»   » ಕರ್ನಾಟಕವನ್ನು ಕೊಳ್ಳೆ ಹೊಡೆದ ರೌಡಿ ರಾಥೋಡ್

ಕರ್ನಾಟಕವನ್ನು ಕೊಳ್ಳೆ ಹೊಡೆದ ರೌಡಿ ರಾಥೋಡ್

Posted By:
Subscribe to Filmibeat Kannada

ಆಕ್ಷನ್ ಹೀರೋ ಅಕ್ಷಯ್ ಕುಮಾರ್ ಹಾಗೂ ಜಲ ಜಲ ಜಲಜಾಕ್ಷಿ ಸೋನಾಕ್ಷಿ ಸಿನ್ಹಾ ಅಭಿನಯದ ಬಾಲಿವುಡ್ ಚಿತ್ರ 'ರೌಡಿ ರಾಥೋಡ್' ಮೊದಲ ದಿನದ ಬಾಕ್ಸಾಫೀಸ್ ಗಳಿಕೆ ಜಿಂತಾತ ಚಿತ ಚಿತ ಜಿಂತಾತತ...ಎಂದು ಚಿಂದಿಚಿಂದಿ ಚಿತ್ರಾನ್ನ ಮಾಡಿದೆ.

ಆಕ್ಷನ್ ಪ್ರಧಾನ ಚಿತ್ರವಾದ ಇದು ಬಾಕ್ಸಾಫೀಸಲ್ಲಿ ಮೊದಲ ದಿನವೇ ಭಾರತಾದ್ಯಂತ ರು.15.10 ಕೋಟಿ ಕೊಳ್ಳೆಹೊಡೆದಿದೆ. ಶುಕ್ರವಾರ ಯಾವುದೇ ರಜೆ ಇಲ್ಲದಿದ್ದರೂ ಚಿತ್ರ ಈ ಪಾಟಿ ದುಡ್ಡು ಬಾಚುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

'ರೌಡಿ ರಾಥೋಡ್' ಚಿತ್ರದ ಬಗ್ಗೆ ವಿಮರ್ಶಕರಿಂದಲೂ ಒಳ್ಳೆಯ ಮಾತುಗಳು ಕೇಳಿಬಂದಿವೆ. ಭಾರತದಾದ್ಯಂತ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಶೇ.95ರಿಂದ 100ರಷ್ಟಿದೆ ಭರ್ಜರಿ ಪ್ರದರ್ಶನ ಕಂಡಿದೆ. ಇನ್ನು ಮಲ್ಟಿಸ್ಕ್ರೀನ್‌ಗಳಲ್ಲಿ ಶೇ.55ರಿಂದ 70ರಷ್ಟು ಪ್ರದರ್ಶನ ಕಂಡಿದೆ ಎನ್ನುತ್ತವೆ ಮೂಲಗಳು.

ಬಾಕ್ಸಾಫೀಸ್ ಪಂಡಿತರ ಲೆಕ್ಕಾಚಾರವನ್ನೇ 'ರೌಡಿ ರಾಥೋಡ್' ಚಿತ್ರ ಉಲ್ಟಾಪಲ್ಟಾ ಮಾಡಿರುವುದು ಇನ್ನೊಂದು ವಿಶೇಷ. ಟ್ವಿಟ್ಟರ್ ಖಾತೆಯಲ್ಲಿ ಚಿತ್ರೋದ್ಯಮದ ವಿಶ್ಲೇಷಕ ತರನ್ ಆದರ್ಶ್, "#RowdyRathore *India* Fri 15.10 cr nett. Biggest non-holiday Friday opener. O-U-T-S-T-A-N-D-I-N-G!" ಎಂದು ಟ್ವೀಟಿಸಿದ್ದಾರೆ.

