For Quick Alerts
  ALLOW NOTIFICATIONS  
  For Daily Alerts

  ಕತ್ರಿನಾ ಮದುವೆಗೆ 1 ಲಕ್ಷ ರು ಮೌಲ್ಯದ ಸಾವಯವ ಗೋರಂಟಿ!

  |

  ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆ ಸುದ್ದಿ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಪ್ರತಿ ನಿತ್ಯ ಇವರ ಮದುವೆ ಕುರಿತಾಗಿ ಒಂದಲ್ಲಾ ಒಂದು ವಿಚಾರಗಳು ಹೊರ ಬರುತ್ತಲಿವೆ. ಡಿಸೆಂಬರ್‌ನಲ್ಲಿ ಈ ಜೋಡಿ ಮದುವೆ ಆಗಲಿದೆ ಎನ್ನುವುದು ಬಹುತೇಕ ಖಚಿತ ಆದಂತಿದೆ.

  ಇವರ ಮದುವೆಯಲ್ಲಿ ಮೊಬೈಲ್ ಫೋನ್‌ಗಳನ್ನ ಬ್ಯಾನ್ ಮಾಡಲಾಗಿದೆ ಎನ್ನುವುದು ಸುದ್ದಿ ಆಗಿತ್ತು. ಮದುವೆಗೆ ಬರುವ ಗಣ್ಯಾತಿಗಣ್ಯ ಅತಿಥಿಗಳು ಕೂಡ ತಮ್ಮ ಮೊಬೈಲ್‌ ಫೋನ್‌ಗಳನ್ನು ಮದುವೆ ಸಮಾರಂಭಕ್ಕೆ ತರುವಂತಿಲ್ಲ ಎನ್ನಲಾಗಿತ್ತು.

  ಈಗ ಮತ್ತೊಂದು ಕುತೂಹಲಕಾರಿ ಸಂಗತಿ ಹೊರ ಬಿದ್ದಿದೆ. ಈ ಜೋಡಿಯ ಮದುವೆ ಮೆಹೆಂದಿ ಕಾರ್ಯಕ್ರಮದ ಬಗ್ಗೆ ಹೊಸ ಸುದ್ದಿ ಬಂದಿದೆ.

  ಕತ್ರಿನಾ-ವಿಕ್ಕಿ ಮದುವೆಗೆ 1 ಲಕ್ಷ ಮೌಲ್ಯದ ಮೆಹೆಂದಿ ಬಳಕೆ!

  ಕತ್ರಿನಾ-ವಿಕ್ಕಿ ಮದುವೆಗೆ 1 ಲಕ್ಷ ಮೌಲ್ಯದ ಮೆಹೆಂದಿ ಬಳಕೆ!

  ಕತ್ರಿನಾ ಮತ್ತು ವಿಕ್ಕಿ ತಮ್ಮ ಮದುವೆಯ ಪ್ರತಿ ಕಾರ್ಯಗಳಲ್ಲೂ ವಿಶೇಷತೆ ಹೊಂದಿದ್ದಾರೆ. ಅವರ ಮದುವೆಗೂ ಮುನ್ನ ನಡೆಯುವ ಮೆಹೆಂದಿ ಶಾಸ್ತ್ರದ ಕುರಿತು ಹೊಸ ಸುದ್ದಿ ಬಂದಿದೆ. ಈ ಜೋಡಿಯ ಮೆಹೆಂದಿ ಶಾಸ್ತ್ರದಲ್ಲಿ ಬಳಸಲಾಗುವ ಮೆಹೆಂದಿ ಒಂದು ಲಕ್ಷ ಮೌಲ್ಯ ಉಳ್ಳದ್ದಾಗಿದೆ ಅಂತೆ. ಕೇವಲ ಗೋರಂಟಿ ಬೆಲೆಯೇ ಇಷ್ಟಾದರೆ ಇನ್ನೂ ಮದುವೆ ಎಷ್ಟು ಅದ್ದೂರಿ ಎಂದು ಊಹಿಸಿ ಕೊಳ್ಳಿ.

