For Quick Alerts
  ALLOW NOTIFICATIONS  
  For Daily Alerts

  'ಆರ್ ಆರ್ ಆರ್' ಸಿನಿಮಾದ ಎರಡನೇ ನಾಯಕಿಗೆ ಪೈಪೋಟಿ: ಶ್ರದ್ಧಾ-ಪರಿಣೀತಿ ಯಾರಿಗೆ ಅವಕಾಶ?

  |

  ಟಾಲಿವುಡ್ ನ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ 'ಆರ್ ಆರ್ ಆರ್' ಸಿನಿಮಾದ ಚಿತ್ರೀಕರಣ ಈಗಾಗಲೆ ಪ್ರಾರಂಭವಾಗಿದೆ. ಟಾಲಿವುಡ್ ನ ಸ್ಟಾರ್ ನಟರಾದ ರಾಮ್ ಚರಣ್ ಮತ್ತು ಜ್ಯೂ. ಎನ್ ಟಿ ಆರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾ ಟಾಲಿವುಡ್ ಮಾತ್ರವಲ್ಲದೇ ಇಡೀ ದೇಶದಾದ್ಯಂತ ಸದ್ದು ಮಾಡುತ್ತಿದೆ.

  ರಾಜಮೌಳಿ ಸಿನಿಮಾ ಅನೌನ್ಸ್ ಮಾಡುತ್ತಿದಂತೆ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆಗಳು ಪ್ರಾರಂಭವಾಗಿತ್ತು. ಚಿತ್ರದ ಕತೆ, ನಾಯಕಿ ವಿಚಾರವಾಗಿ ಸಿನಿಪ್ರಿಯರು ಭಾರಿ ತಲೆಕೆಡಿಸಿಕೊಂಡಿದ್ದರು. ಆದ್ರೆ ಇತ್ತೀಚಿಗಷ್ಟೆ ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿ ಹೊರಹಾಕುವ ಮೂಲಕ ಎಲ್ಲಾ ಕುತೂಹಲಕ್ಕೆ ತೆರೆ ಎಳೆದಿತ್ತು ಚಿತ್ರತಂಡ.

  ಶ್ರದ್ಧಾ ಕಪೂರ್ ಮದುವೆ ವದಂತಿ ಬಗ್ಗೆ ಗರಂ ಆದ ಶಕ್ತಿ ಕಪೂರ್

  ಆದ್ರೀಗ ಚಿತ್ರದ ಎರಡನೇ ನಾಯಕಿ ವಿಚಾರ ಭಾರಿ ಚರ್ಚೆಯಾಗುತ್ತಿದೆ. 'ಆರ್ ಆರ್ ಆರ್' ಸಿನಿಮಾದ ಎರಡನೇ ನಾಯಕಿ ಪಟ್ಟಕ್ಕೆ ಬಾಲಿವುಡ್ ನ ಶ್ರದ್ಧಾ ಕಪೂರ್ ಮತ್ತು ಪರಿಣೀತಿ ಚೋಪ್ರ ನಡುವೆ ಪೈಪೋಟಿ ಏರ್ಪಟ್ಟಿದಿಯಂತೆ. ಈ ಮೊದಲು ನಾಯಕಿಯ ಹೆಸರಲ್ಲಿ ಶ್ರದ್ಧಾ ಮತ್ತು ಪರಣೀತಿ ಹೆಸರು ಕೇಳಿ ಬರುತ್ತಿತ್ತು. ಆದ್ರೀಗ ಎರಡನೇ ನಾಯಕಿಯಾಗಿ ಈ ಇಬ್ಬರಲ್ಲಿ ಒಬ್ಬರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

  ಈಗಾಗಲೆ ಚಿತ್ರದ ಮೊದಲ ನಾಯಕಿಯಾಗಿ ಬಾಲಿವುಡ್ ನಟಿ ಅಲಿಯಾ ಭಟ್ ಆಯ್ಕೆಯಾಗಿದ್ದಾರೆ. ಮತ್ತೋರ್ವ ನಾಯಕಿ ಸ್ಥಾನವನ್ನು ಬಾಲಿವುಡ್ ನಟಿಗೆ ನೀಡಲು ಮುಂದಾಗಿದ್ದಾರೆ ರಾಜಮೌಳಿ. ಇನ್ನು ವಿಶೇಷ ಅಂದ್ರೆ ಎರಡನೇ ನಾಯಕಿಗೋಸ್ಕರ ಸ್ಕ್ರಿಪ್ಟ್ ನಲ್ಲಿ ಸ್ವಲ್ಪ ಬದಲಾವಣೆ ಕೂಡ ಮಾಡಿಕೊಳ್ಳುತ್ತಿದ್ದಾರಂತೆ ನಿರ್ದೇಶಕರು. ಒಟ್ನಲ್ಲಿ ಒಂದಲ್ಲೊಂದು ವಿಚಾರದ ಮೂಲಕ ಸದ್ದು ಸುದ್ದಿ ಮಾಡುತ್ತಿರುವ 'ಆರ್ ಆರ್ ಆರ್' ನಲ್ಲಿ ಇನ್ಯಾವೆಲ್ಲಾ ಅಚ್ಚರಿಕರ ಅಂಶಗಳು ಅಡಗಿದಿಯೊ ಕಾದು ನೋಡಬೇಕು.

  English summary
  Tollywood 'RRR' movie a second female lead Bollywood actress Parineeti Chopra and Shraddha Kapoor are still in the running for the film. The makers have decided to change the script to suit second heroine.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X