ಅವರ ಪ್ರಕಾರ, ಉತ್ತರ ಕರ್ನಾಟಕದಲ್ಲಿ ರು.10 ಲಕ್ಷ ಹಾಗೂ ಮೈಸೂರಿನಲ್ಲಿ ರು.39 ಲಕ್ಷಗಳನ್ನು 'ರೌಡಿ ರಾಥೋಡ್' ಬಾಚಿಕೊಂಡಿದೆ. ಉಳಿದಂತೆ ಮುಂಬೈ ನಗರದಲ್ಲಿ ರು.1.32 ಕೋಟಿ, ಥಾನೆಯಲ್ಲಿ ರು.80 ಲಕ್ಷ, ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ರು.3.1 ಕೋಟಿ ಗಳಿಸಿದೆ.

'ರೌಡಿ ರಾಥೋಡ್' ಚಿತ್ರ ತೆಲುಗಿನ 'ವಿಕ್ರಮಾರ್ಕುಡು' ರೀಮೇಕ್. ಇದೇ ಚಿತ್ರ ಕನ್ನಡದಲ್ಲಿ 'ಈ ಶತಮಾನದ ವೀರಮದಕರಿ' ಎಂದು ರೀಮೇಕ್ ಆಗಿತ್ತು. ಸುದೀಪ್ ಹಾಗೂ ರಾಗಿಣಿ ಮುಖ್ಯಭೂಮಿಕೆಯಲ್ಲಿದ್ದ ಈ ಚಿತ್ರದ ಜನಪ್ರಿಯ ಹಾಡು, "ಕಾಲೇಜು ಕನ್ಯೆಯರ ಬಸ್ಸು ಯಾವ್ ಸೀಟು ನೋಡು ರಷ್ಶು, ಬ್ರೇಕು ಬಿದ್ರೆ ದೊಡ್ಡ ಇಷ್ಯೂ ಹುಡುಗರಿಗೆ ಡಿಶ್ಯುಂ ಡಿಶ್ಯು....ಜಿಂತಾತ ಚಿತ ಚಿತ ಜಿಂತಾತತ..." ಪಡ್ಡೆಗಳು ಇನ್ನೂ ಮರೆತಿರಕ್ಕಿಲ್ಲ.

ಡಾನ್ಸ್ ಮಾಸ್ಟರ್ ಪ್ರಭುದೇವ ನಿರ್ದೇಶನದ ಈ ಚಿತ್ರವನ್ನು ಸಂಜಯ್ ಲೀಲಾ ಭನ್ಸಾಲಿ ನಿರ್ಮಿಸಿದ್ದಾರೆ. ಖಡಕ್ ಪೊಲೀಸ್ ಅಧಿಕಾರಿಯಾದ ಶಿವ (ಅಕ್ಷಯ್ ಕುಮಾರ್) ಹಾಗೂ ಆತನ ಪ್ರೇಯಸಿ ಪ್ರಿಯಾ (ಸೋನಾಕ್ಷಿ ಸಿನ್ಹಾ)ಸುತ್ತ ಕತೆ ಸುತ್ತುತ್ತದೆ.

ಹಂಪಿಯಲ್ಲಿ 'ರೌಡಿ ರಾಥೋಡ್' ಚಿತ್ರೀಕರಣ ನಡೆಯುವ ವೇಳೆ ಚಿತ್ರಕ್ಕೆ ತೀವ್ರ ವಿರೋಧವೂ ವ್ಯಕ್ತವಾಗಿತ್ತು. ಸ್ಥಳೀಯ ಪ್ರತಿಭೆಗಳಿಗೆ ಚಿತ್ರದಲ್ಲಿ ಅವಕಾಶ ನೀಡಿಲ್ಲ. ಪುರಾತತ್ವ ಇಲಾಖೆಯ ನೀತಿ ನಿಯಮಗಳನ್ನು ಗಾಳಿಗೆ ತೂರಿ ಚಿತ್ರೀಕರಣ ನಡೆಸಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಅದೆಲ್ಲಾ ಈಗ ಮುಗಿದ ಕತೆ.(ಏಜೆನ್ಸೀಸ್)

English summary
Director Prabhu Deva's latest Bollywood movie Rowdy Rathore, which features Akshay Kumar and Sonakshi Sinha in the leads, has done wonders at the Box Office on the first day. The action thriller has raked in Rs 15.10 crores nett at the collection centres across India. With this, it has become the biggest non-holiday Friday opener.
Please Wait while comments are loading...