  ಸಾವಯವ ಮೆಹೆಂದಿ ಮೊರೆ ಹೋದ ಕತ್ರಿನಾ-ವಿಕ್ಕಿ!

  ಸಾವಯವ ಮೆಹೆಂದಿ ಮೊರೆ ಹೋದ ಕತ್ರಿನಾ-ವಿಕ್ಕಿ!

  ಈ ಜೋಡಿ ತಮ್ಮ ಮದುವೆ ಮೆಹೆಂದಿ ಕಾರ್ಯಕ್ರಮಕ್ಕೆ ಅಂತಿಂತ ಗೋರಂಟಿ ಆಯ್ಕೆ ಮಾಡಿಕೊಂಡಿಲ್ಲ. ಬದಲಿಗೆ ಇವರು ಆಯ್ಕೆ ಮಾಡಿಕೊಂಡಿರುವುದು ರಾಜಸ್ಥಾನದ ವಿಶೇಷ ' ಸೋಜತ್' ಮೆಹೆಂದಿ. ಈ ಸೋಜತ್ ಗೋರಂಟಿಗೆ ತನ್ನದೆ ಆದ ಪ್ರಮುಖ್ಯತೆ ಇದೆ. ಇದರ ತಯಾರಿಕೆ ಕೂಡ ತುಂಬಾ ವಿಶೇಷವಾಗಿರುತ್ತದೆ. ಈ ಗೋರಂಟಿ ತಯಾರಿಕೆಯಲ್ಲಿ ಯಾವುದೇ ರೀತಿಯ ರಾಸಾನಿಯಕಗಳನ್ನು ಬಳಸುವುದಿಲ್ಲ. ಇದನ್ನು ನೈಸರ್ಗಿಕವಾಗಿ ತಯಾರು ಮಾಡಲಾಗುತ್ತದೆ. ಹಾಗಾಗಿ ಈ ಗೋರಂಟಿಗೆ ಹೆಚ್ಚಿನ ಬೆಲೆ ಮತ್ತು ಬೇಡಿಕೆ.

  ಈ ಗೋರಂಟಿ ರಾಜಸ್ಥಾನದಲ್ಲಿ ಜನಪ್ರಿಯ. ಹಾಗಾಗಿ ಅಲ್ಲಿಂದಲೇ ಈ ಗೋರಂಟಿ ತಯಾರಾಗಿ ಬರಲಿದೆ. ಇನ್ನು ಸೋಜತ್ ಕುಶಲಕರ್ಮಿಗಳು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆಗೆ ಮೆಹೆಂದಿಯನ್ನು ಸಿದ್ಧಪಡಿಸುತ್ತಿದ್ದಾರೆ. ಈ ಮೆಹೆಂದಿ ಸಮಾರಂಭಕ್ಕೆ 50,000 ರಿಂದ 1 ಲಕ್ಷ ರೂಪಾಯಿ ತಗುಲುತ್ತದೆ. ಆದರೆ ಮಾರಾಟಗಾರರು ಮಾತ್ರ ಯಾವುದೇ ರೀತಿಯ ಶುಲ್ಕ ವಿಧಿಸಿಲ್ಲ ಎಂದು ವರದಿ ಆಗಿದೆ. ಈ ಬಾಲಿವುಡ್ ತಾರೆಯರ ಅಭಿಮಾನಿಗಳು ಅಲ್ಲಿರುವುದರಿಂದ ಒಂದು ರೂಪಾಯಿಯನ್ನು ವಿಧಿಸಿಲ್ಲವಂತೆ.

  ಮೊಬೈಲ್‌ ನಿಷೇಧದ ಬಳಿಕ, ಮೆಹೆಂದಿ ಸುದ್ದಿ!

