಟ್ಟು ನಾರಿಯ ವೇಷದಲ್ಲಿ ರಂಜಿಸಲಿದ್ದಾರೆ. ಇದಕ್ಕಾಗಿ ತನ್ನ ಪತ್ನಿ ಜೆನಿಲಿಯಾ ಡಿಸೋಜಾ ಅವರ ಸ್ಕರ್ಟನ್ನೇ ಬಳಸಿಕೊಂಡಿದ್ದಾರಂತೆ. ಮೊದಲು ಸ್ಕರ್ಟ್ ಕೇಳಿದಾಗ ಸ್ವತಃ ಜೆನಿಲಿಯಾ ಬೆಚ್ಚಿ ಬಿದ್ದರಂತೆ. ಬಳಿಕ ವಿಷಯ ತಿಳಿದ ಮೇಲೆ ನಿಟ್ಟುಸಿರು ಬಿಟ್ಟರಂತೆ.


ವಿಶೇಷ ಎಂದರೆ ಜೆನ್ನಿ ಹಾಗೂ ರಿತೇಶ್ ಅವರ ಸೈಜ್ ಒಂದೇ. ಹಾಗಾಗಿ ಸ್ಕರ್ಟ್ ಸಲೀಸಾಗಿ ಧರಿಸುವಂತಾಗಿದೆ. ರಿತೇಶ್ ದೇಶ್ ಮುಖ್ ಅವರ ಹೊಸ ಗೆಟಪ್ ನೋಡಿದವರು ಸೂಪರ್ ಎನ್ನುತ್ತಿದ್ದಾರೆ. ರಿತೇಶ್ ಅವರನ್ನು ಈ ಗೆಟಪ್ ನಲ್ಲಿ ನೋಡಿ ಸಖತ್ ಹಾಟ್ ಗುರು ಎಂದು ಕಣ್ಣು ಹೊಡೆದವರೂ ಇದ್ದಾರಂತೆ. ಎಲ್ಲಕ್ಕಿಂತ ವಿಶೇಷವಾಗಿ ಈ ಡ್ರೆಸ್, ಗೆಟಪ್ ಜೆನಿಲಿಯಾಗೆ ತುಂಬಾ ಹಿಡಿಸಿತಂತೆ.

ಸೈಫ್ ಆಲಿ ಖಾನ್, ರಿತೇಶ್ ದೇಶ್ ಮುಖ್, ರಾಮ್ ಕಪೂರ್ ಮುಖ್ಯ ತಾರಾಗಣದಲ್ಲಿರುವ ವೆರೈಟಿ ಫುಲ್ ಲೆಂತ್ ಕಾಮಿಡಿ ಚಿತ್ರವೇ 'ಹಮ್ ಷಕಲ್ಸ್'. ಈ ಚಿತ್ರದ ಫಸ್ಟ್ ಲುಕ್ ಇತ್ತೀಚೆಗೆ ಮುಂಬೈನಲ್ಲಿ ಬಿಡುಗಡೆಯಾಯಿತು.


ಇನ್ನು ಚಿತ್ರದ ಪೋಸ್ಟರ್ ಗಳು ಯುವ ಜನಾಂಗದ ಅಭಿರುಚಿಗೆ ತಕ್ಕಂತಿವೆ. ತ್ರಿಪಾತ್ರಾಭಿನಯದ ಕ್ಯಾರೆಕ್ಟರ್ ಗಳ ಮೂಲಕ ಚಿತ್ರವನ್ನು ಭಿನ್ನವಾಗಿ ತೆರೆಗೆ ತರಲಾಗುತ್ತಿದೆ. ಸಾಜಿದ್ ಖಾನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಬಿಪಾಶಾ ಬಸು, ತಮನ್ನಾ ಹಾಗೂ ಇಷಾ ಗುಪ್ತಾ ಅಭಿನಯಿಸಿದ್ದಾರೆ.

ಈ ಚಿತ್ರದಲ್ಲಿ ಒಟ್ಟು ಒಂಭತ್ತು ಪಾತ್ರಗಳಿವೆ. ತಲಾ ಮೂರು ಪಾತ್ರಗಳಲ್ಲಿ ಸೈಫ್, ರಿತೇಶ್ ಕಾಣಿಸಿಕೊಳ್ಳುತ್ತಾರೆ. ಪ್ರತಿಯೊಂದು ಪಾತ್ರವೂ ಭಿನ್ನವಾಗಿರುತ್ತದಂತೆ. ಬಾಲಿವುಡ್ ನಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಪ್ರಯೋಗ ಎನ್ನುತ್ತಿದೆ ಚಿತ್ರತಂಡ. ಜೂನ್. 20ಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. (ಏಜೆನ್ಸೀಸ್)

English summary
In a hilarious scene in a song of ‘Humshakals’ that features Ritesh Deshmukh in a lady-look, the actor sported the look by wearing the skirt of his wife Genelia D’souza.
Please Wait while comments are loading...