For Quick Alerts
  ALLOW NOTIFICATIONS  
  For Daily Alerts

  ಫರ್ಹಾನ್ ಅಖ್ತರ್ 'ತೂಫಾನ್' ನೋಡಿ ವಿಮರ್ಶೆ ಮಾಡಿದ ಸಚಿನ್ ತೆಂಡೂಲ್ಕರ್

  |

  ಕ್ರಿಕೆಟ್ ಜಗತ್ತಿನ ದೇವರೆಂದೆ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ನಡುವೆಯೂ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡುತ್ತಿರುತ್ತಾರೆ. ಆದರೆ ತಾವು ನೋಡಿದ ಸಿನಿಮಾಗಳ ಸಾಮಾಜಿಕ ಜಾಲತಾಣಗಳ ಮೂಲಕ ವಿಮರ್ಶೆ ಮಾಡುವುದು ತೀರ ಅಪರೂಪ. ಆದರೆ ಇತ್ತೀಚಿಗೆ ಸಚಿನ್ ತಾನು ನೋಡಿದ ಸಿನಿಮಾಗೆ ಫಿದಾ ಆಗಿದ್ದು ಚಿಕ್ಕದಾಗಿ ವಿಮರ್ಶೆ ಸಹ ಮಾಡಿದ್ದಾರೆ.

  ಗಾಡ್ ಆಫ್ ಕ್ರಿಕೆಟ್ ಸಚಿನ್ ಬಾಲಿವುಡ್‌ನ ಖ್ಯಾತ ನಟ ಫರ್ಹಾನ್ ಅಖ್ತರ್ ನಟನೆಯ ತೂಫಾನ್ ಸಿನಿಮಾ ನೋಡಿ ಫಿದಾ ಆಗಿದ್ದಾರೆ. ಫರ್ಹಾನ್ ಅಖ್ತರ್ ನಟನೆಗೆ ಸಚಿನ್ ಮನಸೋತಿದ್ದಾರೆ. ಈ ಬಗ್ಗೆ ತೆಂಡೂಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಸಚಿನ್ ಸಿನಿಮಾ ಪ್ರೀತಿಗೆ ಸಿನಿ ಅಭಿಮಾನಿಗಳು ಫಿದಾ ಆಗಿದ್ದಾರೆ.

  ಅಂದಹಾಗೆ ತೂಫಾನ್ ಸಿನಿಮಾಗೆ ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೀಗ ಸಚಿನ್ ಕೂಡ ಮೆಚ್ಚಿ ಹಾಡಿ ಹೊಗಳಿರುವುದು ಚಿತ್ರತಂಡದ ಸಂತಸವನ್ನು ಮತ್ತಷ್ಟು ಹೆಚ್ಚಿಸಿದೆ. ಫರ್ಹಾನ್ ಅಖ್ತರ್, ನಟಿ ಮೃಣಾಲ್ ಠಾಕೂರ್, ಪರೇಶ್ ರಾವಲ್ ಪ್ರತಿಯೊಬ್ಬರ ಪಾತ್ರವನ್ನು ಸಚಿನ್ ಮೆಚ್ಚಿಕೊಂಡಿದ್ದಾರೆ.

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸಚಿನ್, "ಪರೇಶ್ ರಾವಲ್, ಫರ್ಹಾನ್ ಅಖ್ತರ್, ಮೃಣಾಲ್ ಠಾಕೂರ್ ಮತ್ತು ತೂಫಾನ್ ನ ಸಂಪೂರ್ಣ ಪಾತ್ರವರ್ಗ ಅದ್ಭುತವಾಗಿ ನಟಿಸಿದ್ದಾರೆ. ನೋಡಿ ನೋಡಿ ತುಂಬಾ ಎಂಜಾಯ್ ಮಾಡಿದೆ. ಶಕ್ತಿಯನ್ನು ರಚನಾತ್ಮಕವಾಗಿ ಬಳಸುವ ಮೂಲಕ ಒಬ್ಬ ವ್ಯಕ್ತಿ ಶ್ರೇಷ್ಠತೆಯನ್ನು ಹೇಗೆ ಸಾಧಿಸಬಹುದು ಎಂಬುದನ್ನು ತೋರಿಸುತ್ತದೆ. ಫರ್ಹಾನ್ ಈ ಪಾತ್ರಕ್ಕಾಗಿ ಹಾಕಿರುವ ಕಠಿಣ ಶ್ರಮ ಮತ್ತು ತರಬೇತಿ ಸ್ಪಷ್ಟವಾಗಿ ಕಾಣುತ್ತಿದೆ" ಎಂದು ಹೇಳಿದ್ದಾರೆ.

  ತೂಫಾನ್ ಸಿನಿಮಾ ಜುಲೈ 16ಕ್ಕೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿದೆ. ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಠಿಣ ತರಬೇತಿ ಮತ್ತು ಬಾಕ್ಸರ್ ಆಗಿ ಬದಲಾಗಲು ಫರ್ಹಾನ್ ಹಾಕಿದ ಶ್ರಮ ಚಿತ್ರದಲ್ಲಿ ಎದ್ದು ಕಾಣುತ್ತಿದೆ. ಅಂದಹಾಗೆ ಫರ್ಹಾನ್ ಅಜೀಜ್ ಅಲಿ ಎನ್ನುವ ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ಮೃಣಾಲ್ ಠಾಕೂರ್, ಅನನ್ಯಾ ಎನ್ನುವ ವೈದ್ಯೆಯ ಪಾತ್ರದಲ್ಲಿ ನಟಿಸಿದ್ದಾರೆ.

  ಹೆಣ್ಣುಮಕ್ಕಳು ಬಂದ್ರೆ ಈ ತರ ಶರಣಾಗ್ತಾರೆ ಡಿ ಬಾಸ್

  ಸಿನಿಮಾದಲ್ಲಿ ಫರ್ಹಾನ್ 3 ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದು, 3 ಶೇಡ್ ಗಾಗಿ ತೂಕ ಹೆಚ್ಚಿಸಿದ್ದಾರೆ. ಇತ್ತೀಚಿಗೆ ಫರ್ಹಾನ್ ಪಾತ್ರಕ್ಕಾಗಿ ದೇಹ ಪರಿವರ್ತನೆ ಮಾಡಿದ ಫೋಟೋಗಳನ್ನು ಹಂಚಿಕೊಂಡಿದ್ದರು. ಫರ್ಹಾನ್ ಲುಕ್ ಅಭಿಮಾನಿಗಳನ್ನು ಅಚ್ಚರಿ ಮೂಡಿಸುತ್ತದೆ. ಇದೀಗ ಸಚಿನ್ ಕೂಡ ಫಿದಾ ಆಗಿದ್ದಾರೆ.

  English summary
  Sachin Tendulkar wrote the review of Farhan Akhtar starrer Toofaan movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X