  ಮೊಬೈಲ್‌ ನಿಷೇಧದ ಬಳಿಕ, ಮೆಹೆಂದಿ ಸುದ್ದಿ!

  ಕತ್ರಿನಾ ಮತ್ತು ವಿಕ್ಕಿ ಮದುವೆ ಆಗುತ್ತಾರೆ ಎನ್ನು ಸುದ್ದಿಗಳು ಜೋರಾಗಿದ್ದರು, ಈ ಜೋಡಿಗಳು ಮಾತ್ರ ತಮ್ಮ ಮದುವೆ ಬಗ್ಗೆ ಯಾವುದೇ ರೀತಿಯ ಸುಳಿವು ಬಿಟ್ಟು ಕೊಟ್ಟಿಲ್ಲ. ಆದರೆ ಅವರ ಮದುವೆಯ ಪ್ರತಿ ತಯಾರಿ ಬಗ್ಗೆ ಸಾಕಷ್ಟು ಮಾಹಿತಿಗಳು ಊಹ ಪೂಹದ ರೂಪದಲ್ಲಿ ಹರಿದಾಡುತ್ತಲಿವೆ. ಇತ್ತೀಚೆಗೆ ಅತಿಥಿಗಳು ಅವರ ಮದುಗೆ ಸಮಾರಂಭಕ್ಕೆ ಮೊಬೈಲ್‌ ತೆಗೆದುಕೊಂಡು ಹೋಗುವಂತೆ ಇಲ್ಲ ಎನ್ನುವ ಸುದ್ದಿ ಬಂದಿತ್ತು. ಈಗ ಮೆಹೆಂದಿ ಕಾರ್ಯಕ್ರಮದ ಬಗ್ಗೆ ಸುದ್ದಿಗಳು ಹರಿದಾಡುತ್ತಲಿವೆ.

  ಡಿಸೆಂಬರ್ 7,8,9 ವಿಕ್ಕಿ- ಕ್ಯಾಟ್ ಮದುವೆಗೆ ಸಾಕ್ಷಿ ಆಗಲಿದೆಯಾ?

  ಡಿಸೆಂಬರ್ 7,8,9 ವಿಕ್ಕಿ- ಕ್ಯಾಟ್ ಮದುವೆಗೆ ಸಾಕ್ಷಿ ಆಗಲಿದೆಯಾ?

  ಕತ್ರಿನಾ ಮತ್ತು ವಿಕ್ಕಿ ಮದುವೆ ಇದೇ ವರ್ಷ ಡಿಸೆಂಬರ್ 7, 8 ಮತ್ತು 9ನೇ ತಾರೀಖಿನಂದು ನಡೆಯಲಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಬಾಲಿವುಡ್‌ನ ಈ ದೊಡ್ಡ ಮದುವೆ ಬಗ್ಗೆ ಸಾಕಷ್ಟು ಸುದ್ದಿಗಳು ಹಬ್ಬುತ್ತಲೇ ಇವೆ. ಒಟ್ಟಾರೆ ಈ ತಾರಾ ಜೋಡಿಯ ಮದುವೆ ಎಷ್ಟು ಅದ್ದೂರಿ ಆಗಿ ಇರಲಿದೆ ಎನ್ನುವುದನ್ನು ಸದ್ಯ ಹರಿದಾಡುತ್ತಿರುವ ಸುದ್ದಿಗಳು ಹೇಳುತ್ತಿವೆ. ಇನ್ನೇನು ಇವರ ಮದುವೆ ದಿನಾಂಕಕ್ಕೆ ಒಂದೇ ವಾರ ಬಾಕಿ ಇದೆ. ಅಲ್ಲಿ ತನಕ ಕಾಯ ಬೇಕು ಅಷ್ಟೆ.

  English summary
  Rs 1 Lakh Worth Henna For Katrina Kaif And Vicky Kaushal's Mehendi Ceremony, know more

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X